ಶಿವಪ್ರಸಾದ್ 4ನೇ ವರ್ಷದ ಪುಣಸ್ಮರಣೆ

ತುಮಕೂರು, ಜು. ೨೭- ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ದಿವಂಗತ ಡಾ.ಶಿವಪ್ರಸಾದ್‌ರವರ ೪ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಸಿದ್ಧಾರ್ಥ ನಗರದಲ್ಲಿ ನಡೆಯಿತು.
ಬೌದ್ಧ ಭಿಕ್ಖು ಮಹಾಸಂಘದ ಬಂತೇಜಿ ಮತ್ತು ಸಹಸದಸ್ಯರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿ. ಡಾ. ಶಿವಪ್ರಸಾದ್ ರವರ ೪ನೇ ವರ್ಷದ ಪುಣ್ಯಸ್ಮರಣೆಯನ್ನು ಬೌದ್ಧ ಬಿಕ್ಕುಗಳಿಂದ ಪುಣ್ಯಾನುಮೋದನಾ ಸ್ಮರಣೆ ಮತ್ತು ನುಡಿ ನಮನವನ್ನು ಸಲ್ಲಿಸಲಾಯಿತು.
ಡಾ. ಜಿ. ಶಿವಪ್ರಸಾದ್‌ರವರ ಸಮಾಧಿಗೆ ಪೂಜೆ ಮಾಡಿ ಪುಷ್ಪಮಾಲೆ ಸಲ್ಲಿಸುವ ಮೂಲಕ ಧಾರ್ಮಿಕ ಕೈಂಕರ್ಯಗಳನ್ನು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಜಿ. ಪರಮೇಶ್ವರ ಹಾಗೂ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದ್ಯಸರಾದ ಕನ್ನಿಕಾ ಪರಮೇಶ್ವರ, ಡಾ. ಆನಂದ್ ಮತ್ತು ಕುಟುಂಬ ಸದ್ಯಸರು ಅವರು ಬೌದ್ದ ಸಂಪ್ರದಾಯದ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಸುಶೀಲ್ ಚಂದ್ರ ಮಹಾಪಾತ್ರ, ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ, ಸಾಹೇ ವಿಶ್ವವಿದ್ಯಾಲಯದ ಸಿಬ್ಬಂದಿ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ, ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಬೋಧಕ-ಬೋಧಕೇತರ ವರ್ಗ ಸೇರಿದಂತೆ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ಅಧ್ಯಾಪಕರು, ಪ್ರಾಥಮಿಕ ಮತ್ತು ಫ್ರೌಢಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಭಾಗವಹಿಸಿದ್ದರು.