ಶಿವಪುರ  ಗ್ರಾ ಪಂ : ಲಕ್ಷ್ಮೀಬಾಯಿ ಅಧ್ಯಕ್ಷೆ, ಯು.ಚಂದ್ರಪ್ಪ ಉಪಾಧ್ಯಕ್ಷ ಅವಿರೋಧ  ಆಯ್ಕೆ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ  3 :- ಶಿವಪುರ   ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಿಗಧಿಪಡಿಸಿದ  ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಂಡೆ ಬಸಾಪುರತಾಂಡಾದ ಲಕ್ಷ್ಮೀಬಾಯಿ ವೆಂಕಟೇಶನಾಯ್ಕ್   ಹಾಗೂ  ಉಪಾಧ್ಯಕ್ಷರಾಗಿ ಶಿವಪುರದ ಉಪ್ಪಾರ ಚಂದ್ರಪ್ಪ   ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗ್ರಾಮಪಂಚಾಯಿತಿ ಚುನಾವಣಾಧಿಕಾರಿಯಾಗಿರುವ ಕೂಡ್ಲಿಗಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಪ್ರಸನ್ನ   ಘೋಷಿಸಿದ್ದಾರೆ.
ಇಂದು ಬೆಳಿಗ್ಗೆ 10ಗಂಟೆಯಿಂದ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಒಟ್ಟು   23 ಸದಸ್ಯರ ಬಲಾಬಲ ಹೊಂದಿರುವ ಶಿವಪುರ  ಗ್ರಾಮಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನಕ್ಕೆ ಅನುಸೂಚಿತ  ಜಾತಿ ಮಹಿಳೆ ಮೀಸಲಾತಿಯಂತೆ  ಬಂಡೆ ಬಸಾಪುರತಾಂಡದ  ಲಕ್ಷ್ಮೀಬಾಯಿವೆಂಕಟೇಶನಾಯ್ಕ್  ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದು ಹಾಗೂ ಸಾಮಾನ್ಯ ಮೀಸಲು ಉಪಾಧ್ಯಕ್ಷ ಸ್ಥಾನಕ್ಕೆ ಉಪ್ಪಾರ  ಚಂದ್ರಪ್ಪ   ಅವರು ಮಾತ್ರ  ನಾಮಪತ್ರ ಸಲ್ಲಿಸಿದ್ದರಿಂದ  ಇಬ್ಬರ  ಆಯ್ಕೆಯನ್ನು ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ ಘೋಷಿಸಿದ್ದಾರೆ.
ಒಟ್ಟು 23ಸದಸ್ಯರಲ್ಲಿ  16ಸದಸ್ಯರು ಹಾಜರಿದ್ದು 7ಸದಸ್ಯರು ಗೈರಾಗಿದ್ದರು  ಎಂದು ತಿಳಿದಿದೆ.
ಶಿವಪುರ  ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ  ಮತ್ತು ಸಿಬ್ಬಂದಿ ಇತರರು ಉಪಸ್ಥಿತರಿದ್ದರು.ಕೂಡ್ಲಿಗಿ ಪೊಲೀಸರು ಯಾವುದೇ ಅಹಿತಕರ ಘಟನೆ ಜರುಗದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು

One attachment • Scanned by Gmail