
ಭಾಲ್ಕಿ:ಮಾ.14: 58ನೇ ದಿನದ ಮನೆಗೊಂದು ಅನುಭವ ಮಂಟಪ ಕಾರ್ಯಕ್ರಮ ಶ್ರೀಮತಿ ಉಮಾದೇವಿ ಶಿವಕುಮಾರ ಸಾವಳೆ ಚನ್ನಬಸವ ಮಹಾಮನೆ ದತ್ತಾತ್ರಿ ನಗರ ಗುರು ಕಾಲೋನಿ ಗಂಜ ಭಾಲ್ಕಿಯಲ್ಲಿ ಜರುಗಿತು. ಕಾರ್ಯಕ್ರಮ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದೇವರು ದಿವ್ಯ ಸಾನಿಧ್ಯದಲ್ಲಿ, ಪೂಜ್ಯ ಶ್ರೀ ಗುರುಬಸವ ಪಟ್ಟದೇವರು
ಹಿರೇಮಠ ಸಂಸ್ಥಾನ ಭಾಲ್ಕಿ ಅವರ ಮಾರ್ಗದರ್ಶನದಲ್ಲಿ ಹಾಗೂ ಪೂಜ್ಯ ಶ್ರೀ ಮಹಾಲಿಂಗ ದೇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಶ್ರೀಗಳು ಆಶೀರ್ವಚನ ನೀಡಿದರು. ಬಸವರಾಜ ಮರೆ ಸ್ವಾಗತಿಸಿದರು. ಸಾವಳೆ ಪರಿವಾರದವರು ಗುರು ಬಸವ ಪೂಜೆ ನೆರವೇರಿಸಿದರು. ಕುಮಾರಸ್ವಾಮಿಗಳು ಉಚ್ಚ ಭಾಲ್ಕಿ ಗುರುದರ್ಶನ ಭಾಗ್ಯ ಎನ್ನುವ ವಿಷಯದ ಕುರಿತು ಅನುಭಾವ ಹೇಳಿದರು. ಮಡಿಕೆಯ ಮಾಡುವಡೆ ಮಣ್ಣೆ ಮೊದಲು,
ತೋಡುಗೆಯ ಮಾಡುವದೇ ಹೊನ್ನೆ ಮೊದಲು,
ಶಿವಪಥವನರಿವಡೆ ಗುರುಪಥವೆ ಮೊದಲು ಎನ್ನುವ ಮಾತಿನಂತೆ,
ಒಬ್ಬ ಕುಂಬಾರ ಮಡಿಕೆಯನ್ನು ಮಾಡಲು ಆತನಿಗೆ ಬೇಕಾದದ್ದು ಮಣ್ಣು, ಅದು ಬರೀ ಮಣ್ಣಲ್ಲ ಒಳ್ಳೆಯ ಮಣ್ಣು, ಹೊಲಸು ತುಂಬಿದ ಮಣ್ಣಲ್ಲ, ಮಡಿಕೆ ಮಾಡಲು ಬೇಕಾದ ಗುಣವನ್ನು ಹೊಂದಿದ ಮಣ್ಣು ಬೇಕು. ಆ ಮಣ್ಣು ಇಲ್ಲದೆ ಎಂಥಾ ಕುಂಬಾರರು ಮಡಿಕೆ ಮಾಡಲು ಸಾಧ್ಯವಿಲ್ಲ. ಅದೇ ರೀತಿ ಒಬ್ಬ ಅಕ್ಕಸಾಲಿಗ ಒಂದು ಆಭರಣವನ್ನು ಮಾಡಲು ಆತನಿಗೆ ಹೊನ್ನಿನ ಅವಶ್ಯಕತೆ ಇದೆ ಹೊನ್ನಿಲ್ಲದೆ ಆಭರಣ ಮಾಡಲು ಸಾಧ್ಯವಿಲ್ಲ ಹಾಗೆಯೇ ಶಿವನನ್ನು ಕಾಣಲು ಗುರುವಿನ ಮೊರೆ ಹೋಗುವ ಅವಶ್ಯಕತೆ ಇದೆ ಎಂದು ಹೇಳಿದರು. ಗುರುವಿನ ದರ್ಶನ ದಿಂದಲೇ ಮುಕ್ತಿಯನ್ನು ಕಾಣಬಹುದು ಎಂದು ಶ್ರೀ ಕುಮಾರ ಸ್ವಾಮಿಗಳು ತಿಳಿಸಿದರು. ಬಸವ ಪ್ರಾರ್ಥನೆಯನ್ನು ಶ್ರೀದೇವಿ ಶಾಂತಯ್ಯ ಸ್ವಾಮಿ ಭಾಲ್ಕಿ ನಡೆಸಿಕೊಟ್ಟರು. ವಚನ ಪಠಣವನ್ನು ಸುಪ್ರಿಯಾ ಸಾವಳೆ ನೆರವೇರಿಸಿದರು. ಶ್ರೀ ಗುಂಡಪ್ಪ ಸಂಗಮಕರ್ ಭಾಲ್ಕಿ ನಿರೂಪಿಸಿದರು. ಚಂದ್ರಮ್ಮ ಸಾವಳೆ, ಚಂದ್ರಶೇಖರ್ ಬಿರಾದಾರ, ಮಲ್ಲಮ್ಮ ಆರ್ ಪಾಟೀಲ್,ಓಂ ಪ್ರಕಾಶ್ ಪಾಟೀಲ್ ವಕೀಲರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಂಗಲ ಹಾಗೂ ಪ್ರಸಾದ ದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ಶ್ರೀ ಶಾಂತಯ್ಯ ಸ್ವಾಮಿ ತಿಳಿಸಿದರು.