ಶಿವನ ಪುಣ್ಯಭೂಮಿ ಕಾಶಿಯನ್ನು ಪಡೆಯುವುದು ಬಾಕಿ ಇದೆ

ಮಾನ್ವಿ.ಅ.೧೭- ಹಿಂದೂಗಳು ಕೇವಲ ಶ್ರೀರಾಮನ ಜನ್ಮಭೂಮಿಯನ್ನು ಮಾತ್ರ ಪಡೆದಿದ್ದೇವೆ ಆದರೆ ಶ್ರೀಕೃಷ್ಣನ ಜನ್ಮ ಭೂಮಿ ಮಥುರ ಹಾಗೂ ಶಿವನ ಪುಣ್ಯಭೂಮಿ ಕಾಶಿಯನ್ನು ಪಡೆಯುವುದು ಇನ್ನೂ ಬಾಕಿ ಇದೆ ಗೋಪಾಲ ನಾಗರಕಟ್ಟೆ ಹೇಳಿದರು.
ಪಟ್ಟಣದ ಟಿ.ಎ.ಪಿ.ಸಿ.ಎಂ.ಎಸ್. ಆವರಣದಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ ವತಿಯಿಂದ ನಡೆದ ಬಳ್ಳಾರಿ ವಿಭಾಗದ ಶೌರ್ಯ ಜಾಗರಣ ರಥಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮದ ಅಂಗವಾಗಿ ಭಾರತ ಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿದರು.
ನಂತರ ಗೋಪಾಲ ನಾಗರಕಟ್ಟೆ ಅವರು ಮಾತಾನಾಡಿ ಶ್ರೀರಾಮ ಮಂದಿರ ಕೇವಲ ಒಂದು ಮಂದಿರವಲ್ಲ ಹಿಂದೂ ಸಮಾಜವನ್ನು ಹಾಳುಮಾಡುವ ಉದ್ದೇಶದಿಂದ ಶ್ರೀರಾಮ ಸೀತಾಮಾತೆ ಬಾಳಿದ ಹಾಗೂ ಶ್ರೀರಾಮನ ಜನ್ಮಸ್ಥಳವನ್ನು ನಾಶಮಾಡಿದರೆ ಹಿಂದೂ ಸಂಸ್ಕೃತಿಯನ್ನು ಸುಲಭವಾಗಿ ನಾಶ ಮಾಡಬಹುದು ಎನ್ನುವ ಉದ್ದೇಶವನ್ನಿಟ್ಟುಕೊಂಡು ನಾಶಮಾಡಿದ ಮಂದಿರವನ್ನು ಮರಳಿ ಅನ್ಯಧರ್ಮೀಯರಿಂದ ಪಡೆಯಲು ಕಳೆದ ಐದುನೂರು ವರ್ಷಗಳಿಂದ ಹೋರಾಟಮಾಡುತ್ತ ತಮ್ಮ ಪ್ರಾಣವನ್ನು ಅರ್ಪಿಸಿದ ದೇಶಾಭಿಮಾನಿಗಳ ಪ್ರತೀಕವಾದ ರಾಷ್ಟಮಂದಿರ ಶ್ರೀರಾಮನ ಮಂದಿರ ನಿರ್ಮಾಣ ಮಾಡಲಾಗಿದೆ ಜ.೨೫ರೋಳಗಾಗಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಂದ ಪುನರ್ ಪ್ರತಿಷ್ಟ್ಟಾಪನೆ ಕಾರ್ಯ ನಡೆಯಲಿದೆ. ಅಯೋಧ್ಯರಾಮ ಮಂದಿರ ರಾಷ್ಟಭಕ್ತರ ಭವ್ಯ ಮಂದಿರವಾಗುವಂತೆ ನಿರ್ಮಾಣವಾಗಲಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್, ತಿಮ್ಮರಡ್ಡಿ ಬೋಗವತಿ, ಶರಣಪ್ಪಗೌಡ ನಕ್ಕುಂದಿ, ಅ.ಭಾ.ವಿ.ಲಿಂ.ಮಹಾಸಭಾದ ತಾ.ಅಧ್ಯಕ್ಷ ಅರುಣಚಂದಾ, ಆನಂದ ಸ್ವಾಮಿ, ಬಸನಗೌಡ ಆಲ್ದಾಳ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.