ಶಿವನಸಮುದ್ರ ಶ್ರೀರಂಗನಾಥ ಸ್ವಾಮಿ ಸಮೂಹ ದೇವಾಲಯ ಹುಂಡಿ ಏಣಿಕೆ

ಸಂಜೆವಾಣಿ ವಾರ್ತೆ
ಕೊಳ್ಳೇಗಾಲ ಜು.29:- ತಾಲೂಕಿನ ಶಿವನಸಮುದ್ರ ಶ್ರೀರಂಗನಾಥ ಸ್ವಾಮಿ ಸಮೂಹ ದೇವಾಲಯಗಳ ಹುಂಡಿಗಳನ್ನು ದಿನಾಂಕ 27 /7 /2013 ರಂದು ಉಪ ವಿಭಾಗಾಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳ ನಿರ್ದೇಶನದಂತೆ ಎಣಿಕೆ ಕಾರ್ಯ ನಡೆಯಿತು.
ರಂಗನಾಥ ಸ್ವಾಮಿ ದೇವಾಲಯದ ಹುಂಡಿ ಏಣಿಕೆ ಕಾರ್ಯ ನಡೆದಿದ್ದು 17,72105 ದೇವಾಲದ ಹುಂಡಿ ಕಾಣಿಕೆ 1,35,000 ನಿತ್ಯ ಅನ್ನ ದಾಸೋಹದ್ದು ಒಟ್ಟ 19, 07105 = 00 ಇದರಲ್ಲಿ ಒಟ್ಟು 19 ಲಕ್ಷ ರೂ.7 ಸಾವಿರದ 105 ರೂಪಾಯಿ ಹಾಗೂ ಚಿನ್ನ 18 ಗ್ರಾಂ. ಬೆಳ್ಳಿ 20 ಗ್ರಾಂ. ಸಂಗ್ರಹವಾಗಿದೆ.
ತಾಲೂಕಿನ ಪಾಳ್ಯ ಉಪತಹಸಿಲ್ದಾರ್ ವಿಜಯಕುಮಾರ್, ಕಸಬಾ ರಾಜಸ್ವ ನಿರೀಕ್ಷಕ ನಿರಂಜನ್, ರಾಜಸ್ವ ನಿರೀಕ್ಷಕ ರಂಗಸ್ವಾಮಿ ಹಾಗೂ ದೇವಾಲಯದ ಅರ್ಚಕರಾದ ಶ್ರೀಧರ್, ಮಾಧವನ್, ಮಧುಸೂದನ್, ನಾಗರಾಜ ದೀಕ್ಷಿತ್, ಮತ್ತು ದೇವಾಲಯದ ಸಿಬ್ಬಂದಿಗಳು.
ಪಾಳ್ಯ ಮತ್ತು ಕಸಬಾ ಗ್ರಾಮ ಆಡಳಿತಾಧಿಕಾರಿಗಳು ರಾಕೇಶ್, ಪ್ರದೀಪ್, ಅನಿಲ್, ಶಾಂತರಾಜು, ಮಹದೇವಸ್ವಾಮಿ, ಕುಮಾರ್, ಪ್ರಸಾದ್ ಹಾಗೂ ಗ್ರಾಮಾಂತರ ಪೆÇಲೀಸ್ ಠಾಣೆ ಸಿಬ್ಬಂದಿಗಳು ಮತ್ತು ಕೊಟೇಶ್ ಮಹೇಂದ್ರ ಬ್ಯಾಂಕ್ ಸಿಬ್ಬಂದಿಗಳು ಇದ್ದರು