ಶಿವನನ್ನು ಅರಿಯದ ಜೀವನ ಶವದ ಸಮಾನ : ಯಮುನಾ ಅಕ್ಕಾ

(ಸಂಜೆವಾಣಿ ವಾರ್ತೆ)
ಇಂಡಿ :ಅ.11: ಆಧ್ಯಾತ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಶಿವನ ಧ್ಯಾನಕ್ಕೆ ಪ್ರತಿದಿನ ಸ್ವಲ್ಪ ಸಮಯ ನೀಡಿದಾಗ ಜೀವನ ಪಾವನವಾಗುತ್ತದೆ. ಶಿವನನ್ನು ನೆನೆದರೆ ಜೀವನದಲ್ಲಿ ಸತ್ಯದ ಮಾರ್ಗದರ್ಶನ ವಾಗುತ್ತದೆ. ಮನೆ ಬೆಳಗುವ ದೀಪಗಳಾಗುತ್ತೇವೆ, ಶಿವನನ್ನು ಅರಿಯದ ಜೀವನ ಶವದ ಸಮಾನವೆಂದು ಪ್ರಜಾಪಿತ ಬ್ರಹ್ಮಕುಮಾರಿ ವಿವಿ ಸಂಚಾಲಕಿ ಯಮುನಾ ಅಕ್ಕಾ ಹೇಳಿದರು.
ಪಟ್ಟಣದ ನೌಕರರ ಸಭಾಭವನದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಸಿದ್ಧಾರೂಢ ಮಠ ಓಂಕಾರ ಆಶ್ರಮದ ಡಾ. ಸ್ವರೂಪಾನಂದ ಶ್ರೀಗಳು ಮಾತನಾಡಿ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.ಜೀವನ ಸಾಗಿಸಬೇಕು.ಸಮಾಜಕ್ಕೆ ಏನಾದರೂ ಕೊಡುಗೆ ಕೊಡಬೇಕೆಂಬ ಸಂಕಲ್ಪದೊಂದಿಗೆ ಸನ್ಮಾರ್ಗದಲ್ಲಿ ನಡೆದರೆ ಸಮಾಜದಲ್ಲಿ ಬದಲಾವಣೆ ಸಾಧ್ಯ. ಶರಣ ಸಾಹಿತ್ಯ ಪರಿಷತ್ತು ದತ್ತಿ ಉಪನ್ಯಾಸಗಳನ್ನು ಮತ್ತು ಅಧ್ಯಾತ್ಮಿಕ ಕುರಿತು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ನಿರಂತರವಾಗಿ ಶ್ರಮಿಸುತ್ತಿದೆ. ಇದಕ್ಕೆ ಜನರ ಸಹಕಾರ ಮುಖ್ಯ ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ವಿಜಯಪುರದ ಹಿರಿಯ ಸಾಹಿತಿಗಳಾದ ಮ.ಗು.ಯಾದವಾಡ,ವಿ.ಸಿ.ನಾಗಠಾಣ, ಶಸಾಪ ಇಂಡಿ ಘಟಕದ ಹಿಂದಿನ ಅಧ್ಯಕ್ಷ ಎಂ.ಜೆ.ಪಾಟೀಲ ಜಿಲ್ಲೆಯಲ್ಲಿ ಮತ್ತು ಇಂಡಿಯಲ್ಲಿ ಶಸಾಪ ನಡೆದು ಬಂದ ದಾರಿಯ ಕುರಿತು ಮಾತನಾಡಿದರು.
ಕಸಾಪ ಇಂಡಿ ಘಟಕದ ಅಧ್ಯಕ್ಷ ಪ್ರಾಚಾರ್ಯ ರಾಘವೇಂದ್ರ ಕುಲಕರ್ಣಿ,ಬಸವರಾಜ ಗೊರನಾಳ,ಎಸ್.ಐ.ಸುಗುರ,ಎಸ್.ಎಚ್.ಎಳೆಗಾಂವ,ಎಸ್.ಎಸ್.ಈರನಕೇರಿ,ಕದಳಿ ವೇದಿಕೆ ಇಂಡಿ ಘಟಕದ ಅಧ್ಯಕ್ಷೆ ಗಂಗಾ ಗಲಗಲಿ, ಶಸಾಪ ಇಂಡಿ ಘಟಕದ ನೂತನ ಅಧ್ಯಕ್ಷ ಬಿ.ಎಸ್.ಪಾಟೀಲ ಗುರುಗಳು ಮಾತನಾಡಿದರು.
ವೇದಿಕೆಯ ಮೇಲೆ ನಿವೃತ್ತ ಪ್ರಾಚಾರ್ಯ ಐ.ಬಿ.ಸುರಪುರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟೀಲ ಇದ್ದರು.
ನೂತನ ಪದಾಧಿಕಾರಿಗಳಾಗಿ ಅಂಬಣ್ಣ ಸುಣಗಾರ, ಶಸಾಪ ನೂತನ ತಾಲೂಕಾ ಅಧ್ಯಕ್ಷರಾಗಿ ಬಿ.ಎಸ್.ಪಾಟೀಲ, ಎಚ್.ಎಸ್.ಎಳೆಗಾಂವಿ, ಆರ್.ಎಸ್.ಮೇತ್ರಿ, ಖಾಜು ಸಿಂಗಾಗೋಳ, ರಾಜಕುಮಾರ ಹೂಗಾರ, ಕೆ.ಬಿ.ನಾಟಿಕಾರ, ಸಿದ್ಧರಾಮ ಬಗಲಿ, ಪ್ರೊ. ಎಸ್.ಜಿ.ಸಣ್ಣಕ್ಕಿ , ಮಹೇಶ ಮೈದರಗಿ, ಈರಣ್ಣ ಮಾಶ್ಯಾಳ, ಶರಣು ಕಾಂಬಳೆ, ಎಸ್.ಆಯ್.ಸುಗೂರ, ಗಂಗಾ ಗಲಗಲಿ, ಶಾರದಾ ಸುರಪುರ, ಪಾರ್ವತಿ ದಳವಾಯಿ, ಬಿ.ಡಿ.ಕಾಂಬಳೆ, ಆರ್.ವಿ.ಪಾಟೀಲ ಅಧಿಕಾರ ಸ್ವೀಕರಿಸಿದರು. ಕದಳಿ ವೇದಿಕೆಯ ಉಪಾಧ್ಯಕ್ಷೆ ರಾಜೇಶ್ವರಿ ಕ್ಷತ್ರಿ , ಕಸ್ತುರಿ ಬುರಕುಲೆ,ಭಾರತಿ ಪತ್ರಿಮಠ ಮತ್ತಿತರಿದ್ದರು.