ಶಿವನಗೌಡ ಜನ್ಮದಿನ ನಿಮಿತ್ತ ರೋಗಿಗಳಿಗೆ ಹಣ್ಣುಕಂಪಲ ವಿತರಣೆ

ದೇವದುರ್ಗ.ಜು.೧೪- ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ಕೆ.ಶಿವನಗೌಡ ನಾಯಕ ಜನ್ಮದಿನ ನಿಮಿತ್ತ ಕೆ.ಶಿವನಗೌಡ ನಾಯಕ ಅಭಿಮಾನಿಗಳು ರೋಗಗಳಿಗೆ ಹಾಲು, ಹಣ್ಣು ವಿತರಣೆ ಮಾಡಿದರು.
ಬಿಜೆಪಿ ಮುಖಂಡ ಬುವಾಜಿ ಗೌರಂಪೇಟೆ ಮಾತನಾಡಿ, ಶಾಸಕ ಕೆ.ಶಿವನಗೌಡ ನಾಯಕ ದೇವದುರ್ಗ ತಾಲೂಕು ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು, ಪ್ರಗತಿಯತ್ತ ಕೊಂಡೊಯ್ಯುತ್ತಿದ್ದಾರೆ. ಹಿಂದುಳಿದ ತಾಲೂಕು ಎನ್ನುವ ಹಣೆಪಟ್ಟಿ ಅಳಿಸಲು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಿ ಸುಮಾರು ಮೂರು ಸಾವಿರ ಕೋಟಿ ರೂ. ಅನುದಾನ ತಂದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದಾರೆ.
ಪ್ರತಿಯೊಂದು ಹಳ್ಳಿ, ತಾಂಡಾ, ದೊಡ್ಡಿಗಳಿಗೆ ಸುಸಜ್ಜಿತ ರಸ್ತೆ, ಕುಡಿವ ನೀರು, ಡಾಂಬಾರ್ ರಸ್ತೆ ಸೇರಿ ಮೂಲಸೌಲಭ್ಯ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ನಾರಾಯಣಪುರ ಬಲದಂಡೆ ನಾಲೆ ಅಭಿವೃದ್ಧಿ ಹಾಗೂ ಉಪಕಾಲುವೆಗಳ ನವೀಕರಣಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಇಂದು ಅವರ ಜನ್ಮದಿನವಿದ್ದು, ಅವರು ನೂರಾರು ವರ್ಷಗಳ ಕಾಲ ಸುಖ ಜೀವನ ನಡೆಸಿ, ಜನ ಸೇವೆ ಮಾಡಲು ಇನ್ನಷ್ಟು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ, ಬಡವರು ಹಾಗೂ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಡಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವೆಂಕನಗೌಡ ಬೆನಕನ್ ಸೇರಿದಂತೆ ಇತರರಿದ್ದರು.