ಶಿವನಗೌಡ ಅನ್ನದಾನ ಮಾಡುವುದಷ್ಟೇ ಅಲ್ಲ ಶಿಕ್ಷಣ ಕೂಡ ದಾನ ಮಾಡಬೇಕು-ಗಂಗಾಧರ್ ನಾಯಕ್

ಮಾನ್ವಿ.ಜೂ.೦೭-ದೇವದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಶಿವನಗೌಡ ನಾಯಕ್ ಅವರು ಅನ್ನದಾನ ಮಾಡುವುದಷ್ಟೇ ಅಲ್ಲ ಶಿಕ್ಷಣ ಕೂಡ ದಾನ ಮಾಡಬೇಕಾಗಿದೆ ಎಂದು ಮಾಜಿ ಶಾಸಕರಾದ ಗಂಗಾಧರ್ ನಾಯಕ ಹೇಳಿದರು.
ಮಾನ್ವಿ ಪಟ್ಟಣದ ಧ್ಯಾನ ಮಂದಿರ ಆವರಣದಲ್ಲಿ ಕೆಎಸ್‌ಎನ್ ಅನ್ನ ದಾಸೋಹ ಕೇಂದ್ರದಿಂದ ಹಮ್ಮಿಕೊಂಡಿದ್ದ ಕೋವಿಡ್ ೧೯ ರೋಗದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾನ್ವಿ ಮತ್ತು ಸಿರವಾರ ತಾಲ್ಲೂಕಿನಾದ್ಯಂತ ಇರುವ ಆಸ್ಪತ್ರೆಯಲ್ಲಿನ ಕೊರೋನಾ ರೋಗಿಗಳಿಗೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ, ಪೌರಕಾರ್ಮಿಕರಿಗೆ, ಪೋಲಿಸ್ ಸಿಬ್ಬಂದಿಯವರಿಗೆ, ಬಡವರಿಗೆ, ನಿರ್ಗತಿಕರಿಗೆ, ಹಸಿದವರಿಗೆ ಊಟ ವಿತರಿಸುವ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಬಡವರಿಗೆ ಅನ್ನ ದಾಸೋಹ ಶ್ರೇಷ್ಠ ದಾಸೋಹ ಅದರ ಜೊತೆಗೇನೇ ಜಿಲ್ಲೆಯಾದ್ಯಂತ ಶಿಕ್ಷಣ ರಂಗದಲ್ಲಿ ಸಹ ತೊಡಗಿಕೊಳ್ಳಬೇಕು.ಬಡಜನರ ಮಕ್ಕಳಿಗೆ ಶಿಕ್ಷಣ ಅತಿ ಮುಖ್ಯವಾಗಿದೆ ಶಿಕ್ಷಣ ದಿಂದ ದೇಶ ಬದಲಿಸಬಹುದು ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಕ್ತಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ಸ್ವಚ್ಛತೆ ಶಿಕ್ಷಣ ನೀಡಲು ಶಿಕ್ಷಕರಿಗೆ ಸೂಚಿಸಬೇಕು ಎಂದು ಹೇಳಿದರು.
ನಂತರ ಮೆಕೋ ಕಂಪೆನಿಯ ಅಧ್ಯಕ್ಷರಾದ ಎಂ ಈರಣ್ಣ ಅವರು ಮಾತನಾಡಿ ದೇವದುರ್ಗ ಕ್ಷೇತ್ರದ ಶಾಸಕರಾದ ಕೆ ಶಿವನಗೌಡ ನಾಯಕ ಅವರ ಅನ್ನದಾಸೋಹ ಕಾರ್ಯಕ್ರಮ ಶ್ರೇಷ್ಠ ದಾನವಾಗಿದೆ ಇವರ ಸಾಮಾಜಿಕ ಕಾರ್ಯಕ್ರಮಗಳು ಹೀಗೆ ಮುಂದುವರಿಯಲಿ ಎಂದು ಹೇಳಿದರು.
ಕೆಎಸ್ ಎನ್ ಅನ್ನದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಯಚೂರು ಲೋಕಸಭಾ ಸದಸ್ಯರಾದ ರಾಜಾ ರಾಜಾ ಅಮರೇಶ್ವರ ನಾಯಕ್ ಮಾತನಾಡಿ ದೇಶವು ಸಂಕಷ್ಟ ಸ್ಥಿತಿಯಲ್ಲಿದೆ ಇಂತಹ ಸ್ಥಿತಿಯಲ್ಲಿ ಕೆ ಎಸ್ ಎನ್ ವತಿಯಿಂದ ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ರೇಷ್ಠವಾಗಿದೆ ದೇವದುರ್ಗ ಶಾಸಕರಾದ ಕೆ ಶಿವನಗೌಡ ನಾಯಕ್ ಅವರು ಇನ್ನೂ ಇಂತಹ ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳಲಿ ಅವರ ಪರಿಶ್ರಮಕ್ಕೆ ಫಲ ಸಿಗಲೆಂದು ಹೇಳಿದರು.ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ೫%ಗಿಂತ ಕಡಿಮೆ ಕೋವಿಡ್ ಪ್ರಕರಣಗಳ ಜಿಲ್ಲೆಗಳನ್ನು ಲಾಗ್ ಡೌನ್ ಸಡಿಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ ರಾಯಚೂರು ಯಾದಗಿರಿ ಜಿಲ್ಲೆಯಲ್ಲಿ ಜಿಲ್ಲೆಯಲ್ಲಿ ೧೦%ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು ಪ್ರತಿಯೊಬ್ಬರು ಸಾಮಾಜಿಕ ಅಂತರ ಮಾಸ್ಕೋ ಸ್ಯಾನಿಟೈಸರ್ ಬಳಕೆ ಮಾಡಿಕೊಂಡು ಕೋವಿಡ್ ಪ್ರಕರಣಗಳು ಕಡಿಮೆಯಾಗಲು ಸಹಕರಿಸಬೇಕು ಎಂದು ಹೇಳಿದರು.
ಕ್ರೈಸ್ತ ಧರ್ಮಗಳು ಜ್ಞಾನಪ್ರಕಾಶಂ,ಶಿವಣ್ಣತಾತ ಮುಂಡರಗಿ, ಚೀಕಲಪರ್ವಿ ಶ್ರೀಗಳು,ಜಿಶಾನ್ ಖಾದ್ರಿ ಗುರುಗಳು, ನವಲಕಲ್ ಮಠದ ಶ್ರೀಗಳು ಹಾಗೂ ಇನ್ನಿತರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ತಿಪ್ಪರಾಜ ಹವಲ್ದಾರ್, ಜಿಲ್ಲಾಧ್ಯಕ್ಷರಾದ ರಮಾನಂದ ಯಾದವ್, ತ್ರಿವಿಕ್ರಮ್ ಜೋಶಿ, ಜಾಡಲದಿನ್ನಿ ಶರಣಪ್ಪಗೌಡ,ಹಿಡಿತ ತಪ್ಪಿ ಜಾಕಿರರು ಮೈನುದ್ದಿನ್, ಡಾ.ಮಲ್ಲಿಕಾರ್ಜುನ್ ಬೊಮ್ಮನಾಳ,ಮಲ್ಲಿಕಾರ್ಜುನ ಜಕ್ಕಲದಿನ್ನಿ ತಾಲೂಕಾ ಅಧ್ಯಕ್ಷರು,ಮಹಮ್ಮದ್ ಗೌಸ್,ಅನಿಲ್ ಕುಮಾರ್ ಕೋನಾಪುರು ಪೇಟೆ, ಚಂದ್ರಕಲಾಧರ ಸ್ವಾಮಿ,ತಿಮ್ಮಯ್ಯ ಶೆಟ್ಟಿ,ಕೆ ನಾಗಲಿಂಗಸ್ವಾಮಿ, ಉಮೇಶ್ ಸಜ್ಜನ್,ಮ್ಯಾಗ್ನೆಟ್ ಅಯ್ಯಪ್ಪ ಮ್ಯಾಕಲ್, ವೀರೇಶ್ ನಾಯಕ ಬೆಟ್ಟದೂರು,ನವೀನ್ ನಾಡಗೌಡ ಪೋತ್ನಾಳ,ಭಾಸ್ಕರ್ ಜಗ್ಲಿ, ಚಂದ್ರು ಜಾನೇಕಲ್, ನರಸಪ್ಪ ಜೂಕೂರು, ಮುತ್ತಣ್ಣ ಚಾಗಬಾವಿ,ಭೀಮೇಶ್ ಹರಿವಿ, ವೆಂಕಟೇಶ್ ಆಲ್ದಾಳ,ಅರುಣ್ ಚಂದ ಉಪಸ್ಥಿತರು ಇದ್ದರು.