ಶಿವನಗೌಡರಿಂದ ಮೊಹರಂ ಆಚರಣೆಗೆ ಅನುಮತಿ- ಭಕ್ತರ ಹರ್ಷ

ಸಿರವಾರ.ಆ.೦೩- ಜಿಲ್ಲೆಯಲ್ಲಿ ಮುದುಗಲ್ ನಂತರ ಸಿರವಾರದಲ್ಲಿ ಸಡಗರ ಸಂಭ್ರಮದಿಂದ ಎಲ್ಲಾ ಜನಾಂಗದವರು ಕೂಡಿ ಅದ್ದೂರಿಯಾಗಿ ಆಚರಣೆ ಮಾಡುವ ಮೊಹರಂ ಹಬ್ಬಕ್ಕೆ ಕಾನೂನು ತೊಡಗಾಗಿತು, ಭಕ್ತರು ದೇವದುರ್ಗ ಶಾಸಕರಾದ ಕೆ.ಶಿವನಗೌಡ ನಾಯಕರ ಮೊರೆಹೊದ ಹಿನ್ನೆಲೆಯಲ್ಲಿ ಕೆ.ಶಿವನಗೌಡ ನಾಯಕ ಮೊಹರಂ ಹಬ್ಬ ಆಚರಣೆಗೆ ಸಿದ್ದತೆ ಮಾಡಿಕೊಳ್ಳಿ ಎಂದು ಭರವಸೆ ನೀಡಿದರು.
ಸಿರವಾರ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಂತೆ ಮೊಹರಂ ಹಬ್ಬವನ್ನು ವಿಜೃಂಬಣೆಯಿಂದ ಆಚರಣೆ ಮಾಡುತ್ತಿದ್ದಾರೆ. ಮೊಹರಂ ನಿಮಿತ್ಯ ಅಲಾಯಿ ಕುಣಿತ ನೋಡುಗರ ಕಣ್ಮನ ಸೇಳೆಯುವಂತಿತು. ಪಟ್ಟಣದ ನಿವಾಸಿಗಳು ಉದ್ಯೋಗ ಇನ್ನಿತರ ಕಾರಣದಿಂದಾಗಿ ಬೇರೆ ಕಡೆ ಹೊದವರು ಸಹ ಈ ಹಬ್ಬಕ್ಕೆ ಆಗಮಿಸು ತಮ್ಮ ಹರಕೆ, ಮುಡಿಪು ಸಮರ್ಪಿಸುತ್ತಿದ್ದಾರೆ.
ಸುಮಾರು ೬ ವರ್ಷದ ಹಿಂದೆ ಕ್ಷುಲಕ ಕಾರಣಕ್ಕೆ ಉಂಟಾದ ಕಲಹದಿಂದಾಗಿ ಅಲಾ ಕುಣಿತವನ್ನು ನಿಷೇಧ ಮಾಡಲಾಗಿತು. ಹಾಗೆ ೨ ವರ್ಷ ಕೊವಿಡ್ ಹಿನ್ನೆಲೆಯಲ್ಲಿ ಸರಳ ಆಚರಣೆ ಮಾಡಲಾಯಿತು. ಆದರೆ ಅದಿಕಾರಿಗಳ ಜಿಲ್ಲಾಡಳಿತಕ್ಕೆ ನೀಡಿದ ತಪ್ಪು ಮಾಹಿತಿಯಿಂದಾಗಿ ಮೊಹರಂ ಆಚರಣೆಗೆ ಜಿಲ್ಲಾಡಳಿತ ನಿಷೇಧ ಏರಿ ಆಧೇಶ ಹೊರಡಿಸಿತು. ಖಾಜಿಗಳು, ಭಕ್ತರು, ಮಸ್ಜಿದಿ ಕಮಿಟಿಯವರು ಮೊಹರಂ ಹಿಂದೆ ಹೇಗೆ ಆಚರಣೆ ಮಾಡುತ್ತಿದೆವೋ ಅದೇ ರೀತಿ ಆಚರಣೆಗೆ ಅವಕಾಶ ಮನವಿ ಮಾಡಿಕೊಂಡರು. ಆದರೂ ಅಧಿಕಾರಿಗಳು ಒಪ್ಪದ ಹಿನ್ನೆಲೆಯಲ್ಲಿ ದೇವದುರ್ಗ ಶಾಸಕರು ಹಾಗೂರಸ್ತೆ ಅಭಿವೃದ್ದಿ ನಿಗಮದ ಅದ್ಯಕ್ಷರಾದ ಕೆ.ಶಿವನಗೌಡ ನಾಯಕರಿಗೆ ಖಾಜಿಗಳು, ಪ.ಪಂ ಸದಸ್ಯರು ಸೇರಿದಂತೆ ಎಲ್ಲಾ ಭಕ್ತರು ಮೊಹರಂ ಆಚರಣೆಗೆ ಅವಕಾಶ ಕೊಡಿಸುವಂತೆ ಮನವಿ ಮಾಡಿಕೊಂಡರು.
ಇದಕ್ಕೆ ಕೆ.ಶಿವನಗೌಡರು ನೀವು ಹಬ್ಬ ಆಚರಣೆಗೆ ಸಿದ್ದತೆ ಮಾಡಿಕೊಳಿ ಪರವಾನಿಗೆ ಕೊಡಿಸುವ ಭರವಸೆ ನೀಡಿದರು. ಕೆ.ಶಿವನಗೌಡ ನಸಯಕರು ನೀಡಿದ ಭರವಸೆಯಿಂದ ಉತ್ಸಾಹದಿಂದ ಹ ಮೊಹರಂ ಆಚರಣೆಗೆ ಸಕಲ ಸಿದ್ದತೆ ಪ್ರಾರಂಭವಾಗಿವೆ.