ಶಿವನಗೌಡನಾಯಕ ಕಾಂಗ್ರೆಸ್ ಸೇರ್ಪಡೆ ವದಂತಿ ಸುಳ್ಳು

ಅರಕೇರಾ.ಏ.೦೨-ಸಾಮಾಜಿಕ ಜಾಲತಾಣದಲ್ಲಿ ಶಾಸಕ ಕೆ.ಶಿವನಗೌಡನಾಯಕ ಬಿಜೆಪಿ ಪಕ್ಷತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆಂದುಹರಿದಾಡುತ್ತಿರುವ ಸುದ್ದಿ ಸುಳ್ಳು ವಂದತಿ ಎಂದು ಬಿಜೆಪಿ ಯುವ ಮುಖಂಡರಾದ ಕೃಷ್ಟಪ್ಪನಾಯಕ ಮಾಲಿಪಾಟೀಲ್ ಕ್ಯಾದಿಗ್ಗೇರಾ ಹೇಳಿದರು.
ಅವರು ಪತ್ರಿಕೆಯೊಂದಿಗೆ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಳಿತ ತಾಲೂಕ ಎಂಬ ಹಣೆ ಪಟ್ಟಿ ಇಟ್ಟುಕೊಂಡಿದ್ದ ದಿನಗಳಲ್ಲಿ ಶಾಸಕರಾಗಿ ಆಯ್ಕೆಯಾಗಿ ಬಂದ ಕೆ.ಶಿವನಗೌಡನಾಯಕರವರು ತಾಲೂಕಿನ ಸಮಗ್ರ ಅಭಿವೃದ್ದಿ ಅಂದರೆ ಶಿಕ್ಷಣ,ಉದ್ಯೋಗ, ವಸತಿ,ರಸ್ತೆ,ಕುಡಿಯುವ ನೀರು,ಶೌಚಾಲಯ ,ಗ್ರಾಮೀಣಾ ಪ್ರದೆಶಗಳಿಗೆ ಸಾರಿಗೆ ಸೌಲಭ್ಯ ಸೇರಿದಂತೆ ಇತ್ಯಾಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹಾಗೂ ೧೦ವರ್ಷಗಳಲ್ಲಿ ದೇವದುರ್ಗ ತಾಲೂಕಿಗೆ ಸಾವಿರಾರುಕೋಟಿ ಅನುದಾನ ತಂದು ಅಬಿವೃದ್ಧಿ ಪಡಿಸಿದ್ದಾರೆ.
ಸಮಗ್ರ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿರುವ ದೇವದುರ್ಗ ಶಾಸಕ ಕೆ,ಶಿವನಗೌಡನಾಯಕರವರು ತಾಲೂಕಿನ ಸರ್ವತ್ತೋಮುಖ ಅಭಿವೃದ್ದಿಯ ಸಂಕಲ್ಪಹೊಂದಿರುವ ಶಾಸಕರ ಅಭಿವೃದ್ಧಿ ಸಹಿಸದ ಪಟ್ಟಭದ್ರ ಹಿತಾಸಕ್ತಿಗಳು ವಿನಾಕಾರಣ ಅಪಪ್ರಚಾರ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಯಾಗಲಿದ್ದಾರೆಂದು ಸಾಮಾಜಿ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ. ಇಂತಹ ವಂದತಿಗೆ ಪಕ್ಷದ ಕಾರ್ಯಕರ್ತರು ಯಾರು ಕಿವಿಕೊಡದೇ ಪಕ್ಷದ ಸಂಘಟನೆಗೆ ಶ್ರಮಿಸಿ ಶಾಸಕರ ಬೆಂಬಲಿಸೋಣ ಎಂದು ಕಾರ್ಯಕರ್ತರಲ್ಲಿ ಮನವಿಮಾಡಿಕೊಂಡಿದ್ದಾರೆ.