ಶಿವಣ್ಣವರ ಹೇಳಿಕೆ ಸತ್ಯಕ್ಕೆ ದೂರ-ಶಿವಳ್ಳಿ

ಶಿಗ್ಗಾವಿ, ಡಿ 26- ಹಿರಿಯರು ಹಾಗೂ ಮಾಜಿ ಸಚಿವರಾದ ಬಸವರಾಜ ಶಿವಣ್ಣವರ ಅವರು ಬಣ ರಾಜಕೀಯ ಮಾಡುತ್ತಿದ್ದಾರೆ ಎಂಬುವ ಮಾತು ಸತ್ಯಕ್ಕೆ ದೂರವಾದ ಮಾತು ನಾನೋಬ್ಬ ಕಾಂಗ್ರೇಸ್ ಪಕ್ಷದ ರಾಜ್ಯ ಕೆಪಿಸಿಸಿ ಸದಸ್ಯನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದು ಕೆಪಿಸಿಸಿ ಸದಸ್ಯ ಶಣ್ಮುಖಪ್ಪ ಶಿವಳ್ಳಿ ಹೇಳಿದರು.
ಗುರುವಾರ ಪಟ್ಟಣದ ಕರ್ನಾಟಕ ಪತ್ರಕರ್ತರ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಬಣ ರಾಜಕೀಯ ಎಂಬುದು ನನಗೆ ಗೊತ್ತಿಲ್ಲ, ನನ್ನನ್ನ ಸಭೆಗಳಿಗೆ ಯಾರೂ ಅಹ್ವಾನಿಸಿಲ್ಲ, ಇದೇ ಹಿರಿಯರಾದ ಶಿವಣ್ಣವರ ಅವರು ಸಭೆ ಮುಗಿದ ಮೇಲೆ ನನಗೆ ದೂರವಾಣಿ ಮಾಡಿದ್ದಾರೆ ಎಂಬುದನ್ನ ಸ್ಪಷ್ಟ ಪಡಿಸಿದ ಅವರು ಕಾಂಗ್ರೇಸ್ ಪಕ್ಷದ ಸಂಘಟನೆಯ ನನ್ನ ಶಕ್ತಿ, ನಾನು ಯಾರ ವಿರೋಧಿಯೂ ಅಲ್ಲ ನನ್ನನ್ನ ಅಪ್ಪಿಕೊಳ್ಳುವ ಜನತೆಯ ಮದ್ಯ ನಾನಿರೋದು, ಸಹಾಯ ಸಹಕಾರ ನೀಡುತ್ತ ಹೋಗುತ್ತಿದ್ದೇನೆ, ನಾನು ಅದ್ಯಕ್ಷರಾದ ಡಿ ಕೆ ಶಿವಕುಮಾರ ಅವರ ಆಜ್ಞೆಯಂತೆ ಬೂತಮಟ್ಟದಲ್ಲಿ ಪಕ್ಷ ಸಮಗಟನೆಗೆ ಒತ್ತು ನೀಡುತ್ತಿದ್ದೇನೆ ವಿನಹ ಯಾವುದೇ ಬಣ ರಾಜಕೀಯ ಕಟ್ಟಿ ಪಕ್ಷವಿರೋದಿ ಚಟುವಟಿಕೆ ಮಾಡುವ ಉದ್ದೇಶ ನನ್ನಲ್ಲಿಲ್ಲ ಎಂದರು.
ಕಾಂಗ್ರೇಸ್ ಪಕ್ಷ ಜನತೆಗೆ ಏನೇಲ್ಲ ಅಭಿವೃದ್ದಿ ಮಾಡಿದೆ ಮತ್ತು ನನ್ನ ಸೋದರ ಸಿ ಎಸ್ ಶಿವಳ್ಳಿಯವರ ರಕ್ತ ಹಂಚಿಕೊಂಡು ಹುಟ್ಟಿದವ ನಾನು ಅವರ ಹಾದಿಯಲ್ಲಿ ನಡೆಯುತ್ತಿದ್ದೇನೆ ನಾನೂ ಸಹಿತ ಕಳೆದ 30 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ ಕಾಂಗ್ರೇಸ್ ಪಕ್ಷಕ್ಕೆ ನಾನು ನಿಷ್ಟೆಯಿಂದ ಕಾರ್ಯ ಮಾಡುತ್ತ ಹೋಗುತ್ತಿದ್ದೇನೆ ಆದ್ದರಿಂದ ಜನತೆ ನನ್ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು,
ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಭಾಗ್ಯಗಳ ಯೋಜನೆಗಳು ಇಂದಿಗೂ ಜನರ ಮನ್ನಣೆ ಗಳಿಸಿವೆ ಅವುಗಳ ಸದುಪಯೋಗವಾಗಬೇಕಾದ ಅವಶ್ಯಕತೆ ಇದೆ ಅದನ್ನು ಜನರ ಗಮನಕ್ಕೆ ತಂದು ಜನಪರ ಯೋಜನೆಗಳನ್ನ ಕಾಂಗ್ರೇಸ್ ಪಕ್ಷದ ಕೊಡುಗೆ ಎಂಬುದನ್ನು ಬೂತ ಮಟ್ಟದ ಜನರ ಗಮನಕ್ಕೆ ತರುವ ಕಾರ್ಯ ನನ್ನದು ಎಂದರು.
ಜಿಲ್ಲಾ ಕಾಂಗ್ರೇಸ್ ಸಂಘಟನಾ ಕಾರ್ಯದರ್ಶಿ ಹಾಗೂ ನ್ಯಾಯವಾದಿ ಹನುಮಂತ ಬಂಡಿವಡ್ಡರ ಮಾತನಾಡಿ ಕಳೆದ 70 ವರ್ಷಗಳಿಂದ ಪಕ್ಷ ಕಾಲಕ್ಕೆ ತಕ್ಕಂತೆ ಸಾವಿರಾರು ಅಭಿವೃದ್ದಿ ಕಾರ್ಯ ಮಾಡುತ್ತ ಬಂದಿದೆ ಆ ಯೋಜನೆಗಳನ್ನ ಜನರ ಹತ್ತಿರ ಹೋಗಿ ಮುಟ್ಟಿಸುವ ಮತ್ತು ಬಿಜೆಪಿ ವೈಫಲ್ಯದ ಕುರಿತು ತಳಮಟ್ಟದ ಜನರಿಗೆ ಮನವರಿಕೆ ಮಾಡುವತ್ತ ನಾವು ಗಮನ ಹರಿಸಿಬೇಕಿದೆ ಅಲ್ಲದೇ ಈ ಬಾರಿಯ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಶಿವಳ್ಳಿಯವರು ಪ್ರತಿ ಗ್ರಾಪಂಗೆ ಸ್ವತಹ ಅವರೇ ತೆರಳಿ ಜನರ ಒಡನಾಟದಲ್ಲಿದ್ದು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದ್ದಾರೆ ಇದು ಯಾವ ತಾಲೂಕಾ ಬ್ಲಾಕ್ ಕಾಂಗ್ರೇಸ್ ಗೆ ಏನು ಗೊತ್ತಿದೆ ? ಸಭೆಗಳಿಗೆ ಕರೆದು ಒಗ್ಗಟ್ಟು ತೋರಿಸುವ ಕಡೆ ಗಮನ ಹರಿಸಲಿ ಎಂದು ಕುಟಿಗಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹೇಶ ಪುಕಾಳೆ, ಮಂಜುನಾಥ ಹುರಳಿಕೊಪ್ಪಿ, ಈರಪ್ಪ ಸಣ್ಣತಮ್ಮವರ, ಗದಿಗೆಪ್ಪ ಬಳ್ಳಾರಿ, ನಿಸ್ಸಾರ್ ತೋಕಲ್ಲಿ, ಅನೀಲ ಭದ್ರಾಪೂರ, ಶಿವರಾಜ ಕಾಂಬಳಿ, ಚಂದ್ರು ಕೊಡ್ಲಿವಾಡ, ಮಾಲತೆಶ ಯಲುವಿಗಿ, ಪವನ ಧಾರವಾಡ, ದೇವಪ್ಪ ಕರೆಕ್ಕನವರ, ಪ್ರಕಾಶ ಕಾಳೆ, ಪುಟ್ಟಪ್ಪ ಮತ್ತೂರ, ನಿಸರ ತೋಕಲ್ಲಿ, ರವಿ ಗುದಗಿ, ಮಹೆಶ ಮಸಲೆ, ಸಂತೋಷ ಚಾಕಲಬ್ಬಿ ಸೇರಿದಂತೆ ಕಾಂಗ್ರೇಸ್ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಇದ್ದರು.