ಶಿವಣ್ಣನ‌ ಚಿತ್ರದಲ್ಲಿ ಮಂಗ್ಲಿ

ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಅಭಿನಯದ ಹೆಸರಿಡದ ಚಿತ್ರ ಸದ್ಯದಲ್ಲಿಯೇ ಆರಂಭವಾಗಲಿದೆ. ಇದು ಅವರ 124 ನೇ ಚಿತ್ರ.

ಈ ಚಿತ್ರದ ಮೂಲಕ ಇತ್ತೀಚೆಗೆ ಬಿಡುಗಡೆಯಾದ ‌”ರಾಬರ್ಟ್” ಚಿತ್ರದ ತೆಲುಗು ಅವತರಣಿಕೆಯ ‌”ಕಣ್ಣೆ ಅದಿರಿಂದಿ” ಹಾಡಿಗೆ ದ್ವನಿಯಾಗುವ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ತೆಲುಗಿನ‌ ಗಾಯಕಿ ಮಂಗ್ಲಿ ನಟಿಸುವ ಮೂಲಕ ಕನ್ನಡಕ್ಕೆ ‌ಪ್ರವೇಶ ಮಾಡಲಿದ್ದಾರೆ.

ಇತ್ತೀಚೆಗೆ ಕನ್ನಡದಲ್ಲಿ ಹಾಡಿದ್ದ ಮಂಗ್ಲಿ‌ ಈಗ ನಟನೆಯ ಮೂಲಕ ಕನ್ನಡಿಗರ ಮನ‌ ಗೆಲ್ಲಲು ಮಾದಕ ಕಂಠದ ಗಾಯಕಿ ಮುಂದಾಗಿದ್ದಾರೆ.

ಈ ಚಿತ್ರವನ್ನು ರಾಮ್ ಧುಲಿಪುಡಿ ಆಕ್ಷನ್ ಕಟ್ ಹೇಳಲಿದ್ದಾರೆ. ಸ್ವಾತಿ ವನಪಲ್ಲಿ, ಶ್ರೀಕಾಂತ್ ದುಲಿಪುಡಿ ಹಾಗೂ ನಾರಾಲ ಶ್ರೀನಿವಾಸ ರೆಡ್ಡಿ ನಿರ್ಮಿಸುತ್ತಿರುವ “ಪ್ರೊಡಕ್ಷನ್ ನಂ ೧” ಚಿತ್ರ ಜೂನ್ ಮೊದಲವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ.

70ದಿನಗಳ ಕಾಲ ಚಿಕ್ಕಮಗಳೂರು, ಬೆಂಗಳೂರು, ಜಮ್ಮು ಹಾಗೂ ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಖ್ಯಾತ ನಟರಾದ ನಾಜರ್, ಸಂಪತ್ ಹಾಗೂ ಸಾಧುಕೋಕಿಲ ಸಹ ಚಿತ್ರದ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಕುಡಿಪುಡಿ ವಿಜಯಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿತ್ರಕ್ಕೆ ರವಿಕುಮಾರ್ ಸನಾ‌ ಛಾಯಾಗ್ರಹಣವಿದೆ.‌ “ಟಗರು” ಖ್ಯಾತಿಯ ಚರಣ್ ರಾಜ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ರವಿ‌ ಸಂತೆಹಕ್ಲು ಕಲಾ ನಿರ್ದೇಶನ ಹೊಸ ಚಿತ್ರಕ್ಕಿದೆ.

ಮಾದಕ ಕಂಠದ ಗಾಯಕಿ

ತೆಲುಗಿನ‌ ಮಾದಕ‌ ಕಂಠದ ಗಾಯಕಿ ಮಂಗ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಚಿತ್ರದ ಮೂಲಕ ಕನ್ನಡದಲ್ಲಿ ನಟನೆ ಆರಂಬಿಸುತ್ತಿದ್ದಾರೆ. ಈ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.