
ದಾವಣಗೆರೆಗೆ ಜ.6;- ದಾವಣಗೆರೆಗೆ ವೇದ ಚಿತ್ರಕ್ಕಾಗಿ ಪ್ರಮೋಷನ್ ಗಾಗಿ ಭೇಟಿ ನೀಡಿದ ಕರುನಾಡ ಚಕ್ರವರ್ತಿ ನಟ ಶಿವರಾಜಕುಮಾರ್ ಅವರನ್ನು ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘದ ಪರವಾಗಿ ದಾವಣಗೆರೆಗೆ ಸ್ವಾಗತ ಕೋರಿ ವೇದ ಚಿತ್ರವು ಶತದಿನೋತ್ಸವ ಆಚರಿಸಲಿ ಎಂದು ಶುಭ ಹಾರೈಸಲಾಯಿತು ಇದೇ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು ಎಂ.ಮನು ಜಿಲ್ಲಾಧ್ಯಕ್ಷರು ದಾವಣಗೆರೆ ಜಿಲ್ಲಾ ಅಖಿಲ ಕರ್ನಾಟಕ ರವಿಚಂದ್ರನ್ ಅಭಿಮಾನಿಗಳ ಸಂಘ ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್, ದುಗೇಶ್ , ಗುಮ್ಮನೂರು ಶ್ರೀನಿವಾಸ್, ವಿಜಯಕುಮಾರ್ ಕೆ ಪಿ , ಮಹಾಲಿಂಗಪ್ಪ ಉಪಸ್ಥಿತರಿದ್ದರು.