ಶಿವಕುಮಾರ ಸ್ವಾಮೀಜಿ ಪುಣ್ಯ ಸ್ಮರಣೆ

ದಾರಿ ದೀಪ ಸಂಸ್ಥೆಯ ಸಾಮಾಜಿಕ ಕಾರ್ಯ ಶ್ಲಾಘನೀಯ
ರಾಯಚೂರು, ಜ.೨೧- ಡಾ. ಶಿವಕುಮಾರ ಮಹಾಸ್ವಾಮಿಜಿಗಳು ಜಾತಿ ಭೇದ ಭಾವವಿಲ್ಲದೇ ಎಲ್ಲರನ್ನು ಸಮಾನವಾಗಿ ಕಂಡ ಏಕೈಕ ನಡೆದಾಡುವ ದೇವರು ಎಂದು ಶಾಂತಮಲ್ಲ ಶಿವಾಚಾರ್ಯ ಹೇಳಿದರು. ಅವರಿಂದು ನಗರದ ವೀರ ಶೈವ ಕಲ್ಯಾಣ ಮಂಟಪದಲ್ಲಿ ದಾರಿ ದೀಪ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ನಡೆದಾಡುವ ದೇವರ ೪ನೇ ಪುಣ್ಯ ಸ್ಮರಣೆ ಅಂಗವಾಗಿ ದಾಸೋಹ ದಿನ ಕಾರ್ಯಕ್ರಮಕ್ಕೆ ದೀಪ ಅಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದರು. ನಿರ್ಗತಿಕರಿಗೆ ಅನ್ನದಾನ ನೆರೆವೇರಿಸುವುದು ಕೋಟಿ ಪುಣ್ಯದ ಫಲ. ಎಲ್ಲ ದಾನಕ್ಕಿಂತ ಅನ್ನದಾನ ಶ್ರೇಷ್ಠವಾದದ್ದು ಎಂದರು. ಅನ್ನ, ವಸತಿ ಹಾಗೂ ವಸ್ತ್ರ ಜೀವನದ ಮೂಲಭೂತ ಅವಶ್ಯಕತೆಗಳು ಇದನ್ನು ಜಾತಿ ಭೇದ ಭಾವವಿಲ್ಲದೆ ಸಮಾಜಕ್ಕೆ ಸ್ವಾಮೀಜಿ ಸೇವೆ ಸಲ್ಲಿಸಿದರು. ನಿಜವಾದ ಸಂಪತ್ತು ಶರೀರ ಅದರ ಪ್ರತಿರೂಪವೇ ಶಿವಕುಮಾರ ಸ್ವಾಮೀಜಿ ಎಂದ ಅವರು
ದಾರಿ ದೀಪ ಸಂಸ್ಥೆಯ ಸಾಮಾಜಿಕ ಕಾರ್ಯ ಶ್ಲಾಘನೀಯ. ನಿಮ್ಮ ಸಾಮಾಜಿಕ ಸೇವೆ ಹೀಗೆ ಮುಂದುವರಿಯಲಿ ಎಂದರು. ಪುನೀತ್ ರಾಜಕುಮಾರ ಅವರ ಸಾಮಾಜಿಕ ಸೇವೆ ಇತರರಿಗೆ ಮಾದರಿಯಾಗಬೇಕು. ಕಣ್ಣು ನೇತ್ರಾದಾನದ ಮೂಲಕ ಅವರ ಸಾಮಾಜಿಕ ಸೇವೆ ಇಡೀ ಜಗತ್ತಿಗೆ ತಿಳಿಯಿತು. ಜಾತಿ ಭೇದ ಮೀರಿ ಇಡೀ ಜಗತ್ತಿಗೆ ಸಂದೇಹ ನೀಡಿದರು.ಕಾರ್ಯಕ್ರಮದಲ್ಲಿ ಶಾಸಕ ಶಿವರಾಜ ಪಾಟೀಲ್ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ದಾರಿ ದೀಪ ಸಂಸ್ಥೆಯ ಉಪಾಧ್ಯಕ್ಷ ಬಸನಗೌಡ ಗಣದಿನ್ನಿ ಪ್ರಾಸ್ತವಿಕ ಮಾತನಾಡಿದರು. ಈ ಸಂದರ್ಭದಲ್ಲಿ ರಾಮನಗೌಡ ಏಗನೂರು, ಶಂಭುಲಿಂಗ ಮಹಾಸ್ವಾಮಿಗಳು, ಸೈಯದ್ ಪಾಷ, ಚರ್ಚ್ ಪಾದ್ರಿ ಪ್ರಮೋದ್, ಎನ್ ಶರಣಪ್ಪ, ಮಂಜುನಾಥ್, ಗೀತಾ ಸೇರಿದಂತೆ ಉಪಸ್ಥಿತರಿದ್ದರು.