ಶಿವಕುಮಾರ ಸ್ವಾಮಿಜಿ ಜನ್ಮದಿನ ಆಚರಣೆ

ಆಳಂದ;ಎ.2:ತ್ರಿವಿಧ ದಾಸೋಹಿ, ಕಾಯಕಯೋಗಿ, ಕರ್ನಾಟಕ ರತ್ನ, ಶತಾಯುಷಿ, ನಡೆದಾಡುವ ದೇವರು, ಡಾ.ಶ್ರೀ.ಶಿವಕುಮಾರ ಮಹಾಸ್ವಾಮಿಗಳ 114 ನೇ ಜನ್ಮ ದಿನದ ಪ್ರಯುಕ್ತ ಆಳಂದ ಪಟ್ಟಣದಲ್ಲಿ ಯುವ ಮುಖಂಡರು ಶ್ರೀ ಆನಂದ ದೇಶಮುಖ ಶರಣಗೌಡ ಪಾಟೀಲ ಶಖಾಪುರ ಅವರ ನೇತೃತ್ವದಲ್ಲಿ ಜನ್ಮ ದಿನ ಸರಳವಾಗಿ ಆಚರಣೆ ಮಾಡಲಾಯಿತು.ಜನ್ಮ ದಿನ ಪ್ರಯಕ್ತ ಪ್ರಸಾದ ಸೇವೆ & ಸ್ವಾಮೀಜಿ ಯವರ 114 ಭಾವ ಚಿತ್ರಗಳನ್ನು ಭಕ್ತಾದಿಗಳಿಗೆ ವಿತರಿಸಲಾಯಿತು. ಶ್ರೀಷ.ಬ್ರ,ಸಿದ್ಧಲಿಂಗ ಶಿವಾಚಾರ್ಯ ಹಿರೇಮಠ ಆಳಂದ ಗುರುಶರಣ ಪಾಟೀಲ ಕೊರಳ್ಳಿ ಆನಂದ ದೇಶಮುಖಶರಣಗೌಡ ಪಾಟೀಲ ಶಖಾಪುರ ಡಾ.ನಿಖಿಲ ಶಹಾ ಲಿಂಗರಾಜ ಪಾಟೀಲ ಕಿರಣ ಪಾಟೀಲ ಶರಣಗೌಡ ಪಾಟೀಲ ದೆವಂತಗಿ ಮಂಜುನಾಥ್ ಗುಡ್ಡೊಡಗಿ,ಅಜಯ್ ಮಾನೆ,ಅಣ್ಣಾರಾವ ಪಾಟೀಲ್ ಚಿಂಚೊಳಿ ಇತರರು ಇದ್ದರು.