ಶಿವಕುಮಾರ ಮಹಾಸ್ವಾಮಿ ಪುಣ್ಯಸ್ಮರಣೆ ಅಂಗವಾಗಿ ಅನ್ನ ದಾಸೋಹ ಕಾರ್ಯಕ್ರಮ

ರಾಯಚೂರು,ಜ.೧೯- ನಡೆದಾಡುವ ದೇವರು ದಾಸೋಹಿ ವಿಶ್ವರತ್ನ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಯವರ ೪ನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಜನವರಿ ೨೧ರಂದು ಅನ್ನ ದಾಸೋಹ ದಿನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಾರಿದೀಪಾ ಸಂಸ್ಥೆಯ ಸದಸ್ಯ ಚನ್ನಬಸವ ಅರೋಲಿ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ದಾರಿದೀಪಾ ಸಂಸ್ಥೆಯು ಸುಮಾರು ಎರಡು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕೊರೋನ ಸಂದರ್ಭದಲ್ಲಿ ದಾರಿದೀಪಾ ಸಂಸ್ಥೆಯು ಹನುತಾ ಆಶ್ರಮದ ಎರಡು ಜೀವಿಗಳು ಕೋವಿಡ್ ನಲ್ಲಿ ಕೊನೆಯುಸಿರು ಬಿಟ್ಟಿದ್ದ ಸಂದರ್ಭದಲ್ಲಿ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದೇವೆ ಎಂದರು.
ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ಗಬ್ಬೂರು ಬೂದಿಬಸವೇಶ್ವರ ಸಂಸ್ಥಾನ ಮಠದ ಶ್ರೀ ಬೂದಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಕಿಲ್ಲೇ ಬೃಹನ್ಮಠದ ಶಾಂತ ಮಲ್ಲ ಶಿವಾಚಾರ್ಯ ಮಹಾಸ್ವಾಮಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿ, ಕಲ್ಲೂರು ಹಾಗೂ ಮಲದ ಕಲ್ ಮಠದ ಪೀಠಾಧಿಪತಿ ಶ್ರೀ ಗುರು ಅಡವಿಶ್ವರ ಶಿವಯೋಗಿ, ಸುಲ್ತಾನಪುರ ಪಂಚಾಕ್ಷರಿ ಸಂಸ್ಥಾನ ತೀರ್ಥ ಬೃಹನ್ಮಠ ಮಠದ ಶಂಭು ಸೋಮನಾಥ ಶಿವಾಚಾರ್ಯ ಮಹಾಸ್ವಾಮಿ, ಹೆಚ್. ದೇವದುರ್ಗದ ಜಡ್. ಪಿ.ದರ್ಗಾ ದ ಸೈಯದ್ ಜಹೀರ್ ಪಾಷಾ ಖಾದ್ರ , ಕುರ್ಡಿ ಚರ್ಚ್ ಸಭಾಪಾಲಕರು ಪ್ರಮೋದ್ ಸಮುವೇಲ್ ಅವರು ವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ವಯ್ಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದೇವದುರ್ಗ ಶಾಸಕರಾದ ಕೆ ಶಿವನಗೌಡ ನಾಯಕ್ ನಗಾರಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷ ತಿಮ್ಮಪ್ಪ ನಾಡಗೌಡ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು, ರಾಜ್ಯ ಕಾಂಗ್ರೆಸ್ ಯುವ ಮುಖಂಡ ರವಿ ಬೋಸರಾಜ, ಜೆಡಿಎಸ್ ಮುಖಂಡ ರಾಮನಗೌಡ ಏಗನೂರು,ನಗಾರಾಭಿವೃದ್ದಿ ಪ್ರಾಧಿಕಾರ ಮಾಜಿ ಅಧ್ಯಕ್ಷ ವೈ .ಗೋಪಾಲ ರೆಡ್ಡಿ, ಮಾಜಿ ಶಾಸಕ ಹಂಪಯ್ಯ ಸಾಹುಕಾರ ನಾಯಕ್, ಕಾಂಗ್ರೆಸ್ ಮುಖಂಡ ರವಿ ಪಾಟೀಲ್, ದೇವದುರ್ಗದ ಜೆಡಿಎಸ್ ಮಹಿಳಾ ಮುಖಂಡ ಕರಿಯಮ್ಮ ಜಿ ನಾಯಕ್, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಶ್ರೀದೇವಿ ರಾಜಶೇಖರ ನಾಯಕ ಅವರು ಆಗಮಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ಬಸವನಗೌಡ ಗಣದಿನ್ನಿ, ಸದಸ್ಯರಾದ ಗೀತಾ ಇದ್ದರು.