ಶಿವಕುಮಾರ್‌ಗೆ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ

ಕೋಲಾರ,ಡಿ.೨- ಕನ್ನಡ ರಾಜ್ಯೋತ್ಸವ ನಿಮಿತ್ತ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ರಾಜ್ಯ ಹಾಗೂ ಬೀದರ ಜಿಲ್ಲಾ ಘಟಕ ವತಿಯಿಂದ, ೬೬ ಜನ ಕನ್ನಡ ಸಾಧಕರಿಗೆ, ಕರ್ನಾಟಕ ರಾಜ್ಯೊತ್ಸವ ರತ್ನ ಪ್ರಶಸ್ತಿಯನ್ನ, ಕೋಲಾರ ಜಿಲ್ಲೆಯ ಬಿ.ಶಿವಕುಮಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀ ರಮಣ ಮಹರ್ಷಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆಸಲ್ಲಿಸುತ್ತಿರುವ ಇವರು ಶಿಕ್ಷಣ ಪ್ರೇಮಿಯಾಗಿ, ಸಮಾಜದ ಬಗ್ಗೆ ಕಾಳಜಿ, ಶಿಕ್ಷಣದಿಂದ ಶಿಕ್ಷಕರು ಮಕ್ಕಳಿಗೆ ಸಮಾನತೆ ಶಿಕ್ಷಣ ಕಲಿಸುವುದು, ಸಮಾಜ ಮುಖಿಯಾಗಿ ಕೆಲಸವನ್ನು ಮಾಡಿಸುವುದು, ಕೊವಿಡ್ ೧೯ ಮೊದಲನೆ ಮತ್ತು ಎರಡನೆ ಅಲೆಯ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಇಡೀ ನಾಡಿನಾದ್ಯಂತ ಸಾಹಿತ್ಯ ಸೇವೆಯನ್ನು ನಾಡು ನುಡಿಗಾಗಿ ಶ್ರಮಿಸುತ್ತಿರುವ ಕಾರ್ಯವನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಾರ್ಯಕ್ರಮದಲ್ಲಿ ಸುಬ್ಬಣ್ಣ ಕರಕನಳ್ಳಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ರಾಜ್ಯಾಧ್ಯಕ್ಷ, ಕ.ಸಾ.ಪ ಬೀದರ್ ಜಿಲ್ಲಾಧ್ಯಕ್ಷರಾದ ಸುರೇಶ್ ಚನ್ನಶೆಟ್ಟಿ , ಹಾವೇರಿ ರೈತ ಹೋರಾಟಗಾರರು ಮಂಜುಳಾ ಅಕ್ಕಿ , ಪೂಜ್ಯ ಜ್ಞಾನ ಸಾಗರ ಭಂತೆ ಧಮ್ಮ , ಡಾಕ್ಟರ್ ಚಂದ್ರಕಾಂತ ಚಿಲ್ಲರ್ಗಿ ನಿರ್ದೇಶಕರು ಬ್ರಿಮ್ಸ್ ಬಿದರ್, ಸಾಹಿತಿ ಸಂಜೀವ್ ಕುಮಾರ್ ಅತಿವಾಳೆ ಇನ್ನು ಹಲವು ಗಣ್ಯರು ಭಾಗವಹಿಸಿದ್ದರು,