
ಕಲಬುರಗಿ,ಸೆ.18:ಕಲ್ಯಾಣ ಕರ್ನಟಕದ ಕೀರ್ತನ ಕೇಸರಿ ಪುರಾಣ ಪಂಡಿತರು, ನಾಟಕ ಬರಹಗಾರರಾಗಿ ಅನೇಕ ಪುರಾಣಗಳನ್ನು ರಚನೆಮಾಡಿ ಸುಮಾರು ಪುಸ್ತಕಗಳನ್ನು ಬರೆದ ಹಿರಿಯ ಸಾಹಿತಿ ಲಿಂಗೈಕ್ಯ ಶಿವಕವಿ ಜೋಗೂರ ಅವರ ಅಗಲುವಿಕೆಗೆ ಬಾಳೆಹೊನ್ನೂರಿನ ಶ್ರೀ ಜಗದ್ಗುರು ಡಾ. ವೀರಸೋಮೇಶ್ವರ ಮಹಾಸ್ವಾಮಿಗಳು, ಕಾಶೀe್ಞÁನ ಸಿಂಹಾಸನಾಧೀಶ್ವರ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದಾರಾಮ ಪಂಡೀತಾರಾಧ್ಯ ಮಹಾಸ್ವಾಮಿಗಳು, ಉಜ್ಜಯಿನಿಯ ಜಗದ್ಗರು ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಕೇದಾರ ಜಗದ್ಗುರುಗಳು ಸಂತಾಪ ಸೂಚಿಸಿದ್ದಾರೆ. ಕಡಗಂಚಿಯ ವೀರಭದ್ರಶಿವಾಚಾರ್ಯರು, ಶಖಾಪೂರದ ಡಾ. ಸಿದ್ದರಾಮ ಶಿವಾಚಾರ್ಯರು, ಸರಡಗಿಯ ಡಾ. ರೇವಣಸಿದ್ದ ಶಿವಾಚಾರ್ಯರು, ಸ್ಟೇಶನ್ ಬಬಲಾದದ ಶಿವಮೂರ್ತಿ ಶಿವಾಚಾರ್ಯರು, ಅಚಲೇರಿಯ ಸೂತ್ರೆಶ್ವರ ಶಿವಾಚಾರ್ಯರು ತಮ್ಮ ಸಂತಾಪ ಸೂಚಿಸಿದ್ದಾರೆ. ಮಾಜಿ ಮೇಯರ್ ಧರ್ಮಪ್ರಕಾಶ ಪಾಟೀಲ, ಕೊಲ್ಲಿಪಾಕಿ ಟ್ರಸ್ಟಿನ ಅಂಮೃತಪ್ಪ ಮಲಕಪಗೌಡ, ಅಣ್ಣಾರಾವ ಬಿರಾದಾರ, ಗುರುಪಾದಪ್ಪ ಕಿಣಗಿ, ಸಿದ್ರಾಮಪ್ಪ ಆಲಗೂಡಕರ್, ಬಾಬೂರಾವ ಕೋಬಾಳ, ಶಿವಾನಂದ ಮಠಪತಿ, ಶರಣಗೌಡ ನಿಂಬರ್ಗಿ, ಎಂ.ಎಸ್. ಪಾಟೀಲ ನರಿಬೋಳ, ಶಿವಕವಿ ಜೋಗೂರ ಅಗಲುವಿಕೆಗೆ ದುಃಖ ವ್ಯೆಕ್ತಪಡಿಸಿದ್ದಾರೆ.