ಶಿಳ್ಳೆಕ್ಯಾತರ ಪ್ರತಿ ಮನೆಗಳಲ್ಲಿ ಬೆಳಗಲಿ ಅಕ್ಷರದ ಜ್ಯೋತಿ – ಡಾ. ಸಣ್ಣವೀರಣ್ಣ ದೊಡ್ಡಮನಿ

ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಸೆ. 20 :- ಅಲ್ಲಲ್ಲಿ ಟೆಂಟ್ ಹಾಕಿಕೊಂಡು ಅಲೆಮಾರಿ ಬದುಕು ಸಾಗಿಸುತ್ತಿರುವ ಶಿಳ್ಳೆಕ್ಯಾತರು ಸಮುದಾಯದ ಸಂಘಟಕರಾಗುವ ಮೂಲಕ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ಮೂಲಕ  ಅಕ್ಷರದ ಜ್ಯೋತಿ ಹಚ್ಚಬೇಕಿದೆ ಎಂದು ಶಿಳ್ಳೆಕ್ಯಾತರ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಸಣ್ಣವೀರಣ್ಣ ಸಮುದಾಯದ ಜನತೆಗೆ ಕಿವಿ ಮಾತು ಹೇಳಿದರು.  ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಕರ್ನಾಟಕ ರಾಜ್ಯ ಶಿಳ್ಳೆಕ್ಯಾತರ ಅಭಿವೃದ್ಧಿ( ಎಸ್ಸಿ )ಸಂಘ ಹಾಗೂ ವಿಜಯನಗರ ಜಿಲ್ಲಾ ಶಿಳ್ಳೆಕ್ಯಾತರ ಸಂಘದವರು ಆಯೋಜಿಸಿದ ನೂತನ ಸಂಘದ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತ ಶಿಳ್ಳೆಕ್ಯಾತರು ಮೂಲತಃ ಕಲಾವಿದರು ನಮ್ಮ ದೇಶದ ಸಂಸ್ಕೃತಿಯನ್ನು ಹೃದಯದಲ್ಲಿಟ್ಟುಕೊಂಡು ಪೂಜಿಸುವವರು. ಅಲೆಮಾರಿಗಳಾಗಿ ಬದುಕು ಸಾಗಿಸಿ ಒಪ್ಪತ್ತಿನ ಊಟಕ್ಕೂ ಕಷ್ಟಪಟ್ಟ ತಳಸಮುದಾಯವಾಗಿದ್ದು ಇಂತಹ ಸಮುದಾಯ ಬಾಬಾ ಸಾಹೇಬ ಡಾ. ಬಿ ಆರ್ ಅಂಬೇಡ್ಕರ್ ರವರ ಆದರ್ಶದಂತೆ ಸಂವಿಧಾನ ಬದ್ಧವಾದ ಹಕ್ಕುಗಳನ್ನು ಪಡೆದುಕೊಳ್ಳಲು ಶಿಕ್ಷಣ ಸಂಘಟನೆ ಹೋರಾಟ ಅಗತ್ಯವಾಗಿತ್ತು ಮೊದಲು ಶಿಕ್ಷಣಕ್ಕೆ ಮಹತ್ವ ನೀಡುವ ಮೂಲಕ ಸಮುದಾಯ ಹೆಜ್ಜೆ ಇಟ್ಟು ನಂತರ ಹಕ್ಕುಗಳನ್ನು ಪಡೆಯಲು ಸಂಘಟನೆ ಮಾಡಿ ಹೋರಾಟಕ್ಕೆ ಸಜ್ಜಾಗಬೇಕಾಗಿದೆ ನೂತನ ವಿಜಯನಗರ ಜಿಲ್ಲೆಯಲ್ಲಿ ಸಮುದಾಯದ ಮಹಿಳಾ ಮಣಿ  ಕೂಡ್ಲಿಗಿಯ ಗೌರಮ್ಮ ಶಿಂದೆ ಯೊಬ್ಬರು ಸಮುದಾಯದ ಸಂಘಟನೆ ಮಾಡಲು ಮುಂದಾಗಿ ಸಂಘಟನಾ ಶಕ್ತಿ ಹೆಚ್ಚಿಸುತ್ತಿರುವುದು ಖುಷಿ ತಂದಿದೆ ಎಂದರು.        ನೂತನ ವಿಜಯನಗರ ಜಿಲ್ಲಾ ಶಿಳ್ಳೆಕ್ಯಾತರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ  ಗೌರಮ್ಮ ಶಿಂದೆ ಮಾತನಾಡಿ ತಳಮಟ್ಟದ ಸಮುದಾಯವಾದ ಶಿಳ್ಳೆಕ್ಯಾತ ಸಮಾಜ ಇನ್ನೂ ಅಲೆಮಾರಿ ಜೀವನ ಸಾಗಿಸುತ್ತಿದ್ದು ಪ್ರತಿರಂಗದಲ್ಲೂ ಹಿಂದುಳಿದ ಜನಾಂಗವಾಗಿದ್ದು ಈ ಸಮುದಾಯದ ಏಳ್ಗೆಗೆ ಪ್ರತಿಯೊಬ್ಬರೂ ಸಂಘಟಕರಾಗಿ ಬೇಕಾದ ಸೌಲಭ್ಯ ಪಡೆಯಲು ಮುಂದಾಗಿ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಸಮುದಾಯದ ಏಳ್ಗೆಗೆ ಶ್ರಮಿಸೋಣ ಎಂದರು.  
ಪರಮಪೂಜ್ಯ  ಕಲ್ಲಿನಾಥ ಮಹಾಸ್ವಾಮಿಗಳು ಲೀಲ ಮಠ ಭೀಮನಗಡ ಇವರು ಸಾನಿಧ್ಯ ವಹಿಸಿ ಮಾತನಾಡಿ ಸಮುದಾಯದ ಏಳ್ಗೆ ಗೆ ಅಕ್ಷರ ಜ್ಞಾನ ಮೊದಲಾಗಲಿ ನಂತರ ಸಂಘಟಕರಾಗಿ ಸರ್ಕಾರದ ಯೋಜನೆಗಳನ್ನು  ಸದುಪಯೋಗಪಡಿಸಿಕೊಳ್ಳುವಂತೆ ಸಮುದಾಯದ ಜನತೆಗೆ ಆಶೀರ್ವಚನ ನೀಡಿದರು   ಮತ್ತೋರ್ವ   ವಸಂತಪ್ಪ ತಾತನವರು ಓಂಕಾರ ಬಂಡೆ ಬಡೇಲಡಕು,  ಸಾನಿಧ್ಯ ವಹಿಸಿದ್ದರು ಉಳಿದಂತೆ ಗೌರವಾಧ್ಯಕ್ಷ ಮಹೇಂದ್ರ ರಾವ್ ಸಾಸನಿ, ಉಪಾಧ್ಯಕ್ಷ ಸುರೇಶ್ ವಾಯ್ ಕಟ್ಟಿಮನಿ ಪ್ರಧಾನಕಾರ್ಯದರ್ಶಿ ಅಶೋಕ್ ಶಿಳ್ಳೆಕ್ಯಾತರ ರಾಜ್ಯ ಆಡಳಿತ ಕಾರ್ಯದರ್ಶಿ ಗಳಾದ  ಮುತ್ತಣ್ಣ ವಾಯ್ ಗಂಗುರ್  ರಾಜ್ಯ ಸಂಚಾಲಕ
ವಿಲಾಸಕುಮಾರ ಜಿ ಶಿಂಧೆರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ  ಶೈಲಾ ಸೀತಾರಾಂ ಪಾಚಂಗೆ ರಾಜ್ಯ ಸಂಚಾಲಕ ವಿಲಾಸಕುಮಾರ ಜಿ. ವಿಜಯನಗರ ಜಿಲ್ಲಾ ಶಿಳ್ಳೆಕ್ಯಾತರು (ಶಿಳ್ಳೆಕ್ಯತಸ್ )ಮಹಿಳಾ ಕ್ಷೇಮಾಭಿರುದ್ಧಿ ಸಂಘ (ಎಸ್ಸಿ ) ಅಧ್ಯಕ್ಷೆ ಗೌರಮ್ಮ ಶಿಂದೆ ಕೂಡ್ಲಿಗಿ,ಉಪಾಧ್ಯಕ್ಷೆ ಹನುಮಕ್ಕ ಪ್ರಧಾನ ಕಾರ್ಯದರ್ಶಿ ರೂಪ ಅಲಿಗಿಲವಾಡ ಸಂಘಟನಾ ಕಾರ್ಯದರ್ಶಿ ಕವಿತಾ ಕೊಟ್ಟೂರು, ಕೋಶಾಧ್ಯಕ್ಷರಾದ ಮಹಾದೇವಮ್ಮನಾಗರಕಟ್ಟೆ,
ದೀಪ ನಾಗರಕಟ್ಟೆ, ಮತ್ತು ಉಮಾದೇವಿ ಗಾಳೆಮ್ಮನ ಗುಡಿ ಉಪಸ್ಥಿತರಿದ್ದರು.