ಶಿಲ್ಪ ಕಲೆಗೆ ವಿಶಿಷ್ಠ ಕೊಡುಗೆಯನ್ನುನೀಡಿದವರು ಜಕಣಾಚಾರಿ


ಸಂಜೆವಾಣಿ ವಾರ್ತೆ
ಸಂಡೂರು :ಜ:2:  ಶಿಲ್ಪ ಕಲೆಯಲ್ಲಿ ಪ್ರಖ್ಯಾತರಾಗಿ ತಮ್ಮ ಅದ್ಬುತ ಕಲೆಯನ್ನು ಸಾಧನೆ ಮೂಲಕ ತೊಈರಿಸಿ ವಿಶ್ವವಿಖ್ಯಾತಾರಿ ಅಮರರಾಗಿ ಹೋದವರು ಜಕಣಚಾರಿ ಅಂತೇಯೇ ಅವರ ನಾಮಧೇಯ ಅಮರ ಶಿಲ್ಪಿ ಜಕಣಚಾರಿ ಎಂದು ಪ್ರಖ್ಯಾತರಾಗಲು ಕಾರಣವಾಯಿತು. ಕಲೆ ಸಾಹಿತ್ಯ, ಸಂಗೀತ, ಸಂಸ್ಕೃತಿ ಇವುಗಳು ಸಾಧನೆಯ ಮೂಲಕ ಬರಲು ಸಾಧ್ಯ. ಶಿಲ್ಪ ಕಲೆಗೆ ವಿಶಿಷ್ಠ ಸ್ಥಾನಮಾನ ಕೊಡುಗೆಯನ್ನುನೀಡಿದವರು ಅಮರಶಿಲ್ಪಿ ಜಕಣಚಾರಿಯವರು. ಸೂರ್ಯ ಚಂದ್ರ, ಇರುವವರೆಗೂ ಇವರ ನಾಮಧೇಯ ಶಾಶ್ವತವಾಗಿರುವುದು ಖಚಿತ. ಪ್ರತಿವೋರ್ವ ಸಮಾಜದವರು ಅಮರರಾಗಿ ಪ್ರಖ್ಯಾತರಾದ ಜಕಣಚಾರಿಯವರ ಇತಿಹಾಸವನ್ನು ತಿಳಿಯಬೇಕಾದುದು ಅತಿ ಅವಶ್ಯ. ಅಲ್ಲದೇ ಅವರು ತತ್ವ ಸಿದ್ದಾಂತಗಳನ್ನುಜೀವನದಲ್ಲಿ ಅಳವಡಿಸಿಕೊಳ್ಳಬೆಕಾದುದು ಅವಶ್ಯವಾಗಿದೆ. ಎಂದು ಸಂಡೂರುವಿಧಾನ ಸಭಾ ಕ್ಷೇತ್ರದ ಶಾಕಸರು ಈ. ತುಕರಾಂ ತಿಳಿಸಿದರು.
ಅವರು ಪಟ್ಟಣದ ಆನಂದ ಬಜಾರ್ ಹತ್ತಿರ ಇರುವ ಕಾಳಿಕಾ ಕಮ್ಮೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವಕರ್ಮ ಸಮಾಜದವರುಏರ್ಪಡಿಸಿದ್ದ ಜಕಣಾಚಾರಿಯವರ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಸಮಾಜದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅವರು ಮುಂದುವರೆದು ಉತ್ತಮ ಕಾರ್ಯ ಉತ್ತಮ ಸವೆ ಮಾಡಿದರೆ ಮಾತ್ರ ಸಮಾಜದಲ್ಲಿ ಶಾಶ್ವತವಾಗಿ ಹೆಸರು ಉಳಿಯಲು ಸಾಧ್ಯ. ಜೊತೆಗೆ ವ್ಯಕ್ತಿಯ ವಿಕಾಸನ ಅರಳಲು ಸಾದ್ಯ. ಜಕಣಾಚಾರಿಯವರ ಚಾಣಾಕ್ಷತನ ಮಹತ್ವ ಪಡೆದಿದೆ. ಗುರುವಿನಂತೆ ಶಿಷ್ಯ. ತಂದೆಯಂತೆ ಮಗ ಎನ್ನುವ ಮಾತಗುಳು ಸತ್ಯವಾಗಿದ್ದು, ಜಕಣಾಚಾರಿಯವರ ಪುತ್ರ ಡಕಣಚಾರಿ ಎನ್ನುವ ಒಬ್ಬ ಮಗನಿದ್ದ ಗುರು, ತಂದೆಯಾಗಿ ನಿಂತವರು ಜಕಣಚಾರಿಯವರ ಸಾಧನೆಯನ್ನ ನೋಡಿ ಬೆರಗಾದರು. ಆಚರಿಯವರು ತನ್ನ ಮಗನ ಸಾಧನೆ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದರು. ಒಬ್ಬ ಪುರುಷನ ಏಳಿಗೆಗೆ ಒಬ್ಬಮಹಿಳೆ ಕಾರಣ ಎನ್ನುವ ಸಂದೇಶದಂತೆ ನೃತ್ಯಗಾರ್ತಿ ಮಂಜರಿಯವರನ್ನ ಮದುವೆಯಾದ ನಂತರ ಪತ್ನಿಯ ಸೌಂದರ್ಯಕ್ಕೆ ಮಾರು ಹೋಗಿ ಶಿಲ್ಪ ಕಲೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಕಲೆಗೆ ವಿಶಿಷ್ಠ ಸ್ಥಾನಮಾನ ನೀಡಿದರು. ಜಕಣಾಚಾರಿಯವರು ದೇವ ಶಿಲ್ಪಿಯಾಗಿ ಮೆರೆದರು. ಪ್ರತಿಯೊಂದು ಸಾಧನೆಗೆ ಶಿಕ್ಷಣ ಮುಖ್ಯ ಪ್ರತಿವೋರ್ವರು ಗುಣಮಟ್ಟದ ಶಿಕ್ಷಣ ಪಡೆಯಲು ಮುಂದಾಗಬೇಕಾಗಿದೆ. ಶಿಲ್ಪಿಗಳು ನಿರ್ಮಿಸಿದ ಕಲೆಯನ್ನ ನಾವು ಸಂರಕ್ಷಿಸಬೇಕಾದುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿವೋರ್ವರು ಅವರ ಶಿಲ್ಪಿ ಕಲೆಯನ್ನ ಗೌರವಿಸಬೇಕಾಗಿದೆ. ಜಕಣಚಾರಿಯವರು ನಮ್ಮನಾಡಿನ ಏಕೈಕ ಹೆಮ್ಮೆಯ ವ್ಯಕ್ತಿ ಎಂದು ಈ. ತುಕರಾಂ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಕುಮಾರಸ್ವಾಮಿ ಕಮ್ಮಾರ, ಶಿವಮೂರ್ತಿ ಆಚಾರ್, ವಿಜಯಕುಮಾರ್, ರಾಘವೇಂದ್ರ, ಕಾರ್ತಿಕ, ಗಿರೀಷ, ನೀಲಕಂಠಪ್ಪ ವೀಣ, ಭಾಸ್ಕರ ಸುವರ್ಣಮಹಾದೇವಮ್ಮ, ಅಲ್ಲದೇ ಹಲವಾರು ಮಹನಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಯಶಸ್ವಿಗೊಳಿಸಿದರು.