ಶಿಲ್ಪಾ ಶಿರೋಡ್ಕರ್ ರ ಹುಟ್ಟುಹಬ್ಬ: ಛೈಂಯಾ ಛೈಂಯಾ ಹಾಡಿಗೆ ಮಲೈಕಾ ಅರೋರಾ ಅಲ್ಲ, ಶಿಲ್ಪಾ ಶಿರೋಡ್ಕರ್ ಮೊದಲ ಇಷ್ಟ ಆಗಿದ್ದರು, ಆದರೆ ದಪ್ಪ ಹೆಚ್ಚಿಗಿದ್ದರೆಂದು ನಿರ್ದೇಶಕರು ಅವರ ಹೆಸರು ಡ್ರಾಪ್ ಮಾಡಿದ್ದರು

ತೊಂಭತ್ತರ ದಶಕದಲ್ಲಿ ಪ್ರೇಕ್ಷಕರ ಹೃದಯವನ್ನು ಗೆದ್ದ ನಟಿಯರಲ್ಲಿ ಶಿಲ್ಪಾ ಶಿರೋಡ್ಕರ್ ಕೂಡ ಒಬ್ಬರು. ಇಂದು ಅವರ ೫೨ನೇ ಜನ್ಮದಿನ.
ಮಾಜಿ ಮಿಸ್ ಇಂಡಿಯಾ ಮತ್ತು ಬಾಲಿವುಡ್ ನಟಿ ನಮ್ರತಾ ಶಿರೋಡ್ಕರ್ ಅವರ ಸಹೋದರಿ ಆಗಿರುವ ಶಿಲ್ಪಾ ಶಿರೋಡ್ಕರ್ ತನ್ನ ಕೆರಿಯರ್ ನ ಆರಂಭವನ್ನು ೧೯೮೯ ರಲ್ಲಿ ಮಿಥುನ್ ಚಕ್ರವರ್ತಿಯವರ ಮತ್ತು ರೇಖಾ ಅಭಿನಯದ ಫಿಲ್ಮ್ ’ಭ್ರಷ್ಟಾಚಾರ್’ ದಿಂದ ಆರಂಭಿಸಿದ್ದರು. ಆದರೆ ಅವರಿಗೆ ಬಾಲಿವುಡ್ ನಲ್ಲಿ ಗುರುತು ಸಿಕ್ಕಿದ್ದು ಅನಿಲ್ ಕಪೂರ್ ಅಭಿನಯದ ’ಕಿಶನ್ ಕನ್ಹಯ್ಯಾ’ ಫಿಲ್ಮ್ ನಿಂದ. ಅಲ್ಲಿಂದ ಶಿಲ್ಪಾ ಶಿರೋಡ್ಕರ್ ಹಿಂದೆ ಸರಿಯಲೇ ಇಲ್ಲ .
ಶಿಲ್ಪಾ ಶಿರೋಡ್ಕರ್ ಅವರು ಆಗಿನ ಖ್ಯಾತ ನಟ ಮಿಥುನ್ ಚಕ್ರವರ್ತಿ ಜೊತೆಗೆ ೯ ಫಿಲ್ಮ್ ಗಳಲ್ಲಿ ಅಭಿನಯಿಸಿದ್ದಾರೆ .ಶಿಲ್ಪಾ ಶಿರೋಡ್ಕರ್ ಒಂದರ ನಂತರ ಒಂದರಂತೆ ಆಗಿನ ಪ್ರಖ್ಯಾತ ನಟರ ಜೊತೆ ಅಭಿನಯಿಸುತ್ತಾ ಹೋದರು. ಆದರೆ ಮಿಥುನ್ ಚಕ್ರವರ್ತಿ ಮತ್ತು ಶಿಲ್ಪಾ ಶಿರೋಡ್ಕರ್ ಜೋಡಿ ಆವಾಗ ಬಹು ಪ್ರಖ್ಯಾತಿಯಾಗಿತ್ತು. ಒಂದು ರೀತಿಯಲ್ಲಿ ಶಿಲ್ಪಾ ಶಿರೋಡ್ಕರ್ ಅವರಿಗೆ ಉತ್ತಮ ಫಿಲ್ಮ್ ಗಳು ಬಂದಿದ್ದರೂ ಇನ್ನೊಂದೆಡೆ ಅವರ ದೇಹದ ತೂಕ ಹೆಚ್ಚುತ್ತಲೇ ಹೋಗುತ್ತಿತ್ತು.ಈ ಕಾರಣ ಅವರು ಸಂಕಷ್ಟದಲ್ಲಿ ಸಿಲುಕಿದರು.
ಬಹಳ ಜನಕ್ಕೆ ಗೊತ್ತಿರಲಾರದು- ಶಾರುಖ್ ಖಾನ್ ಮತ್ತು ಮನಿಷಾ ಕೊಯಿರಾಲ ಅಭಿನಯದ ಫಿಲ್ಮ್ ’ದಿಲ್ ಸೇ’ ಇದರ ಪ್ರಖ್ಯಾತ ಹಾಡು ಛೈಂಯ್ಯಾ ಛೈಂಯ್ಯಾ ಇದಕ್ಕಾಗಿ ಮೊದಲು ಶಿಲ್ಪಾ ಶಿರೋಡ್ಕರ್ ಅವರನ್ನು ಕರೆಸಲಾಗಿತ್ತು.ಅವರು ಸಹಿ ಕೂಡಾ ಮಾಡಿದ್ದರು. ಆದರೆ ಫಿಲ್ಮ್ ನ ನಿರ್ದೇಶಕರು ಶಿಲ್ಪಾ ಅವರ ದಪ್ಪ ಶರೀರವನ್ನು ನೋಡಿ ಈ ಹಾಡಿಗೆ ಅವರ ಆಯ್ಕೆಯನ್ನು ನಿರಾಕರಿಸಿದರು. ನಂತರ ಅದಕ್ಕೆ ಮಲೈಕಾ ಅರೋರಾರನ್ನು ಆಯ್ಕೆ ಮಾಡಿದರು . ಶಿಲ್ಪಾ ಶಿರೋಡ್ಕರ್ ವರ್ಷ ೨೦೦೦ ದ ತನಕ ಫಿಲ್ಮ್ ಗಳಲ್ಲಿ ಕೆಲಸ ಮಾಡಿದ್ದರು. ಆನಂತರ ಬಾಲಿವುಡ್ ನ ಅಭಿನಯಕ್ಕೆ ಬ್ರೇಕ್ ನೀಡಿದರು. ೧೩ ವರ್ಷಗಳ ನಂತರ ೨೦೧೩ರಲ್ಲಿ ಟಿವಿ ಮೂಲಕ ಶಿಲ್ಪಾ ಹಿಂತಿರುಗಿ ಬಂದರು. ’ಏಕ್ ಮುಟ್ಠೀ ಆಸ್ಮಾನ್’ ಧಾರಾವಾಹಿಯಲ್ಲಿ ಶಿಲ್ಪಾ ಮತ್ತೆ ಅಭಿನಯ ಕ್ಷೇತ್ರಕ್ಕೆ ಇಳಿದಿದ್ದು ಅವರು ಅನ್ಯ ಸೀರಿಯಲ್ ಗಳಲ್ಲಿಯೂ ಕಾಣಿಸಿ ಕೊಂಡಿದ್ದಾರೆ .ಆದರೆ ಅವರು ಫಿಲ್ಮ್ ರಂಗಕ್ಕೆ ಸದ್ಯ ಹಿಂತಿರುಗಿ ಬಂದಿಲ್ಲ.

ಸುಷ್ಮಿತಾ ಸೇನ್ ರ ಜನ್ಮದಿನ: ಒಂದು ಪ್ರಶ್ನೆಗೆ ನೀಡಿದ ಉತ್ತರವು ’ಮಿಸ್ ಯುನಿವರ್ಸ್’ ಕಿರೀಟ ದಕ್ಕಿಸಿತ್ತು!

ಬಾಲಿವುಡ್ ನಟಿ ಸುಷ್ಮಿತಾ ಸೇನ್ ನವೆಂಬರ್ ೧೯ರಂದು ತನ್ನ ೪೬ನೇ ಜನ್ಮ ದಿನವನ್ನು ಆಚರಿಸಿದರು. ಸುಷ್ಮಿತಾ ಅವರ ಫಿಲ್ಮೀ ಕೆರಿಯರ್ ಅನೇಕ ಏರಿಳಿತಗಳನ್ನು ಕಂಡಿದೆ. ೨೭ ವರ್ಷಗಳ ಮೊದಲು ಅವರು ಆ ತನಕ ಯಾರೂ ದಕ್ಕಿಸಿಕೊಳ್ಳಲಾಗದ ಕೀರ್ತಿಯನ್ನು ಸಂಪಾದಿಸಿದ್ದರು. ಆ ತನಕ ಈ ಕಿರೀಟ ಯಾರ ಪಾಲಿಗೂ ದಕ್ಕಿರಲಿಲ್ಲ ,ಅದುವೇ ’ಮಿಸ್ ಯುನಿವರ್ಸ್’.


ಸುಷ್ಮಿತಾ ಸೇನ್ ಫಿಲಿಪ್ಪೀನ್ಸ್ ನಲ್ಲಿ ೧೯೯೪ ರಲ್ಲಿ ನಡೆದ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಸುಷ್ಮಿತಾ ಅವರಿಗಿಂತ ಮೊದಲು ಭಾರತೀಯ ಮಹಿಳೆಗೆ ಈ ಕಿರೀಟ ದಕ್ಕಿರಲಿಲ್ಲ. ಅದಕ್ಕಿಂತ ಮೊದಲು ೪೧ ಸಲ ಈ ಸ್ಪರ್ಧೆ ನಡೆದಿತ್ತು. ೪೨ನೇ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ೭೭ ದೇಶದ ಸ್ಪರ್ಧಿಗಳು ಭಾಗವಹಿಸಿದ್ದರು. ಸುಷ್ಮಿತಾ ಅವರಿಗೆ ಈ ಸಂದರ್ಭದಲ್ಲಿ ಒಂದು ಪ್ರಶ್ನೆ ಕೇಳಲಾಗಿತ್ತು- “ಒಂದು ವೇಳೆ ನೀವು ಯಾವುದಾದರೂ ಐತಿಹಾಸಿಕ ಘಟನೆಯನ್ನು ಬದಲಿಸುವುದಾದರೆ ಅದು ಏನು?”
ಅದಕ್ಕೆ ಸುಷ್ಮಿತಾ ನೀಡಿದ ಉತ್ತರ- “ಇಂದಿರಾಗಾಂಧಿಯವರ ಮೃತ್ಯು”.
ಈ ಉತ್ತರ ತೀರ್ಪುಗಾರರನ್ನು ಬಹಳಷ್ಟು ಸೆಳೆದಿತ್ತು .
ಸುಷ್ಮಿತಾ ಅವರಿಗೆ ೨೦೨೦ ಬಹಳ ಲಕ್ಕಿ ವರ್ಷ ಎಂದು ಸಾಬೀತಾಗಿದೆ. ಅವರು ಡಿಸ್ನಿ ಹಾಟ್ ಸ್ಟಾರ್ ನಲ್ಲಿ ವೆಬ್ ಸೀರೀಸ್ ’ಆರ್ಯಾ’ ಮೂಲಕ ಅಭಿನಯ ಪ್ರಪಂಚಕ್ಕೆ ಹಿಂತಿರುಗಿ ಬಂದಿದ್ದಾರೆ. ಈ ಸೀರೀಸ್ ಡಚ್ ಸೀರೀಸ್ ಪೆನೋಜಾ ಇದರ ಹಿಂದಿ ರಿಮೇಕ್ ಆಗಿದೆ.
ಇದರಲ್ಲಿ ಸುಷ್ಮಿತಾರ ಅಭಿನಯಕ್ಕೆ ಬಹಳ ಪ್ರಶಂಸೆಗಳು ಬಂದಿವೆ. ಶೀಘ್ರವೇ ಇದರ ಎರಡನೇ ಸೀಸನ್ ಬರಲಿದೆ .ಬಾಲಿವುಡ್ ನಲ್ಲಿ ಹತ್ತು ವರ್ಷಗಳ ಹಿಂದೆ ೨೦೧೦ರಲ್ಲಿ ಬಂದ ’ನೋ ಪ್ರಾಬ್ಲಮ್’ ಫಿಲ್ಮ್ ನ ನಂತರ ಸುಷ್ಮಿತಾ ಕಾಣಿಸಿಕೊಂಡಿಲ್ಲ .
ಸುಷ್ಮಿತಾ ಸೇನ್ ಕಳೆದ ಎರಡೂವರೆ ವರ್ಷಗಳಿಂದ ರೂಪದರ್ಶಿ ರೋಹಮನ್ ಶಾಲ್ ಜೊತೆಗೆ ಡೇಟಿಂಗ್ ಸುದ್ದಿಯಲ್ಲಿದ್ದಾರೆ. ರೋಹಮನ್ ಮತ್ತು ಸುಷ್ಮಿತಾರ ವಯಸ್ಸಿನಲ್ಲಿ ಹದಿನೈದು ವರ್ಷಗಳ ಅಂತರ ಇದೆ. ಸುಷ್ಮಿತಾ ಅವರಿಗೆ ೪೬ ವರ್ಷ. ಆದರೆ, ರೋಹಮನ್ ಗೆ ೩೦ ವರ್ಷ. ಇಬ್ಬರೂ ಜೊತೆಯಲ್ಲಿ ವಾಸಿಸುತ್ತಿದ್ದಾರೆ .ಸುಷ್ಮಿತಾ ಅವರಿಗೆ ಇಬ್ಬರು ಮಗಳಂದಿರು ರೆನೇ ಮತ್ತು ಅಲಿಶಾ ಇದ್ದಾರೆ.