
ಕಲಬುರಗಿ,ಮಾ.3- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಪ್ರಾದೇಶಿಕ ಸಂಶೋಧನಾ ಕೇಂದ್ರದಲ್ಲಿ ಪ್ರೊ.ಡಾ.ಕಾಶಿನಾಥ ಬಿರಾದಾರ ಮತ್ತು ಡಾ.ಶರಣಗೌಡ ಬಿರಾದಾರ ಅವರ ಮಾರ್ಗದರ್ಶನದಲ್ಲಿ ಶಿಲ್ಪಾ ಎಚ್.ದೇಸಾಯಿ ಅವರು ಮಂಡಿಸಿರುವ ಸಂಶೋದನ ಪ್ರಬಂಧಕ್ಕೆ ವಿವಿ ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.
ಅವರು, ಥಿಯೋರಿಟಿಕಲ್ ಸ್ಟಡಿ ಆಫ್ ಲುಬಿರಿಕೇಶನ್ ಕ್ಯಾರೆಕ್ಟರಸ್ಟಿಕ್ಸ್ ಆಫ್ ಬಿಯರಿಂಗ್ ವಿಥ್ ಅಪ್ಲಾಯಿಡ್ ಮ್ಯಾಗ್ನೆಟಿಕ್ ಫೀಲ್ಡ ಎಂಬ ವಿಷಯದ ಮೇಲೆ ಮಂಡಿಸಿರುವ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಬಿಸಿದೆ.
ಇಲ್ಲಿನ ಪ್ರತಿಷ್ಠಿತ ಶರಣಬಸವೇಶ್ವರ ವಿಶ್ವದ್ಯಾಲಯದ ಇಂಜನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆಲ್ಲಿರುವ ಶಿಲ್ಪಾ ದೇಸಾಯಿ ಅವರ ಈ ಸಾಧನೆಗೆ ಸಿಬ್ಬಂದಿ ವರ್ಗ, ಹಿತೈಷಿಗಳು ಹಾಗೂ ಕುಟುಂಬದವರು ಹರ್ಷ ವ್ಯಕ್ತಪಡಿಸಿ ಶುಭಹಾರೈಸಿದ್ದಾರೆ.