ಶಿಲ್ಪಕಲೆಯ ಅನನ್ಯ ಸಾಧಕ ಸೋಮಾಚಾರಿ

ಕೋಲಾರ, ಏ.೨೨:ಭಾರತೀಯ ಶಿಲ್ಪಕಲೆಯಲ್ಲಿ ಸಂಸ್ಕೃತಿಯ ಅಸ್ಮಿತೆ ಅಡಗಿದೆ. ಈ ಶಿಲ್ಪ ಕಲೆ ಪದ್ದತಿಯನ್ನು ಪ್ರೋತ್ಸಾಹಿಸಬೇಕೆಂದು ಡಾ. ಶರಣಪ್ಪ ಗಬ್ಬೂರ್ ಅಭಿಪ್ರಾಯ ಪಟ್ಟರು.
ಅವರು ನಗರದ ಕೀಲುಕೋಟೆ ಬಡಾವಣೆಯಲ್ಲಿ ಜಿಲ್ಲಾ ಯುವ ಬರಹಗಾರರ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಉದ್ಘಾಟಿಸಿ ಮಾತಾನಾಡುತ್ತಿದ್ದರು.ಶಿಲ್ಪಕಲೆಗಳು ಇಂದು ಯಾಂತ್ರೀಕೃತ ಬದುಕಿಗೆ ಸಿಲುಕಿ ನಶಿಸಿ ಹೋಗುವಂತಹ ಸ್ಥಿತಿಗೆ ತಲುಪಿವೆ. ಕಲೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಶಿಲ್ಪಗಾರರನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಶಿಲ್ಪಚಾರ್ಯರಿಗೆ ಸೂಕ್ತ ವಾದ ಸೌಲಭ್ಯಗಳನ್ನು ಒದಗಿಸಿ ಅವರಿಗೆ ವಿಶೇಷವಾದ ಶಿಲ್ಪ ಶಾಲೆಗಳನ್ನು ಸ್ಥಾಪಿಸಬೇಕು. ಅಲ್ಲಿ ನುರಿತ ಶಿಲ್ಪಚಾರ್ಯರನ್ನು ನಿಯುಕ್ತಿಗೊಳಿಸಬೇಕು.
ಈ ಮೂಲಕ ಮುಂದಿನ ತಲೆಮಾರಿಗೂ ಈ ಪರಂಪರೆಯನ್ನು ಉಳಿಸಬೇಕೆಂದರು.ನಾರಾಯಣ್ ಪಿಯು ಕಾಲೇಜಿನ ಉಪನ್ಯಾಸಕ ಅನೀಫ್ ಸಾಬ್ ಮಾತಾನಾಡಿ ನಮ್ಮ ದೇಶದ ವಿಭಿನ್ನ ಸಂಸ್ಕೃತಿ ಮತ್ತು ಸವಾಲುಗಳ ನಡುವೆಯೂ ನಮ್ಮ ಹಲವು ಕಿರಿಯ ಹಿರಿಯ ಶಿಲ್ಪಿಗಳು ಪಾಶ್ಚಾತ್ಯ ಪ್ರಭಾವಗಳನ್ನು ಅರಗಿಸಿಕೊಂಡು ಸ್ವಂತಿಕೆಯನ್ನು ಮೆರೆಯುವುದರೊಂದಿಗೆ ಇಂದು ರಾಷ್ಟ್ರಮಟ್ಟದಲ್ಲಿ ನಿಲ್ಲಬಲ್ಲ ಸಾಮಾಥ್ರ್ಯವನ್ನು ಪಡೆದುಕೊಂಡಿದ್ದಾರೆ. ಈ ನೆಲೆಯಲ್ಲಿ ತಮ್ಮ ಶಿಲ್ಪಗಳ ಮೂಲಕ ತೋರ್ಪಡಿಸುವ ಕೋಲಾರದ ಏಕೈಕ ವ್ಯಕ್ತಿ ಸೋಮಾಚಾರಿ ಎಂದು ಶ್ಲಾಘಿಸಿದರು.ಸನ್ಮಾನಿತರಾದ ಸೋಮಾಚಾರಿ ಮಾತಾನಾಡಿ ಸಾಂಪ್ರದಾಯಿಕ ಶಿಲ್ಪಕಲಾ ಕ್ಷೇತ್ರವನ್ನು ವೃತ್ತಿ ಪ್ರವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಅದರಲ್ಲಿ ಮುಂದುವರಿಯುವವರು ಅಪರೂಪ. ಆದರೆ ಇದೇ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ತಾಳಾಮಾನ ಜ್ಞಾನದೊಂದಿಗೆ ಶಿಲ್ಪಗಳನ್ನು ರಚಿಸುತ್ತಾ ಶಿಲ್ಪಿಗಳು ಸಾಗುತ್ತಿದ್ದಾರೆ. ಇಂತಹ ಕಲಾವಿದರನ್ನು ಗುರುತಿಸುವುದು ಸಮಾಜದ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ಕ್ರೇಜಿ ಕ್ರಿಯೇಟಿವ್ ಸಂಸ್ಥೆಯ ಮಹೇಶ್ ರಾವ್ ಕದಂ, ಶಿಕ್ಷಕರಾದ ಜನಾರ್ದನ್, ಸಿರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ ಸುಬ್ಬರಾಮಯ್ಯ, ಬಾಬ ವಿದ್ಯಾ ಸಂಸ್ಥೆಯ ಶಿಕ್ಷಕ ವೇಣು, ನೌಕರರ
ಸಂಘದ ಮುರುಳಿಮೋಹನ್, ರಾಮಚಂದ್ರ, ಪುನೀತ್ ಮತ್ತಿತರರು ಉಪಸ್ಥಿತರಿದ್ದರು.