ಶಿಲೆಯಲ್ಲಿ ಕಲೆಯನ್ನು ಅರಳಿಸಿದ ಅಪ್ರತಿಮ ಕಲೆಗಾರ ಜಕಣಾಚಾರಿ : ಶ್ರೀಮತಿ ಅನುರಾಧ ಜಿ.

ಶಿವಮೊಗ್ಗ, ಜನವರಿ 01 : ಶಿಲೆಯಲ್ಲಿ ಕಲೆಯನ್ನು ಅರಳಿಸಿ, ಜಗದ್ವಿಖ್ಯಾತನಾದ ಅಪ್ರತಿಮ ಕಲಾವಿದ ಜಕಣಾಚಾರಿ ಸರ್ವಕಾಲಕ್ಕೂ ಚಿರಸ್ಥಾಯಿಯಾಗುಳಿದಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿ ಶ್ರೀಮತಿ ಜಿ.ಅನುರಾಧ ಅವರು ಹೇಳಿದರು.ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ವಿಶ್ವಕರ್ಮ ಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಕುವೆಂಪು ರಂಗಮAದಿರದಲ್ಲಿ ಸರಳವಾಗಿ ಏರ್ಪಡಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿಯವರ ಮೊದಲ ಸಂಸ್ಮರಣಾ ಜಯಂತ್ಯೋತ್ಸವದಲ್ಲಿ ಪಾಲ್ಗೊಂಡು, ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡುತ್ತಿದ್ದರು.  ಕಲ್ಯಾಣಿ ಚಾಲುಕ್ಯ ಮತ್ತು ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಮತ್ತು ಹಳೇಬೀಡುಗಳಲ್ಲಿ ಅತ್ಯಂತ ನಾಜೂಕಾದ ಕುಸುರಿ ಕೆತ್ತನೆಗಳಿಂದ ಹಲವಾರು ದೇವಾಲಯಗಳನ್ನು ನಿರ್ಮಿಸಿದ ಜಕಣಾಚಾರಿ ಭಗವತ್ ಸಮೂಹವನ್ನು ತನ್ನೆಡೆಗೆ ಸೆಳೆದುಕೊಂಡು ಪೂಜನೀಯ ಸ್ಥಾನ ಪಡೆದ ಮಹನೀಯ ಎಂದರು. ಪ್ರಸ್ತುತ ಘನ ಸರ್ಕಾರಗಳೂ ಕೂಡ ಶಿಲ್ಪಿ ಜಕಣಾಚಾರಿಯ ಹೆಸರಿನಲ್ಲಿ ಶಿಲ್ಪಕಲೆಗೆ ಅತಿ ಹೆಚ್ಚಿನ ಕೊಡುಗೆ ನೀಡಿದ ಕಲೆಗಾರನಿಗೆ ಜಕಣಾಚಾರಿ ಪ್ರಶಸ್ತಿ ನೀಡಿ ಗೌರವಿಸುತ್ತಿವೆ ಎಂದ ಅವರು, ಶಿಲ್ಪಿ ಎಂದರೆ ಪ್ರಮುಖವಾಗಿ ರೂಪವನ್ನು ನೀಡುವ,  ಜನರಲ್ಲಿ ಶ್ರದ್ಧೆ, ಭಕ್ತಿಭಾವವನ್ನು ಮೂಡಿಸುವ ಹಾಗೂ ಗೌರವಯುತ ಸಂಘಟಿತ ಸಮಾಜ ನಿರ್ಮಿಸುವಲ್ಲಿ ಜಕಣಾಚಾರಿ ಜನಮಾನಸದಲ್ಲಿ ನೆಲೆಯೂರಿದ್ದಾನೆ ಎಂದವರು ನುಡಿದರು. ಈ ಸಂದರ್ಭದಲ್ಲಿ ಶ್ರೀಮತಿ ಕಲ್ಪನಾರಮೇಶ್, ಶ್ರೀಮತಿ ಆರತಿ ಪ್ರಕಾಶ್, ಶ್ರೀಮತಿ ಸೀತಾಲಕ್ಷಿö್ಮÃ, ವಿಶ್ವಕರ್ಮ ಸಮಾಜದ ಮುಖಂಡರಾದ ಬಿ.ರಾಮು, ವೀರಭದ್ರಾಚಾರ್, ಸತೀಶ್, ಪ್ರದೀಪ್ ನಾಗರಾಜಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಉಮೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.