ಶಿರೋಳ್ಳಿಗೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥ ರಥ, ಭವ್ಯ ಸ್ವಾಗತ ಕೋರಿದ ಗ್ರಾಮಸ್ಥರು

ಚಿಂಚೋಳಿ,ಫೆ.8-ಸಂವಿದಾನ ದಿನಾಚಣೆಯ ಪ್ರಯುಕ್ತವಾಗಿ ಸಂವಿಧಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಚಿಂಚೋಳಿ ತಾಲೂಕ ಆಡಳಿತಾ ಮತ್ತು ತಾಲೂಕ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಸಂವಿಧಾನ ಜಾಗೃತಿ ಜಾಥವನ್ನು ಹಮ್ಮಿಕೊಂಡಿದ್ದು ಚಿಂಚೋಳಿ ತಾಲೂಕಿನ ಶಿರೋಳ್ಳಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥ ರಥವು ಆಗಮಿಸುತ್ತಿದ್ದಂತೆ ಗ್ರಾಮ ಪಂಚಾಯತ ವ್ಯಾಪ್ತಿಯ ಜನ ಪ್ರತಿನಿಧಿಗಳು, ಸ್ಥಳೀಯ ಮುಖಂಡರುಗಳು ಮತ್ತು ಗ್ರಾಮಸ್ಥರು ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಅಂಬೇಡ್ಕರ್‍ರವರಿಗೆ ಜೈಕಾರ ಹಾಕಿದರು. ಹಾಗೆಯೇ ಸಂವಿದಾನದ ಪೀಠಿಕೆಯನ್ನು ಓದಲಾಯಿತು.
ಇನ್ನು ಇದೇ ಸಂಧರ್ಭದಲ್ಲಿ ಹಲವು ಕಲಾ ತಂಡಗಳೋದಿಗೆ ಸಂವಿಧಾನ ಜಾಗೃತಿ ಜಾಥ ರಥವು ದೊಡ್ಡ ತೋಗೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಲಾಯಿತು, ಹಾಗೆಯೇ ವಿಶೇಷವಾಗಿ ಜಟ್ಟೂರ್ ಮತ್ತು ಕರ್ಚ್ ಖೇಡ್‍ಗೆ ಗ್ರಾಮಕ್ಕೆ ಸಂವಿಧಾನ ಜಾಗೃತಿ ಜಾಥ ರಥವು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ರಥಕ್ಕೆ ಭವ್ಯ ಸ್ವಾಗತ ಕೋರಿದರು ಮತ್ತು ಅಂಬೇಡ್ಕರ್ ರಥಕ್ಕೆ ಪುಷ್ಪ ನಮನ ಸಲ್ಲಿಸಿದರು. ಅನ್ನದಾಸೋಹ ನಡೆಯಿತು. ಡೊಳ್ಳು ಕುಣಿತ ಕುಣಿತ ಸೇರಿದಂತೆ ಹಲವು ಕಲಾ ತಂಡಗಳೊದಿಗೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ರಥದ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಶಿರೂಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಈರಮ್ಮ ನಾಗೇಂದ್ರಪ್ಪ, ಕಲ್ಬುರ್ಗಿ ಕೈಗಾರಿಕಾ ಇಲಾಖೆಯ ನಿರ್ದೇಶಕÀ ಅಬ್ದುಲ್ ಹಜೀಮ್, ಚಿಂಚೋಳಿಯ ಗ್ರೇಡ್-2 ತಹಸಿಲ್ದಾರ್ ವೆಂಕಟೇಶ್ ದುಗ್ಗನ್, ತಾಲೂಕ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಶಂಕರ ರಾಠೋಡ್, ತಾಲೂಕ ಆರೋಗ್ಯ ಅಧಿಕಾರಿ ಡಾ.ಮಹಮ್ಮದ್ ಗಫರ್, ಶಿಶು ಅಭಿವೃದ್ಧಿ ಅಧಿಕಾರಿ ಗುರುಪ್ರಸಾದ್ ಕವಿತಾ, ಪುರಸಭೆ ಅಧಿಕಾರಿ ಕಾಶಿನಾಥ ಧನ್ನಿ, ವಾಟರ್ ಸಪ್ಲೈ ಇಲಾಖೆ ಅಧಿಕಾರಿ ರಾಹುಲ್, ಬಿಸಿಎಂ ಇಲಾಖೆಯ ಅಧಿಕಾರಿಗಳಾದ ಅನುಸೂಯಾ, ಚೌವ್ಹಾಣ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಾಂತಪ್ಪ, ಕೈಗಾರಿಕೆ ಅಧಿಕಾರಿ ನಳಿನಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ಬಸವರಾಜ ಬೈನೂರ್, ಕನ್ನಡ ಸಾಹಿತಿ ಪರಿಷತ್ತು ತಾಲೂಕ ಅಧ್ಯಕ್ಷÀ ಸುರೇಶ್ ದೇಶಪಾಂಡೆ, ನಿಡಗುಂದಾ ವಲಯದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷÀ ಸಂಜೀಕುಮಾರ ಪಾಟೀಲ ಹಲಕೋಡ, ಕಾರ್ಯಕ್ರಮದ ವಿಶೇಷ ಉಪನ್ಯಾಸ ವೀರಣ್ಣ ಸುಗಂಧಿ, ಮತ್ತು ವಿವಿಧ ಇಲಾಖೆ ಸಿಬ್ಬಂದಿಗಳಾದ ನಾಗಶೆಟ್ಟಿ ಭದ್ರಶೆಟ್ಟಿ, ಕೇಶವ್ರಾವ್ ಕುಲಕರ್ಣಿ, ರವಿ ಚಿಟ್ಟ, ಭೀಮರೆಡ್ಡಿ, ಮತ್ತು ಆನೇಕಲ್ ವಿವಿಧ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.