ಶಿರೂರಿನ ಕೆರೆಗೆ ಶಾಸಕರಿಂದ ಭಾಗಿನ ಅರ್ಪಣೆ

ಬಾಗಲಕೋಟೆ,ನ.8 : ಸತತ ಮಳೆಯಿಂದ 13 ವರ್ಷಗಳ ನಂತರ ಭರ್ತಿಯಾಗಿ ಕೆರೆಕೋಡಿ ಹರಿಯುತ್ತಿರುವ ಸಂದರ್ಭದಲ್ಲಿ ತಾಲೂಕಿನ ಶಿರೂರಿನ ಐತಿಹಾಸಿಕ ಕೆರೆಗಳಿಗೆ ಶಾಸಕ ಡಾ. ವೀರಣ್ಣಾ ಚರಂತಿಮಠ ಸಂಸದ ಪಿ.ಸಿ ಗದ್ದಿಗೌಡರ ಭಾಗಿನ ಅರ್ಪಣೆ ಮಾಡಿದರು.
ನಂತರ ಮಾತನಾಡಿದ ಅವರು ಈ ಭಾರಿ ಉತ್ತಮ ಮಳೆಯಾಗಿದ್ದು, ಹಾಗೂ ಆಲಮಟ್ಟಿ ಹಿನ್ನಿರು ಸಹ ಸ್ವಲ್ಪ ಮಟ್ಟಿಗೆ ಆಸರೆಯಾಗಿದೆ. ರೈತರಿಗೆ ಹರ್ಷದಾಯಕವಾಗುವುದರೊಂದಿಗೆ ಗಂಗಾಮಾತೆ ಗ್ರಾಮಸ್ಥರಿಗೆ ಸುಖಶಾಂತಿ ನೆಮ್ಮದಿ ನೀಡಲಿ ಎಂದರು.
ಸಂಸದ ಪಿ.ಸಿ ಗದ್ದಿಗೌಡರ ಮಾತನಾಡಿ ಕೆರೆಗಳು ಭರ್ತಿಯಾಗುವುದರಿಂದ ಅಂತರಜಲ ಹೆಚ್ಚುತ್ತದೆ ಎಂದ ಅವರು ಕೊರೋನಾ ಇನ್ನೂ ಜನತೆಯನ್ನು ಕಾಡುತ್ತಿದೆ ಮಾಸ್ಕ ಧರಿಸಿ ಅಂತರ ಕಾಯ್ದುಕೊಳ್ಳಬೇಕೆಂದರು. ಈ ಗಂಗಾ ಮಾತೆ ಕೊರೋನಾವನ್ನು ತೊಲಗಿಸಿ ಪ್ರತಿಯೊಬ್ಬರಿಗೂ ನೆಮ್ಮದಿ ಜೀವನ ಸಿಗಲಿ ಎಂದರು. ಇದಕ್ಕೂ ಮೊದಲು ಈರಯ್ಯ ಮುಷ್ಠಿಗೇರಿಯವರ ನೇತೃತ್ವದಲ್ಲಿ ಗಂಗಾಮತಾಸ್ಥರಾದ ಅಂಬಿಗೇರ ಸಮಾಜ ಬಾಂಧವರಿಂದ ನಾನಾ ಪೂಜೆಗಳು ನಡೆದವು, ನಂತರ ಗಂಗಾಮಾತೆಗೆ ಉಡಿತುಂಬಿ ಪೂಜೆ ಸಲ್ಲಿಸಲಾಯಿತು.
ತಾಪಂ ಅಧ್ಯಕ್ಷ ಚನ್ನನಗೌಡ ಪರನಗೌಡರ. ತಾಪಂ ಸದಸ್ಯ ರಾಜಶೇಖರ ಅಂಗಡಿ, ಜಿಲ್ಲಾ ಪಂಚಾಯತಿ ಸದಸ್ಯ ರಂಗನಗೌಡ ಗೌಡರ, ಸುರೇಶ ದೇಸಾಯಿ, ನ್ಯಾಯವಾದಿ ಸಿ ವಿ ಕೋಟಿ, ಸಿ.ಎಂ ಪ್ಯಾಟಿಶೆಟ್ಟರ, ಬಸಪ್ಪ ಮೆನಸಗಿ, ಶೆಖಪ್ಪ ಮಾಚಾ, ಬಸವರಾಜ ಬಿಲ್ಲಾರ, ಸಿದ್ದಪ್ಪ ಮೆಳ್ಲಿ, ಗುರಮ್ಮ ಸಂಕೀಣಮಠ, ಲಲೀತಾ ಪಾಟೀಲ ಗಿರಿಜಾ ಎಮ್ಮಿಮಠ, ನಂದಾ ಹೊಸಮಠ ಸೇರಿದಂತೆ ಮಹಿಳೆಯರು, ಗ್ರಾಪಂ ಸದಸ್ಯರು ಗ್ರಾಮಸ್ಥರು ಬಿಜೆಪಿ ಗ್ರಾಮೀಣ ಘಟಕದ ಪದಾಧಿಕಾರಿಗಳೂ ಇದ್ದರು.