ಶಿರಿಡಿ ಸಾಯಿ ಸೇವಾ ಸತ್ಸಂಗ್ ಟ್ರಸ್ಟ್ ನ 23 ನೇ ವಾರ್ಷಿಕೋತ್ಸವಕ್ಕೆ ಚಾಲನೆ


* ನೇತ್ರ ತಪಾಸಣೆ ರಕ್ತದಾನ ಇಂದು
* ಸಾಮೂಹಿಕ ಶ್ರೀಸಾಯಿ ಸತ್ಯವ್ರತ .
* ಶ್ರೀರಾಮ ದೀಪೋತ್ಸವ, ಸಮಾರೋಪ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.19: ಇಲ್ಲಿನ ಶ್ರೀ ಶಿರಿಡಿ ಸಾಯಿ ಸೇವಾ ಸತ್ಸಂಗ್ ಟ್ರಸ್ಟ್ ನ  23 ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಬಲಿಜ ಭವನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ  ವಿವಿಧ ಸಮಾಜ ಮುಖಿ  ಕಾರ್ಯಕ್ರಮಗಳಿಗೆ ಸಾಯಿ ಬಾಬನಿಗೆ ಪೂಜೆ ಸಲ್ಕಿಸುವ ಮೂಲಕ ಚಾಲನೆ ನೀಡಲಾಯಿತು.
ಬಳ್ಳಾರಿಯ ದಿ.ಪ್ರೋವಿನ್ ಷಿಯಲ್ ವೈಶ್ಯ ಎಜುಕೇಷನ್ ಫಂಡ್ ನ  ಪ್ರಧಾನ ಕಾರ್ಯದರ್ಶಿ ಪತ್ತಿ ಗೋಪಾಲಕೃಷ್ಣ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ, ನನ್ನ ಸೇವೆಯಲ್ಲ ವೈಶ್ಯ ಮಕ್ಕಳ ಶಿಕ್ಷಣಕ್ಕೆ ಮೀಸಲಿರಿಸಿದೆ. ಯಾರೇ ಸಮಾಜ ಸೇವೆ ಮಾಡಲಿ ಅದಕ್ಕೆ ನನ್ನ ಸಹಕಾರ ಇರುತ್ತೆ ಎಂದರು.
ಟ್ರಸ್ಟ್ನ ಅಧ್ಯಕ್ಷ  ಆರ್ ಗೋಪಾಲ ಕೃಷ್ಣ ಅವರು. ನೇತ್ರ ತಜ್ಞ ದಿ. ಡಾ. ನಾಗರಾಜ್ ಅವರ ಸೇವೆಯನ್ನು ಸ್ಮರಿಸಿ. ಸಭೆಯಲ್ಲಿ ಮೌನಾಚರಣೆ ಸಲ್ಲಿಸಲಾಯ್ತು.
ನಂತರ ಡಾ.ವಿಜಯ ನಾಗರಾಜ್ ನೇತೃತ್ವದಲ್ಲಿ 500 ಕ್ಕೂ ಹೆಚ್ಚು ಜನರ ನೇತ್ರ ತಪಾಸಣೆ ಮಾಡಲಾಯ್ತು. ಅಲ್ಲದೆ ರಕ್ತದಾನ ಕಾರ್ಯವೂ ನಡೆಯಿತು. ಟ್ರಸ್ಟ್ ನ ಪದಾಧಿಕಾರಿಗಳು, ಸೇವಾ ಕಾರ್ಯಕರ್ತರು ಪಾಲ್ಗೊಂಡಿದ್ದರು. 
ನಾಳೆ  ವಾರ್ಷಿಕೋತ್ಸವ ಪ್ರಯುಕ್ತ ಉಚಿತ ಸಾಮೂಹಿಕ ಶ್ರೀಸಾಯಿ ಸತ್ಯವ್ರತ ಹಮ್ಮಿಕೊಂಡಿದೆ. ಬೆಳಿಗ್ಗೆ ಅಭಿಷೇಕ, 10 ಗಂಟೆಗೆ ಸಾಮೂಹಿಕ ಶ್ರೀಸಾಯಿಸತ್ಯವ್ರತ, ಆರತಿ,ಪ್ರಸಾದ ವಿತರಣೆ ನಡೆಯಲಿದೆ.  ಸಂಜೆ 6 ಗಂಟೆಗೆ ಟ್ರಸ್ಟ್ ನಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಹಮ್ಮಿಕೊಂಡಿದೆ.
ನಾಡಿದ್ದು ಜ.21 ರಂದು ಬೆಳಿಗ್ಗೆ 9.30 ಕ್ಕೆ ಅಯೋಧ್ಯಯ ರಾಮನ ಪ್ರಾಣ ಪ್ರತಿಷ್ಟಾಪನೆ ಅಂಗವಾಗಿ   ರಾಮ ಮಂದಿರ ಮತ್ತು ಸ್ವಾಮಿ ವಿವೇಕಾನಂದರ  ಕುರಿತು ಬೆಂಗಳೂರಿನ‌ ಹಾರಿಕಾ ಮಂಜುನಾಥ ಉಪನ್ಯಾಸ, ವಿಚಾರ ಸಂಕಿರಣ  ನಡೆಯಲಿದೆ. ನಂತರ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಂಸದ ಕೆ.ಸಿ.ಕೊಂಡೊಯ್ಯ,  ಬಸವರಾಜೇಶ್ವರಿ ಶಿಕ್ಷಣ ಸಮೂಹ ಸಂಸ್ಥೆಗಳ  ಅಧ್ಯಕ್ಷ ಡಾ.ಎಸ್.ಜೆ.ವಿ.ಮಹಿಪಾಲ್, ಬುಡಾ ಮಾಜಿ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ ಭಾಗವಹಿಸಲಿದ್ದಾರೆ.
ನಂತರ ನೇತ್ರ ಚಿಕಿತ್ಸೆ ಪಡೆದವರಿಗೆ ಔಷಧಿ ವಿತರಣೆ. ಟೈಲರಿಂಗ್ ಮತ್ತು ಕಂಪ್ಯೂಟರ್  ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಣೆ. ಸಂಜೆ 6 ಶ್ರೀರಾಮ ದೀಪೋತ್ಸವ ಬಳಿಕ ಪ್ರಸಾದ ವಿತರಣೆ ನಡೆಯಲಿದೆ.