ಶಿರಾ ಮತ್ತು ರಾಜರಾಜೇಶ್ವರ ಬಿಜೆಪಿ ಮಡಿಲಿಗೆ: ಕಾರ್ಯಕರ್ತರಿಂದ ವಿಜಯೋತ್ಸವ

ಜೇವರ್ಗಿ:ನ.11: ಶಿರಾ ಮತ್ತು ರಾಜರಾಜೇಶ್ವರ ನಗರದ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಮಡಿಲಿಗೆ, ರಾಜ್ಯ ವಿಧಾನಸಭಾ ಉಪಾಚುನಾವಣೆಯಲ್ಲಿ ಶಿರಾ ಮತ್ತು ರಾಜರಾಜೇಶ್ವರ ನಗರ ಗೆಲುವಿ ಹಿನ್ನೆಲೆಯಲ್ಲಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಎಸ್ ಪಾಟೀಲ್ ನರಬೋಳ ರವರ ನೇತೃತ್ವದಲ್ಲಿ ಸಿಹಿ ಹಂಚಿ ವಿಜಯೋತ್ಸವ ಮಾಡಲಾಯಿತು.

ಈ ಸಂದರ್ಭದಲ್ಲಿ ದಂಡಪ್ಪ ಸಾಹು ಕುರಳಗೇರಿ, ರಮೇಶ ಬಾಬು ವಕೀಲ, ಗುರುಶಾಂತಪ್ಪ ಸಿಕೇದ, ಷಣ್ಮುಕಪ್ಪ ಸಾಹು ಗೋಗಿ, ಪ್ರಭು ಜಾಧವ್ ಸೇರಿದಂತೆ ಪುರಸಭೆ ಸದಸ್ಯರು ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.