ಶಿರಹಟ್ಟಿ ತಾಲೂಕ : ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ನಿಗದಿ

ಶಿರಹಟ್ಟಿ,ಜೂ21 : ತಾಲೂಕಿನ ವ್ಯಾಪ್ತಿಯಲ್ಲಿ ಬರುವ 14 ಗ್ರಾಮ ಪಂಚಾಯತಿಗಳ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.
ಪಟ್ಟಣದ ಶ್ರೀ ಫಕ್ಕೀರೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ಘೋಷಿಸಿದ್ದು, ತಾಲೂಕಿನ ಬನ್ನಿಕೊಪ್ಪ ಗ್ರಾಪಂ ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪ್ರವರ್ಗ ಎ, ಬೆಳ್ಳಟ್ಟಿ ಗ್ರಾಪಂ ಅಧ್ಯಕ್ಷ ಹುದ್ದೆ ಪ್ರವರ್ಗ ಬಿ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ, ಛಬ್ಬಿ ಗ್ರಾಪಂ ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಹೆಬ್ಬಾಳ ಗ್ರಾ ಪಂ ಅಧ್ಯಕ್ಷ ಹುದ್ದೆಗೆ ಪರಿಶಿಷ್ಠ ಜಾತಿ, ಉಪಾಧ್ಯಕ್ಷ ಸ್ಥಾನ ಪ್ರವರ್ಗ ಬಿ, ಇಟಗಿ ಗ್ರಾಪಂ ಅಧ್ಯಕ್ಷ ಹುದ್ದೆ ಪ್ರವರ್ಗ ಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಕಡಕೋಳ ಗ್ರಾಪಂ ಅಧ್ಯಕ್ಷ ಹುದ್ದೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆ, ಕೋಗನೂರು ಗ್ರಾಪಂ ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಪ್ರವರ್ಗ ಎ ಮಹಿಳೆ, ಕೊಂಚಿಗೇರಿ ಗ್ರಾಪಂ ಅಧ್ಯಕ್ಷ ಹುದ್ದೆಗೆ ಪ್ರವರ್ಗ ಎ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಮಾಚೇನಹಳ್ಳಿ ಗ್ರಾಪಂ ಅಧ್ಯಕ್ಷ ಹುದ್ದೆ ಸಾಮಾನ್ಯ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ, ಮಾಗಡಿ ಗ್ರಾಪಂ ಅಧ್ಯಕ್ಷ ಹುದ್ದೆಗೆ ಸಾಮಾನ್ಯ, ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ, ಮಜ್ಜೂರು ಗ್ರಾಪಂ ಅಧ್ಯಕ್ಷ ಸ್ಥಾನ ಸಾಮಾನ್ಯ, ಉಪಾಧ್ಯಕ್ಷ ಹುದ್ದೆಗೆ ಪರಿಶಿಷ್ಟ ಮಹಿಳೆ, ರಣತೂರು ಗ್ರಾಪಂ ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ, ತಾರಿಕೊಪ್ಪ ಗ್ರಾಪಂ ಅಧ್ಯಕ್ಷ ಹುದ್ದೆಗೆ ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ, ವಡವಿ ಗ್ರಾಪಂ ಅಧ್ಯಕ್ಷ ಹುದ್ದೆಗೆ ಸಾಮಾನ್ಯ, ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ ಎಂದು ಘೋಷಣೆ ಮಾಡಿದರು. ಕೆಲವೊಂದು ಮೀಸಲು ಸ್ಥಾನಗಳನ್ನು ಲಾಟರಿ ಎತ್ತುವುದರ ಮೂಲಕ ನಿಗದಿ ಪಡಿಸಲಾಯಿತು.
ಈ ಸಂದರ್ಭದಲ್ಲಿ ತಹಶೀಲ್ದಾರ ಅನೀಲ ಬಡಿಗೇರ, ತಾಪಂ ಇಒ ಎಸ್ ನಾರಾಯಣ್, ಈರಣ್ಣ ರಿತ್ತಿ, ವಿನಾಯಕ ಸಾಲಿಮಠ, ಚುನಾವಣಾ ವಿಷಯ ನಿರ್ವಾಹಕರ ರಾಘವೇಂದ್ರ, ಎಸ್ ಎಚ್ ಆಸ್ಕಿ, ಜಮೀರ ಮನಿಯಾರ ಹಾಗೂ ಕಂದಾಯ ನಿರೀಕ್ಷಕ ಮಹಾಂತೇಶ ಮಗದುಂ ಉಪಸ್ಥಿತರಿದ್ದರು.