ಶಿರಹಟ್ಟಿಯಲ್ಲಿ 78.96 ರಷ್ಟು ಮತದಾನ

ಶಿರಹಟ್ಟಿ,ಡಿ24: ತಾಲೂಕಿನಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪ್ರತಿಶತ 78.96 ಮತದಾನವಾಗಿದೆ ಎಂದು ಚುನಾವಾಣಾ ಅಧಿಕಾರಿಗಳು ತಿಳಿಸಿದ್ದಾರೆ.

ತಾಲೂಕಿನ 74 ಕ್ಷೇತ್ರಗಳಲ್ಲಿ 91 ಮತಗಟ್ಟೆಗಳಲ್ಲಿ 182 ಅಭ್ಯರ್ಥಿಗಳ ಚುನಾವಣೆ ಭವಿಷ್ಯ ನಿರ್ಣಯಕ್ಕಾಗಿ ಮಂಗಳವಾರ ಮತದಾನ ನಡೆಯಿತು. ಇಲೇಕ್ಟ್ರಾನಿಕ್ ವೋಟಿಂಗ್ ಮಷೀನ್ ಬದಲು ಪ್ರತಿ ಮತಗಟ್ಟೆಯಲ್ಲಿಯೂ ಬ್ಯಾಲೇಟ್ ಪೇಪರ್ ಬಳಕೆ ಮಾಡಲಾಗಿತ್ತು. ಕೋವಿಡ್-19 ಸಂದರ್ಭದಲ್ಲಿಯೇ ಗ್ರಾಮ ಪಂಚಾಯತಿ ಚುನಾವಣೆ ಎದುರಾಗಿದ್ದು, ಪ್ರತಿ ಮತಗಟ್ಟೆಯಲ್ಲಿಯು ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ಮತ ಚಲಾವಣೆಗೆ ಬಂದ ಮತದಾರರಿಗೆ ಥರ್ಮಲ್ ತಪಾಸಣೆ ಹಾಗೂ ಸೈನಿಟೈಜರ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮಾಸ್ಕ್ ಇಲ್ಲದೆ ಮತದಾನಕ್ಕೆ ಬಂದ ಜನರಿಗೆ ಮಾಸ್ಕ್ ನೀಡುವ ವ್ಯವಸ್ಥೆಯನ್ನು ಮಾಡಲಾಗಿರಲಿಲ್ಲ.