ಶಿರಹಟ್ಟಿಯಲ್ಲಿ ವೀರ ಮದಕರಿನಾಯಕರ ಜಯಂತಿ ಆಚರಣೆ


ಶಿರಹಟ್ಟಿ,ಅ.15: ಪಟ್ಟಣದ ರಾಜ್ಯ ವೀರ ಮದಕರಿನಾಯಕರ ಗೆಳೆಯರ ಬಳಗದ ವತಿಯಿಂದ ಶ್ರೀ ವಾಲ್ಮೀಕಿ ವೃತ್ತದಲ್ಲಿ ನಾಡ ದೊರೆ ವೀರ ಮದಕರಿನಾಯಕರ ಜಯಂತೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ತಳವಾರ ಮಾತನಾಡಿ, ಬೇಡ ಕುಲದ ನಾಯಕ ಐದನೆ ವೀರ ಮದಕರಿ ಯವರ 1754-79 ರವರೆಗೆ ಆಳ್ವಿಕೆಯಲ್ಲಿ ಎಪ್ಪತ್ತೇಳು ಕೋಟೆಯ ಒಡೆಯ ಎಂಬ ಬಿರುದನ್ನು ಹೊಂದಿದ್ದರು. ಚಿತ್ರದುರ್ಗದ ಲ್ಲಿ ಆಳ್ವಿಕೆಯನ್ನು ನಡೆಸಿ ಸಮರ್ಥವಾಗಿ ಹೈದರಾಲಿಯ ಸೇನೆಯನ್ನು ಎದುರಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಕಾಲದಲ್ಲಿ ಕೋಟೆಯ ರಕ್ಷಣೆಯನ್ನು ಮಾಡಿ ಒನಕೆಯ ಓಬವ್ವಳ ದಿಟ್ಟತನವನ್ನು ನಾವಾರು ಮರೆಯುವ ಹಾಗಿಲ್ಲ. ಕನ್ನಡ ನಾಡಿನ ರಕ್ಷಣೆಗಾಗಿ ಶ್ರಮಿಸಿದ್ದಾರೆ. ಇವರ ದೇಶ ಪ್ರೇಮ ಮತ್ತು ದೈರ್ಯಶಾಲಿತನವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದು ಹೇಳಿದರು.
\ಕಾರ್ಯಕ್ರಮದಲ್ಲಿ ಫಕ್ಕಿರೇಶ ತಳವಾರ, ಶಿವರಾಜ ತಳವಾರ,ಮೌನೇಶ ತಳವಾರ, ಆನಂದ ಕೊಡ್ಲಿ, ಶರಣಪ್ಪ ಕೊಡ್ಲಿ, ರಾಜು ತಳವಾರ, ರವಿ ಕೊಡ್ಲಿ, ಮುಂತಾದವರು ಉಪಸ್ಥಿತರಿದ್ದರು.