ಶಿರಸಂಗಿ ಲಿಂಗರಾಜ ದೇಸಾಯಿ ತ್ಯಾಗಮಯಿ, ಮಾದರಿ ಆಡಳಿತಗಾರ

ಕಲಬುರಗಿ:ಜ.10: ಶಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜದಲ್ಲಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಆಸ್ತಿಯನ್ನು ಮಾರಾಟ ಮಾಡಿದ ತ್ಯಾಗಮಯಿ, ಪರೋಪಕಾರಿ, ಶಿರಸಂಗಿ ಮನೆತನದ ಆಡಳಿತಗಾರ. ಅವರ ಆಡಳಿತ ವಿಶ್ವದ ಎಲ್ಲಾ ಆಡಳಿತಗಾರರಿಗೆ ಮಾದರಿಯಾಗಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ನ್ಯೂ ರಾಘವೇಂದ್ರ ಕಾಲನಿಯಲ್ಲಿರುವ ‘ಮುತ್ತಾ ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧÀವಾರ ಹಮ್ಮಿಕೊಳ್ಳಲಾಗಿದ್ದ ‘ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರ 163ನೇ ಜಯಂತಿ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಧಾರವಾಡದಲ್ಲಿ 1904ರಲ್ಲಿ ಜರುಗಿದ ‘ಅಖಿಲ ಭಾರತ ವೀರಶೈವ ಮಹಾಸಭಾ’ದ ಸಮಾವೇಶದ ಮೊದಲ ಅಧ್ಯಕ್ಷರಾಗಿದ್ದರು. ಅವರಲ್ಲಿರುವ ಸಮಾಜಪರ ಕಾಳಜಿ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಟ್ಯುಟೋರಿಯಲ್ಸ್ ಮುಖ್ಯಸ್ಥ ಶಿವಕುಮಾರ ಮುತ್ತಾ, ಉತ್ತರ ವಲಯ ಕಸಾಪ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರದಾರ, ಹಿಂದಿ ಲೇಖಕ ಸುನೀಲ ಚೌಧರಿ, ಶಿಕ್ಷಕರಾದ ಶಿಕ್ಷಕರಾದ ಲಕ್ಷ್ಮೀ ಇಂಡಿ, ಪ್ರಿಯಾಂಕಾ ವಾಲಿ, ಪ್ರಮೋದ ಕುಲರ್ಣಿ,ವಿಶ್ವನಾಥ ನಂದರ್ಗಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.