ಶಿರಶ್ಯಾಡ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ

ಇಂಡಿ :ಫೆ.2: ತಾಲೂಕಿನ ಶಿರಶ್ಯಾಡ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಾಗವಸಿ ಜನರಲ್ಲಿ ಸಂವಿಧಾನ ಜಾಗ್ರತಿ ಮೂಡಿಸಿದರು. ಗ್ರಾಮದ ಪ್ರಮುಖ ಬಿದಿಗಳಲ್ಲಿ ಡಾ, ಬಾಬಾಸಾಹೇಬ್ ಅಂಬೇಡ್ಕರ ಮೂರ್ತಿ ಇರುವ ತೆರೆದ ವಾಹನದಲ್ಲಿ ಸಂವಿಧಾನ ಪೀಠಿಕೆ ಉಳ್ಳ ಬ್ರಹತ್ ಆಕಾರದ ಕಟೌಟ್ ಸೇರಿದಂತೆ ಸರಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳು ವಿವಿಧ ವೇಷ ಭೂಷಣ ತೊಟ್ಟು ಅತೀ ವಿಜೃಂಭಣೆಯಿಂದ ಮೆರವಣಿಗೆಯ ಜಾತಾ ಕಾರ್ಯಕ್ರಮವನ್ನು ಮೆರಗುಗೊಳಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂತಾಬಾಯಿ ತೆಲಗ ಸ್ವಾಗತಿಸುವ ಮುಖಾಂತರ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಶಿಕ್ಷಕ ಸಂತೋಷ ದೊಡಮನಿ ಮಾತನಾಡಿ ಸಂವಿಧಾನದ ಮತ್ತು ಶಿಕ್ಷಣದ ಮೌಲ್ಯದ ಬಗ್ಗೆ ಸಹ ವಿಸ್ತಾರವಾಗಿ ಹೇಳಿದರು. ಈ ಸಂದರ್ಭದಲ್ಲಿ ಗ್ರಾಮದ ಅಂಬೇಡ್ಕರ್ ಯುವಕ ಮಂಡಳಿ ಅಧ್ಯಕ್ಷ ಪುಂಡಲೀಕ ಗೋಡೆಕಾರ, ಕಾರ್ಯದರ್ಶಿ ರಾಘವೇಂದ್ರ ದೇವರಮನಿ, ಶ್ರೀಸೈಲ್ ಕೋಳಿ, ಶಿವಯೋಗಿ ತೆಲಗ, ಗೌತಮ್ ತೆಲಗ, ದತ್ತು ಕೋಳಿ, ಸಾರ್ವಜನಿಕರು ಹಿರಿಯರು ಶಾಲಾ ಮಕ್ಕಳು ಶಿಕ್ಷಕರು, ಹಾಗೂ ಗ್ರಾಮ ಪಂಚಾಯತ್ ಉಪ ಅಧ್ಯಕ್ಷ ಎಸ್, ಎಸ್ ಪಾಸೋಡಿ, ಸರ್ವ ಸದಸ್ಯರು ಸಿಬ್ಬಂದಿ ವರ್ಗದವರು ಮತ್ತು ಸಮಾಜ ಕಲ್ಯಾಣ ಇಲಾಖೆ ತಾಲೂಕ ಅಧಿಕಾರಿ ಬಿ ಜೆ ಇಂಡಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಂ ಎನ್ ರಾಠೋಡ, ಗ್ರಾಮ ಲೆಕ್ಕಧಿಕಾರಿ ಬಸವರಾಜ ಅವಜಿ, ಅಂಗನವಾಡಿ ಕಾರ್ಯಕ್ರತರು, ಆಶಾ ಕಾರ್ಯಕರ್ತರು, ಯುವ ಮುಖಂಡರು ಯುವ ಮಿತ್ರರು ಎಲ್ಲರೂ ಸಂವಿಧಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತೀ ಖುಷಿಯಿಂದ ಜಾಥಾ ರಥವನ್ನು ಮುಂದಿನ ಗ್ರಾಮಕ್ಕೆ ಬೀಳ್ಕೊಡಲಾಯಿತು.