ಶಿರವಾಳ ಡಾ,ಅಂಬೇಡ್ಕರ ನಗರ ಶಾಲೆಗೆ ಅಧಿಕಾರಿಗಳ ಬೇಟಿ

ಶಹಾಪುರ:ಜು.22:ತಾಲುಕಿನ ಶಿರವಾಳ ಗ್ರಾಮದ ಡಾ, ಬಿ,ಆರ್,ಅಂಬೇಡ್ಕರ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯಾದಗಿರಿ ಜಿಲ್ಲಾ ಡಯಟಾ ಹಿರಿಯ ಉಪನ್ಯಾಷಕರಾದ ವೆಂಕಯ್ಯ ಇನಾಮದಾರ,ಮಾಹಾದೇವರಡ್ಡಿ ಅಕ್ಷರ ದಾಸೋಹ ಮುಖ್ಯಾಧಿಕಾರಿ ಈಶ್ವರಪ್ಪ ನಿರಡಗಿ. ಶಹಾಪುರ ತಾಲುಕಾ ಅಕ್ಷರದಾಸೊಹ ಕಾರ್ಯಕ್ರಮದ ಸಾಹಾಯಕ ನಿರ್ಧೇಶಕರಾದ ಬಿ,ಎಸ್,ಸೂರ್ಯವಂಶಿ ಸಿ.ಆರ್.ಪಿ.ಮಲ್ಕಪ್ಪ ಸೋಮನಾಥ ರವರು ಬೇಟಿ ನೀಡಿ ಮಕ್ಕಳೊಂದಿಗೆ ಬಿಸಯೂಟ ಬೋಜನ ಸವಿದರು.ಶಾಲಾ ದಾಖಲಾತಿಗಳನ್ನು ಪರೀಶೀಲನೆ ಮಾಡಿದರು.
ಅಲ್ಲದೆ ಕಲಿಕೆ ಚೇತರಿಕೆ ಕಾರ್ಯಕ್ರಮದ ಅನುಷ್ಠಾನ ಕುರಿತು ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.ಬಿಸಿಯೂಟ ಕುರಿತು ಚರ್ಚಿಸಿದ ಅವರು ಸ್ವಚ್ಚತೆಯ ಆಹಾರ ತಯ್ಯಾರಿಕೆ ಮಾಡಿದಲ್ಲಿ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಎಂದು ಅವರು ಮನವರಿಕೆ ಮಾಡಿದರು. ಮತ್ತು ಶಾಲಾ ಮೂಲಬೂತ ಸೌಕರ್ಯಗಳ ಕುರಿತು ಚರ್ಚಿಸಿದ ಅವರು ಮಕ್ಕಳು ಆಟೋಟಗಳೊಂದಿಗೆ ಶಾಲಾ ಪಠ್ಯ ಪುಸ್ತಗಳ ಪರಿಕಲ್ಪನೆಗಳನ್ನು ಮರೆಯಬಾರದು ಎಂದರಲ್ಲದೆ. ನೂತನ ಕಲಿಕೆ ಚೇತರಿಕೆ ಮಕ್ಕಳ ಪಠ್ಯಕ್ರಮ ಕುರಿತು ವಿವರ ನೀಡಿದರು. ಈ ಸಮಯದಲ್ಲಿ ಮುಖ್ಯಗುರುಗಳಾದ ಎಸ್,ಎನ್,ನಧಾಫರವರು ಸೇರಿದಂತೆ ಶಾಲಾ ಶಿಕ್ಷಕರು ಮಕ್ಕಳು ಸಿಬಂದಿಯವರು ಹಾಜರಿದ್ದರು.