ಶಿರವಾಳ: ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಅಫಜಲಪುರ,ಸೆ.21-ಇಲ್ಲಿಗೆ ಸಮೀಪದ ಶಿರವಾಳ ಗ್ರಾಮದ ವೀರಸಂಗಮೇಶ್ವರ ಗುಡಿಯ ಪ್ರಾಂಗಣದಲ್ಲಿ ಅಫಜಲಪುರ ತಾಲ್ಲೂಕ ಸಾರ್ವಜನಿಕ ಆಸ್ಪತ್ರೆ ಅಡಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಯಿತು.
ರಾಷ್ಟ್ರೀಯ ಓರಲ್ ಹೆಲ್ತ್ ಪಾಲಸಿ ಹಾಗೂ ತಾಲ್ಲೂಕ ದಂತ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಎನ್‍ಸಿಡಿ ಘಟಕ, ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಅಡಿಯಲ್ಲಿ ಹದಿ ಹರೆದವರ ಆರೋಗ್ಯ ದಿನಾಚರಣೆ ಉಚಿತ ದಂತ ಚಿಕಿತ್ಸೆ, ಉಚಿತ ಅಸಾಂಕ್ರಮಿಕ ರೋಗಗಳ ಮಧುಮೇಹ / ಬಿಪಿ ಚೆಕ್ ತಪಾಸಣಾ ಶಿಬಿರ ಹಾಗೂ ಹದಿ ಹರೆಯ ಆರೋಗ್ಯ ಮತ್ತು ಕ್ಷೇಮ ಶಿಬಿರ ಹಮ್ಮಿಕೊಳ್ಳಲಾಯಿತು.
ದಂತ ವೈದ್ಯಾಧಿಕಾರಿ ಡಾ.ಮನಾಲಿ ದೇಶಪಾಂಡೆ, ಅರ್‍ಕೆಎಸ್‍ಕೆ ಸಮಾಲೋಚಕಿ ಸುಜಾತ ಹಿರೇಮಠ, ಎನ್‍ಸಿಡಿ ಸಮಾಲೋಚಕ ಸುನೀತಾ ಎಂ.ಕಂಬಾಳಿಮಠ ಮತ್ತು ಲ್ಯಾಬ್ ಟೆಕ್ನಿಷಯನ್ ಪ್ರೀತಿ ಜವಳಿ ಉಪಸ್ಥಿತರಿದ್ದರು. ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿ ಶಿಬಿರದ ಲಾಭ ಪಡೆದುಕೊಂಡರು.