ಶಿರವಾಳದಲ್ಲಿ ಆರೋಗ್ಯ ಶಿಬಿರ

ಶಹಾಪುರ:ಮಾ.21:ಕಲಬುರ್ಗಿ ಬಸವ ಆಸ್ಪತ್ರೆ ಮತ್ತು ಗ್ರಾ.ಪಂ. ಶಿರಾವಳ ಆಶ್ರೆಯುದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿತ್ತು. ನುರಿತ ತಜ್ಞರಾದ ಡಾ.ಗುರುರಾಜ ಹೀರೆಮಠ ಮತ್ತು ಲಕ್ಷ್ಮಿ ಪಾಟೀಲರವರು ಗ್ರಾಮದ ನೂರಾರು ಜನ ಸಾಮಾನ್ಯರಿಗೆ ನೇತ್ರ, ಉದರ ಸೇರಿದಂತೆ ಅನೇಕ ರೋಗಗಳನ್ನು ತಪಾಸಣೆ ಮಾಡಿ ಸಲಹೆ ಸೂಚನೆಗಳನ್ನು ನೀಡಿದರು.

ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಮಡಿವಾಳಪ್ಪ ಮುದನೂರ ಗ್ರಾಮದ ಚೆನ್ನಮ್ಮಸ್ವಾಮೀ ಹೀರೆಮಠ, ಅಡಿವೆಯ್ಯ ಸ್ವಾಮೀ, ಮಲ್ಲಣ್ಣಹೊಸಮನಿ ಸೇರಿದಂತೆ ಅನೇಕ ಗ್ರಾಮಸ್ಥರು ಗ್ರಾ.ಪಂ. ಸಿಬ್ಬಂದಿಯವರು ಹಾಜರಿದ್ದರು.