ಶಿಯಾ ಮುಸ್ಲಿಂ ವಕ್ಫ ಮಂಡಳಿಯ ಮಾಜಿ ಅಧ್ಯಕ್ಷ ಹಿಂದು ಧರ್ಮಕ್ಕೆ ಘರ್‍ವಾಪಸಿ: ವಿಶ್ವ ಹಿಂದೂ ಪರಿಷತ್ ಸ್ವಾಗತ

ವಿಜಯಪುರಃ ಡಿ.8:ಉತ್ತರ ಪ್ರದೇಶದ ಶಿಯಾ ಮುಸ್ಲಿಂ ವಕ್ಫ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಝ್ವಿ ಜಿತೇಂದ್ರ ನಾರಾಯಣಸಿಂಗ ತ್ಯಾಗಿ ಎನ್ನುವ ಮರುನಾಮದೊಂದಿಗೆ ಅವರು ಮರಳಿ ಹಿಂದು ಧರ್ಮಕ್ಕೆ ಘರವಾಪಸಿ ಆಗಿರುವುದನ್ನು ವಿಶ್ವ ಹಿಂದು ಪರಿಷತ್, ಉತ್ತರ ಕರ್ನಾಟಕ ಧರ್ಮ ಪ್ರಸಾರ ಪ್ರಮುಖ ಸಂಗನಗೌಡ. ಬ. ಪಾಟೀಲ ಸ್ವಾಗತಿಸಿದ್ದಾರೆ.
ಇದೇ ರೀತಿ ರಾಷ್ಟ್ರೀಯ ಚಿಂತನೆಯ ಮುಸ್ಲಿಂ ಮುಖಂಡರು ಮತ್ತೆ ತಮ್ಮ ಮೂಲ ಹಿಂದು ಧರ್ಮಕ್ಕೆ ಆಗಮಿಸಿದರೆ ವಿಶ್ವ ಹಿಂದು ಪರಿಷತ್ ಎಲ್ಲ ರೀತಿಯ ವ್ಯವಸ್ಥೆ ಮಾಡುವುದು. ಕೆಲವು ಪಟ್ಟಬದ್ಧ ಮೂಲಭೂತವಾದಿಗಳ ಭಯದಿಂದ ಸಾಕಷ್ಟು ಮುಸ್ಲಿಂ ನಾಯಕರು, ಮಹಿಳೆಯರು ಹಿಂದು ಧರ್ಮಕ್ಕೆ ವಾಪಸ್ ಆಗಲು ಹಿಂದೇಟು ಹಾಕುತಿದ್ದಾರೆ. ಅಂತವರಿಗೆ ವಿಶ್ವ ಹಿಂದು ಪರಿಷತ್ ರಕ್ಷಣ ನೀಡಲಿದೆ. ಮೊಘಲರ ಆಡಳಿತದಲ್ಲಿ ಅಸಂಖ್ಯಾತ ಹಿಂದುಗಳು ಭಯದಿಂದ ಮುಸ್ಲಿಂ ಧರ್ಮ ಸ್ವೀಕರಿಸಿದ್ದಾರೆ. ಅಂತವರು ಮತ್ತೆ ಹಿಂದು ಧರ್ಮಕ್ಕೆ ಆಗಮಿಸಿದರೆ ಸ್ವಾಗತ.
ಜಗತ್ತಿನಲ್ಲಿ ಶಾಂತಿ ಉಳಿಯಬೇಕಾದರೆ, ಮನುಕುಲದ ರಕ್ಷಣೆಯಾಗಬೇಕಾದರೆ ಹಿಂದುತ್ವದಿಂದ ಮಾತ್ರ ಎಂಬುದನ್ನು ವಿಶ್ವದ ಅನ್ಯ ಧರ್ಮಿಯ ಜನರು ಅರಿತಿದ್ದಾರೆ. ಆ ನಿಟ್ಟಿನಲ್ಲಿ ಹಿಂದೂ ಧರ್ಮ ಸೇರ್ಪಡೆಗೆ ವಿಶ್ವದಲ್ಲಿ ಮನ್ನಣೆ ಸಿಕ್ಕಿದೆ. ಮುಂದಿನ ದಿನದಲ್ಲಿ ವಿಶ್ವ ಹಿಂದುಮಯ ಆಗುವುದರಲ್ಲಿ ಸಂಶಯವಿಲ್ಲ. ವಿಶ್ವ ಹಿಂದೂ ಪರಿಷತ್ ಎಲ್ಲರ ಜೊತೆಗೆ ಇರಲಿದೆ ಎಂದು ವಿಶ್ವ ಹಿಂದು ಪರಿಷತ್, ಉತ್ತರ ಕರ್ನಾಟಕ ಧರ್ಮ ಪ್ರಸಾರ ಪ್ರಮುಖ ಸಂಗನಗೌಡ. ಬ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.