ಶಿಬಿರಗಳು ಶಿಸ್ತು ನಾಯಕತ್ವದ ಮೌಲ್ಯಗಳನ್ನು ಬೆಳೆಸುತ್ತವೆ

ಬಾಗಲಕೋಟೆ,ಜೂ4: ಪದವಿ ಕಾಲೇಜುಗಳಲ್ಲಿರುವ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ ನಡೆಸುವ ಶಿಬಿರಗಳು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆಯ ಮನೋಭಾವ ಬೆಳೆಸುವ ಮೂಲಕ ಶಿಬಿರಾರ್ಥಿಗಳಲ್ಲಿ ಶಿಸ್ತು, ಪ್ರಾಮಾಣಿಕತೆ ಮತ್ತು ನಾಯಕತ್ವದ ಮೌಲ್ಯಗಳನ್ನು ಬೆಳೆಸುತ್ತವೆ ಎಂದು ಮುದ್ದೇಬಿಹಾಳ ಕಾಲೇಜಿನ ರೂವರ್ಸ ಸ್ಕೌಟ್ಸ್ ಲೀಡರ್ ಪೆÇ್ರ.ಎಸ್.ಎಸ್.ಹೂಗಾರ ಅವರು ಹೇಳಿದರು.
ಅವರು ನವನಗರದ ಸ.ಪ್ರ.ದ ಕಾಲೇಜಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳು ಅಡಿಯಲ್ಲಿ ಮೂರು ದಿನಗಳ ಕಾಲ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸಾಮಾಜಿಕ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ.ಜಿ.ಜಿ.ಹಿರೇಮಠ ಅವರು ಮಾತನಾಡಿ ಶಿಬಿರಗಳು ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಭೌತಿಕ ಸಾಮಾಥ್ರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತವೆ ಇದರಂದ ತಮ್ಮ ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು.
ವೇದಿಕೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಘಟಕ ಪ್ರಮೋದ್ ಚೌಗಲೆ, ಕಾಲೇಜಿನ ರೇಂಜರ್ಸ್ ಘಟಕದ ಲೀಡರ್ ಡಾ.ಸುಮಂಗಲಾ ಮೇಟಿ, ರೋವರ್ಸ ಘಟಕದ ಲೀಡರ್ ಪರಸಪ್ಪ ತಳವಾರ, ಎನ್.ಎಸ್.ಎಸ್. ಘಟಕದ ಸಂಚಾಲಕ ಶಶಿಧರ ಕುಂಬಾರ, ಡಾ.ಚಂದ್ರಶೇಖರ ಕಾಳನ್ನವರ ಉಪಸ್ಥಿತರಿದ್ದರು.
ಶಿಬಿರಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಮಾಡುವ ಮೂಲಕ ಶಿಬಿರ ಸಮಾರೋಪ ಮಾಡಿದರು.