ಶಿಬಿರಗಳಿಂದ ಶಿಸ್ತು, ಶ್ರಮದಾನ ಹಾಗೂ ಭಾತೃತ್ವ ಭಾವನೆಗಳು ವೃದ್ಧಿ: ಪ್ರೊ. ಚಿದಾನಂದ ಆನೂರ

ವಿಜಯಪುರ :ಜು.26: ಬಿ.ಡಿ.ಈ. ಸಂಸ್ಥೆಯ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ಮಹಿಳಾ ಪದವಿ ಕಾಲೇಜು ವಿಜಯಪುರ ಇವರು ದತ್ತುಗ್ರಾಮ ಅರಕೇರಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಹಾಗೂ ಘಟಕ 2ರ ವಾರ್ಷಿಕ ವಿಶೇಷ ಶಿಬಿರದ 6ನೇ ದಿನದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ವಿಜಯಪುರದ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಚಿದಾನಂದ ಎಸ್. ಆನೂರ ಶಿಬಿರಗಳು ಯುವಜನತೆಯಲ್ಲಿ ಶಿಸ್ತು, ಶ್ರಮದಾನ, ಭಾತೃತ್ವ, ಪರೋಪಕಾರ, ಸಂಯಮ, ದೇಶಪ್ರೇಮ, ಸಹಬಾಳ್ವೆ, ಸಹಜೀವನ ಮುಂತಾದ ಉದಾತ್ತ ಹಾಗೂ ಉತ್ಕøಷ್ಟ ಗುಣಗಳನ್ನು ವೃದ್ಧಿಸುತ್ತವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ. ಎನ್. ದೇಶಪಾಂಡೆ ವಹಿಸಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಪ್ರೊ. ಮಯೂರ ತಿಳಗೂಳಕರ, ಪ್ರೊ. ಶೈಲಜಾ ಪಾಟೀಲ, ಪ್ರೊ. ಎಸ್.ಎಮ್. ಕೊರ್ತಿ, ಪ್ರೊ. ಪ್ರದ್ಯಮ್ನ ಜೋಶಿ, ಪ್ರೊ. ಆರ್.ಎಸ್. ದಿಕ್ಷೀತ, ಪ್ರೊ. ಎ.ಜಿ. ಹಿರೆಕುರುಬರ, ಪ್ರೊ. ಎಸ್.ಎಸ್. ಕನ್ನೂರ ಹಾಗೂ ಇತರ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಪ್ರೊ. ಎಸ್.ಪಿ. ಚಲವಾದಿ ಸ್ವಾಗತಿಸಿದರು. ಪ್ರೊ. ವಾಣಿಶ್ರೀ ಹತ್ತಿ ವಂದಿಸಿದರು. ಪ್ರೊ. ಜ್ಯೋತಿ ಆಲೂರ ಕಾರ್ಯಕ್ರಮ ನಿರೂಪಿಸಿದರು.