ಶಿಥಿಲಾವಸ್ಥೆಯಲ್ಲಿ ನಗರಸಭೆ ಕಛೇರಿ

ನಂಜನಗೂಡು:ಡಿ:29: ನಗರಸಭೆ ಕಚೇರಿಯ ಪೀಠೋಪಕರಣಗಳು ಮುರಿದು ಬಿದ್ದಿರುವುದು ಹೆಲ್ಮೆಟ್ ಧರಿಸಿ ಕೆಲಸ ಮಾಡುವ ಸ್ಥಿತಿ ಉಂಟಾಗಿದೆ ಅಧಿಕಾರಿಗಳಿಗೆ
ಮುರಿದ ಬಾಗಿಲು ಮತ್ತು ಸೀಲಿಂಗ್ ಹಾಗೂ ಗಬ್ಬುನಾರುತ್ತಿರುವ ಚೇರುಗಳು ಕೈಗೆ ಸಿಗುವ ಕರೆಂಟ್ ವೈರಿಗಳು. ಪುರಸಭೆಯಿಂದ ನಗರಸಭೆಗೆ ಮೇಲ್ದರ್ಜೆಗೆ ಏರಿದರೂ ಕೂಡ ಇನ್ನೂ ಕೂಡ ಯಾವುದೇ ಬದಲಾವಣೆ ಇಲ್ಲದೆ ಮುರಿದು ಬಿದ್ದಿರುವ ಪೀಠೋಪಕರಣಗಳು ಚೇರ್ ಗಳು ಅಧಿಕಾರಿಗಳು ತಲೆ ಮೇಲೆ ಬೀಳುತ್ತಿರುವ ಸೀಲಿಂಗ್ ಕೈ ವೈರಿಗಳು ಗಬ್ಬುನಾರುತ್ತಿರುವ ಸೌಚಾಲಯಗಳು ಈ ರೀತಿ ಅನೇಕ ತೊಂದರೆಗಳಿಂದ ಭಯಭೀತಿಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳು ದಿನಕಳೆದಂತೆ ಅಧಿಕಾರಿಗಳು ಹೆಲ್ಮೆಟ್ ಧರಿಸಿಕೊಂಡು ಕೆಲಸ ಮಾಡುವ ಸ್ಥಿತಿ ಉಂಟಾಗಬಹುದು
ಇದಲ್ಲದೆ ಸಾರ್ವಜನಿಕರ ಆಸ್ತಿಗೆ ಸಂಬಂಧಪಟ್ಟ ಫೈಲುಗಳು ಇರುವ ಬೀರುಗಳ ಡೋರ್ ಗಳು ಕಿತ್ತು ಮುರಿದಿದೆ ಇದರಿಂದ ಇರುವ ಫೈಲುಗಳು ಯಾರಾರು ಕದಿಯುವುದಕ್ಕೆ ದಾರಿ ಮಾಡಿಕೊಟ್ಟಿದ್ದಾರೆ ಮತ್ತು ಫೈಲುಗಳನ್ನು ಕದ್ದು ಆಸ್ತಿ ಅಳತೆಗಳನ್ನು ತಿದ್ದುಪಡಿ ಮಾಡಬಹುದು ಈ ರೀತಿಯ ಅನೇಕ ತೊಂದರೆಗಳು ಉಂಟಾಗಬಹುದು ತಕ್ಷಣ ಅಧಿಕಾರಿಗಳು ಈ ಬೀರುಗಳ ಡೋರ್ ಗಳನ್ನು ಸರಿಪಡಿಸ ಬೇಕು ಇದಲ್ಲದೆ ಕಚೇರಿಯಲ್ಲಿರುವ ಚೇರ್ ಗಳು ಕೊಳೆತು ನಾರುತ್ತಿದೆ ಇದರ ಮೇಲೆ ಕೂರಲು ಇಷ್ಟ ಪಡ ದ ಸಾರ್ವಜನಿಕರು ಹಾಗೂ ಅಧಿಕಾರಿಗಳು ಕೆಲಸ ಮಾಡುವ ಸ್ಥಳಗಳಲ್ಲಿ ಅವರ ತಲೆ ಮೇಲೆ ಬೀಳುತ್ತಿರುವ ಸೀಲಿಂಗ್ ಪ್ಲೇಟ್ಗಳು ಹಾಗೂ ಸಾರ್ವಜನಿಕರ ಶೌಚಾಲಯ ಗಬ್ಬುನಾರುತ್ತಿದೆ ಮೂರು ವರ್ಷದಿಂದ ಇದೇ ರೀತಿ ಉಂಟಾಗಿದ್ದರೂ ಕೂಡ ಯಾವುದೇ ಪ್ರಯೋಜನವಿಲ್ಲ ಮುಂದಾದರೂ ನಗರಸಭೆ ಆಯುಕ್ತರಾದ ಕರಿಬಸವಯ್ಯ ಕಚೇರಿಯಲ್ಲಿರುವ ತೊಂದರೆಗಳನ್ನು ನಿವಾರಿಸುವ ವರೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ