ಶಿಥಿಲಾವಸ್ಥೆಯಲ್ಲಿ ಗೋವಿಂದಗಿರಿ ಸರ್ಕಾರಿ ಶಾಲೆ – ಶಾಲಾವರಣದಲ್ಲಿ ಮಕ್ಕಳಿಗೆ ಪಾಠ

.
ಬಿ ನಾಗರಾಜ ಕೂಡ್ಲಿಗಿ.
ಕೂಡ್ಲಿಗಿ. ಆ 10 :- ಹಳೆಯದಾದ ನಾಲ್ಕು ಕೊಠಡಿಗಳು ಮೇಲ್ಚವಾಣಿಯಿಂದ ಬೀಳುವ ಸಿಮೆಂಟ್, ಮಳೆ ಬಂದರೆ ಸೋರಾಟ ಜೀವ ಭಯದಲ್ಲಿ ಶಿಕ್ಷಕರು ಹಾಗೂ ಮಕ್ಕಳು, ಶಾಲಾವರಣದಲ್ಲಿ ಪಾಠ, ಶೌಚಾಲಯ ಸ್ಥಿತಿ ಹೇಳತೀರದು ಶಾಲಾ ಕಾಂಪೌಂಡ್ ಬಿರುಕು ಯಾವಾಗ ಬೀಳುವುದೋ ತಿಳಿಯದು ಇದು ತಾಲೂಕು ಕೇಂದ್ರ ಕೂಗಳತೆ ದೂರದ ಗೋವಿಂದಗಿರಿ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಥಿಲಗೊಂಡ ಸದ್ಯದ ಸ್ಥಿತಿ.
ಹೌದು ಪಟ್ಟಣ ಪಂಚಾಯತಿ ವ್ಯಾಪ್ತಿಯ ಗೋವಿಂದಗಿರಿ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇಲ್ಲಿ ಸುಮಾರು 150 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಈ ಶಿಥಿಲಗೊಂಡ ಕಟ್ಟಡ ಯಾವ ಅಧಿಕಾರಿಗಳ ಕಣ್ಣಿಗೆ ಬೀಳದ್ದು ಎನ್ನಬಹುದು ಕಳೆದ ಬಾರಿಯ ಶಾಸಕರಾದ ಎನ್ ವೈ ಗೋಪಾಲಕೃಷ್ಣ  ಇಡೀ ಕ್ಷೇತ್ರ ವ್ಯಾಪ್ತಿಯಲ್ಲಿ 400ಕ್ಕೂ ಹೆಚ್ಚು ಕೊಠಡಿ ನಿರ್ಮಿಸಿದ್ದರು ಈ ಶಾಲೆಯ ಕೊಠಡಿಗಳು ಕಾಣದೆ ಇದ್ದದ್ದು ಅಧಿಕಾರಿಗಳ ಅಂದರೆ ಈಗಿನ ವಿಜಯನಗರ ಜಿಲ್ಲಾ ಡಿಡಿಪಿಐ ಅಂದು ಕೂಡ್ಲಿಗಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದಾಗ ಅವರ ನಿರ್ಲಕ್ಷ್ಯತೆಯಲ್ಲಿ ಬಿಟ್ಟು ಹೋಗಿರುವ ಶಾಲೆ ಎಂದರೆ ತಪ್ಪಾಗದು ಇಲ್ಲಿರುವ ನಾಲ್ಕು ಕೊಠಡಿಗಳಲ್ಲಿ ಒಂದರ ಮೇಲ್ಚವಾಣಿ ಸಂಪೂರ್ಣ ಹಾಳಾಗಿದ್ದು, ಉಳಿದ ಮೂರು ಕೊಠಡಿಗಳು ಮಳೆ ಬಂದರೆ ಸೊರಾಟದಿಂದ ಕೂಡಿವೆ ಇಲ್ಲಿರುವ 150ಮಕ್ಕಳು ಹಾಗೂ ಇಲ್ಲಿನ 3 ಶಿಕ್ಷಕರ ಜೀವಭಯದಲ್ಲಿ ಸಾಗುತ್ತಿದ್ದೂ ಮಳೆ ಇಲ್ಲದೆ ಇದ್ದರೆ ಶಾಲಾವರಣದಲ್ಲಿ ಮಕ್ಕಳಿಗೆ ಪಾಠ ನಡೆಸಲಾಗುತ್ತಿದೆ ಮಳೆ ಬಂದರೆ ಶಾಲೆಗೆ ಶಾಲೆ ರಜೆ ಘೋಷಣೆ ಗ್ಯಾರಂಟಿ ಎನ್ನುವಂತಾಗಿದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ಆದಷ್ಟು ಬೇಗನೆ ಇಲ್ಲಿನ ಶಿಥಿಲಾವಸ್ಥೆಯ ಕೊಠಡಿಗಳು ಹಾಗೂ ಕಾಂಪೌಂಡ್ ಮತ್ತು ಶೌಚಾಲಯ ನಿರ್ಮಾಣವಾಗಬೇಕಿದೆ ಎನ್ನುತ್ತಾರೆ ಗ್ರಾಮದ ಜನತೆ.
ಸುಮಾರು ವರ್ಷಗಳ ಹಳೆಯ ಕಟ್ಟಡವಾಗಿರುವ ಗೋವಿಂದಗಿರಿ ಗೊಲ್ಲರಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ 150 ಮಕ್ಕಳು ವ್ಯಾಸಂಗ ಮಾಡುತ್ತಿದ್ದು ಶಾಲೆಯ ಮೇಲ್ಚವಾಣಿಯ ಸಿಮೆಂಟ್ ಪುಡಿ ಪುಡಿಯಾಗಿ ಉದುರುತ್ತಿದ್ದೂ ಅಲ್ಲದೆ ಮಳೆ ಬಂದರೆ ಸಂಪೂರ್ಣ ಸೋರುತ್ತಿವೆ ಯಾವ ಸಂದರ್ಭದಲ್ಲಿ ಅನಾಹುತವಾಗುತ್ತೋ ಎನ್ನುವ ಜೀವ ಭಯದಲ್ಲಿ ಮಕ್ಕಳು ಶಿಕ್ಷಕರು ಇದ್ದಾರೆ ಮತ್ತು ಶಾಲಾವರಣದಲ್ಲಿ ಮಕ್ಕಳಿಗೆ ಪಾಠ ನಡೆಸಲಾಗುತ್ತಿದೆ ಈ ದುಸ್ಥಿತಿ ಕುರಿತು ಅಧಿಕಾರಿಗಳ ಗಮನಕ್ಕೆ ಸಹ ತಂದಿರುವುದಾಗಿ ತಿಳಿಸಿ ನೂತನ ಶಾಸಕರಾದ ಡಾ ಶ್ರೀನಿವಾಸ ಆದಷ್ಟು ಗಮನ ಹರಿಸಿ ಶಿಥಿಲವಸ್ಥೆಯ ಕೊಠಡಿಗಳಿಗೆ  ಮುಕ್ತಿ ಕೊಟ್ಟು ನೂತನ ಕೊಠಡಿಗಳ ನಿರ್ಮಾಣಕ್ಕೆ ಮುಂದಾಗಬೇಕಿದೆ ಎನ್ನುತ್ತಾರೆ –  ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಡಿ.ಬೊಮ್ಮಯ್ಯ ಹಾಗೂ ಪದಾಧಿಕಾರಿಗಳಾದ ಮಂಜುನಾಥ, ಪಾಂಡುರಂಗ, ಶಿವಣ್ಣ, ವೆಂಕಟೇಶ, ಹರೀಶ.
ಗೋವಿಂದಗಿರಿ ಗೊಲ್ಲರಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಸಂಪೂರ್ಣ ಹಳೆಯದಾಗಿದ್ದು ಶಿಥಿಲವಸ್ಥೆ ಇರುವುದು ಸತ್ಯವಾಗಿದೆ ಕೊಠಡಿಗಳ ಮೇಲ್ಚವಾಣಿಯಿಂದ ಸಿಮೆಂಟ್ ಪುಡಿಪುಡಿಯಾಗಿ ಬೀಳುತ್ತಿದೆ ಕಾಂಪೌಂಡ್ ಸಂಪೂರ್ಣ ಬಿರುಕು ಬಿಟ್ಟಿದೆ ಅಲ್ಲದೆ ಶೌಚಾಲಯ ಸಹ ಹಾಳಾಗಿದೆ ಇವುಗಳನ್ನು ಪರಿಶೀಲನೆ ನಡೆಸಿ ಮೇಲಧಿಕಾರಿಗಳ ಗಮನಕ್ಕೆ ಸಹ ತಂದಿರುವುದಾಗಿ ತಿಳಿಸುತ್ತಾರೆ – ಸಿಆರ್ ಪಿ  ಶೇಖರಪ್ಪ.