ಶಿಥಿಲಾವಸ್ಥೆಯಲ್ಲಿರುವ ಬಹಮ್ಮನಿ ಮನೆತನದ ಸಮಾಧಿ ದುರಸ್ತಿಗೊಳಿಸಿ: ಅರಳಿ

ಬೀದರ್:ಜು.30: ನಗರದ ಹೋರ ವಲಯದಲ್ಲಿರುವ ಗೊರನಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿಯವರು ಪ್ರಾಚಿನ ಭಾರತದ ಬಹುಮಾನಿ ಸುಲ್ತಾನರ ರಾಜಮನೆತನದ ಮಹಮ್ಮದ ಗವಾನ್ ರವರ ಸಿಥೀಲ ಅವಸ್ಥೆಯಲ್ಲಿದ ಸಮಾಧಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಇದು ಐತಿಹಾಸಿಕ ಪ್ರವಾಸಿಗರ ಸ್ಥಳವಾಗಿದ್ದು ಇದು ಕೂಡಲೇ ಈ ಪ್ರದೇಶ ಸಂಪೂರ್ಣವಾಗಿ ಬದಲಾವಣೆ ಆಗಬೇಕು. ಜಿಲ್ಲೆಯಲ್ಲಿ ಬಹುಮನಿ ಸುಲ್ತಾನರು ಆಳ್ವಿಕೆ ನಡೆಸಿದರು. ಈ ಸ್ಥಳವನ್ನು ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಬೇಕು. .ಸಿ.ಸಿ ರಸ್ತೆ, ನೀರಿನ ವ್ಯವಸ್ಥೆ ಕೂಡಲೇ ಆಗಬೇಕು. ಅವರು ಯಾವುದೇ ಜಾತಿಗೆ ಸೀಮಿತವಾಗಿಲ್ಲ ಅದಕ್ಕಾಗಿ ಇಲ್ಲಿ ಜಾತಿಭೇದ ಭಾವ ಮಾಡದೆ ಈ ಸಮಾದಿ ಸ್ಥಳ ಅಭಿವೃದ್ಧಿ ಮಾಡಬೇಕೆಂದು ಸ್ಥಳೀಯರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ವಕ್ಫ ಅಧಿಕಾರಿ ಮಹ್ಮದ ಲತೀಫ ಜಿಲ್ಲಾ ಪಂಚಾಯತನ ಅಭಿಯಂತರರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.