ಶಿಥಿಲಾವಸ್ಥೆಯಲ್ಲಿನ ಮಾರುಕಟ್ಟೆ ತೆರವು:ವರ್ತಕರ ಪ್ರತಿಭಟನೆ

ಮುದ್ದೇಬಿಹಾಳ:ಜು.7: ಪಟ್ಟಣದ ಮುಖ್ಯಬಜಾರದಲ್ಲಿರುವ ಹಳೆ ತರಕಾರಿ ಮಾರುಕಟ್ಟೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ ಎಂ ಖಿಲಾರಿ ನೇತೃತ್ವದ ಅಧಿಕಾರಿಗಳು ತೆರವುಗೊಳಿಸುವ ಸಂದರ್ಭದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೆ ತರಕಾರಿ ಮಾರುಕಟ್ಟೆ ಕಟ್ಟಡದಲ್ಲಿ ಮಳಿಗೆಗಳ ಮಾಲಿಕರು ವಾಗ್ವಾದ ನಡೆಸಿದರಲ್ಲದೆ ಕೆಲ ಹೊತ್ತು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ಸಂಜೆ ನಡೆಯಿತು.
ಈ ವೇಳೆ ತಾಲೂಕಾ ಯೂಥ್ ಕಾಂಗ್ರೇಸ್ ಘಟಕದ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಗಫೂರಸಾಬ ಮಕಾಂದಾರ, ಅವರು ಮಾತನಾಡಿ ಸಧ್ಯ ಮುಖ್ಯಬಜಾರದಲ್ಲಿರುವ ಹಳೆ ತರಕಾರಿ ಮಾರುಕಟ್ಟೆ ಕಟ್ಟಡವೂ ತುಂಬಾ ಶಿಥಿಲಾಸ್ಥೆಯಲ್ಲಿರುವುದನ್ನು ಮನಗಂಡಿದ್ದೇವೆ ಆದರೆ ಕಟ್ಟಡ ತೆರವುಗೊಳಿಸುವುದರಲ್ಲಿ ನಮ್ಮದೇನು ಅಭ್ಯಂತರವಿಲ್ಲ ಆದರೇ ದಸರಾ ಹಬ್ಬ, ಹಾಗೂ ದೀಪಾವಳಿ ಯಂತಹ ಹಬ್ಬಗಳು ಮುಂಬರುವ ದಿನಗಳಲ್ಲಿ ಬರಲಿವೆ ಸಧ್ಯ ಇನ್ನು ಮೂರು ತಿಂಗಳು ಕಾಲಾವಕಾಶ ಮಳಿಗೆಗಳ ಮಾಲಿಕರಿಗೆ ನೀಡಿದರೇ ಅಲ್ಲಲ್ಲಿ ಸಾಲನೋ ಸೂಲಿ ಮಾಡಿ ಜೀವನ ನಡೆಸುತ್ತಿರುತ್ತೇವೆ ಇಂತಹ ಸಂದರ್ಭದಲ್ಲಿ ಧೀಡೀರನೇ ಕಟ್ಟಡ ತೆರವುಗೊಳಿಸಿದರೇ ಬಾಡಿಗೆ ಪಡೆದ ಮಳಿಗೆ ಮಾಲಿಕರು ಲಕ್ಷಾಂತರ ರೂಪಾಯಿಗಳ ನಷ್ಟದಿಂದ ತೀವೃ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಶಾಸಕ ಸಿ ಎಸ್ ನಾಡಗೌಡ ಅವರಲ್ಲಿ ಎಲ್ಲ ವ್ಯಾಪಾರಸ್ಥರು ಕಾಲಾವಕಾಶ ಕೋರಿ ಮನವಿ ಮಾಡಿಕೊಂಡ ಹಿನ್ನೇಲೆಯಲ್ಲಿ ತಕ್ಷಣದಲ್ಲಿಯೇ ವಿಜಯಪುರ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅವರಿಗೆ ದೂರವಾಣಿ ಮೂಲಕ ಶಾಸಕ ಸಿ ಎಸ್ ನಾಡಗೌಡರು ಮೂರು ತಿಂಗಳು ಕಾಲಾವಕಾಶ ನೀಡಿ ಸಧ್ಯಕ್ಕೆ ಯಾವೂದೇ ತೆರವು ಕಾರ್ಯಾಚರಣೆ ಮಾಡದಂತೆ ಸೂಚಿಸಿದ್ದಾರೆ.
ಆದರೇ ಇಂದು ಪುರಸಭಭೆ ಮುಖ್ಯಾಧಿಕಾರಿ ಕೆ ಎಂ ಖಿಲಾರಿಯವರು ಅಧಿಕಾರಿಗಳೋಂದಿಗೆ ಧೀಡೀರನೆ ಮಾರುಕಟ್ಟೆಗೆ ಬಂದು ತೆರವುಗೊಳಿಸಲು ನಿರ್ಧರಿಸಿ ಎಲ್ಲ ಮಳಿಗೆಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಶಾಸಕ ಸಿ ಎಸ್ ನಾಡಗೌಡ ಅವರಿಗೆ ಅಪಮಾನ ಮಾಡಿದ್ದಾರೆ ಇದರಲ್ಲಿ ಕೆಲ ಪುರಸಭೆ ಸದಸ್ಯರು ಶಾಮಿಲಾಗಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಕೊಡುವ ಉದ್ದೇಶದಿಂದ ತೆರೆ ಮರೆಯಲ್ಲಿ ತೆರವು ಕಾರ್ಯಾಚರಣೆಗೆ ಕುಮ್ಮಕ್ಕು ನೀಡಿದ್ದಾರೆ. ಅದೇನೆ ಆಗಲಿ ಮುಂಬರುವ ಮೂರು ತಿಂಗಳವರಗೆಗೂ ಸಧ್ಯ ಹಳೆ ಮಾರುಕಟ್ಟೆ ತೆರವುಗೊಳಿಸಬಾರದು ಒಂದುವೇಳೆ ನಮ್ಮ ಮನವಿಗೆ ಸ್ಪಂದಿಸದೇ ಇದ್ದರೇ ಪೇಟ್ರೋಲ್ ಮೈಗೆ ಸುರಿದುಕೊಂಡು ವಿಷ ಸೇವಿಸಿ ಆತ್ಮಹತ್ಯರೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಗಣ್ಯ ವ್ಯಾಪಾರಸ್ಥರಾದ ಡಿ ಡಿ ಬಾಗವಾನ, ಅಪ್ಪು ದೇಗಿನಾಳ, ಮಹೇಂದ್ರಕರ ಝೀಂಗಾಡೆ, ಅಡಿವೇಪ್ಪ ಕಡಿ, ನೂರಹಮ್ಮದ ನದಾಫ, ಮೈಬೂಬ ಬಾಗಲಕೋಟ, ಮಲ್ಲಿಕಾರ್ಜುನ ಬಿರಾದಾರ, ಸುಮೀತ್ರಾ ಪಾಟೀಲ, ಸುರೇಶ ಬಾಗೇವಾಡಿ, ಮೈಬೂಬ ನಾಗರಾಳ, ಸೇರಿದಂತೆ ಹಲವರು ಇದ್ದರು.
ಪಟ್ಟಣದ ಹಳೆ ತರಕಾರಿ ಮಾರುಕಟ್ಟೆಯ ಕಟ್ಟಡವೂ ಸಂಪೂರ್ಣ ಶೀಥೀಲಾವಸ್ಥೆಯಲ್ಲಿದೆ ಸಧ್ಯ ಮಳಿಗಾಲ ಪ್ರಾರಂಭಗೊಂಡ ಹಿನ್ನೇಲೆಯಲ್ಲಿ ಯಾವಾ ಬೀಳುತ್ತದೆಯೋ ಯಾರ ಜೀವ ಪಡೆದುಕೊಳ್ಳುತ್ತದೆಯೋ ಎಂಬ ಭಯ ಸಾರ್ವಜನಿಕರದ್ದಾಗಿದೆ.ಹಾಗಂತ ಸಧ್ಯ ಹಳೆ ಮಾರುಟ್ಟಯಲ್ಲಿ ಬಾಡಿಗೆ ಮಳಿಹಗೆ ಪಡೆದು ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ತೊಂದರೆ ಕೊಡಬೇಕು ಎನ್ನುವ ಉದ್ದೇಶವಿಲ್ಲ ಈ ಗಾಗಲೇ 2011ರಿಂದ 2021ರವರೆಗೆ ಸತತವಾಗಿ ಅಲ್ಲಿನ ವ್ಯಾಪಾರಸ್ಥರಿಗೆ ನೋಟಿಸ್ ನೀಡಲಾಗುತ್ತಲೇ ಬಂದಿದೆ. 2017ರಲ್ಲಿ ಅಣಂದಿನ ಪುರಸಭೆ ಆಡಳಿತ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೆ ತರಕಾರಿ ಮಾರುಕಟ್ಟೆ ತೆರವುಗೊಳಿಸಿ ನೂ5ತನ ಕಟ್ಟಡ ನಿರ್ಮಿಸಬೇಕು ಎಂದು ಠಾರಾವು ಪಾಸು ಮಾಡಿ ಅಂಗಕಾರವೂ ಮಾಡಲಾಗಿದೆ. 28 ಅಕ್ಟೋಬರ 2021ರಲ್ಲಿ ಲೋಕೋಪಯೋಗಿ ಇಲಾಖೆ ಕಟ್ಟಡದ ಸಂಪೂರ್ಣ ಪರಿಶೀಲನೆ ನಡೆಸಿ ತರಕಾರಿ ಮಾರುಕಟ್ಟೆ ಒಳಗೆ ವ್ಯಾಪಾರ ಮಾಡುವುದಾಗಲಿ ಅಥವಾ ಸಾರ್ವಜನಿಕರು ಸಂಚಾರ ಮಾಡುವುದಾಗಲಿ ಮಾಡಬಾರದು ಬಳಸಲೊಉ ಯೋಗ್ಯವಿಲ್ಲ ಅಪಾಯಕಾರಿಯಾಗಿದೆ ಎಂದು ಸ್ಪಷ್ಟ ಒರದಿ ನೀಡಿದ್ದಾರೆ.
ಈ ಹಿನ್ನೇಲೆಯಲ್ಲಿ ದಿ, 30ನವ್ಹೇಂಬರ 2020 ರಂದು ವಿಜಯಪುರ ಜಿಲ್ಲಾಧಿಕಾರಿಗಳು ಈ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಿಸಬೇಕು ಎಂದು ಆದೇಶ ನೀಡಿದ್ದರ ಹಿನ್ನೇಲೆಯಲ್ಲಿ ಸಧ್ಯ ಪುರಸಭೆ ಇಲಾಖೆ ಸರಕಾರದ ಹಾಗೂ ಮೇಲಾಧಿಕಾರಿಗಳ ಆದೇಶವನ್ನು ಪಾಲಿಸುತ್ತಿದ್ದೇವೆ ವಿನಃ ನಾವು ಯಾವೂದೇ ವ್ಯಾಪಾರಸ್ಥರಿಗಾಗಲಿ ಅಥವಾಸಾರ್ವಜನಿಕರಿಗಾಗಲಿ ತೊಂದರೆ ಕೊಡಬೇಕು ಎನ್ನುವ ಉದ್ದೇಶ ನಮ್ಮದಲ್ಲ. ಹಾಗಾಗಿಯೇ ಕಳೆದ ಎರಡು ವರ್ಷಗಳಿಂದ ಕಟ್ಟಡದಲ್ಲಿ ಬಾಡಿಗೆ ಇರುವ ವ್ಯಾಪಾರಸ್ಥರಿಗೆ ಬಾಡಿಗೆಯಾಗಲಿ ಟ್ಯಾಕ್ಸ್ ಆಗಲಿ ಪುರಸಭೆಗೆ ಭರಸಿಕೊಂಡಿರುವುದಿಲ್ಲ ಕಾರಣ ಮಾರುಕಟ್ಟೆ ಕಟ್ಟಡದಲ್ಲಿರುವ ವ್ಯಾಪಾರಸ್ಥರು ಸಧ್ಯ ಕಟ್ಟಡ ತೆರವುಗೊಳಿಸಲು ಸಹಕಾರ ನೀಡಬೇಕು ನಿಮ್ಮಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೇ ಸಂಪೂರ್ಣ ಪೋಲಿಸ್ ಬಿಗಿ ಬಂಧೋಭಸ್ತನೊಂದಿಗೆ ಮಾರುಕಟ್ಟೆ ಕಟ್ಟಡ ತೆರವುಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೆ ಎಂ ಖಿಲಾರಿ, ಮುಖ್ಯಾಧಿಕಾರಿ ಪುರಸಭೆ ಮುದ್ದೇಬಿಹಾಳ