ಶಿಥಿಲಗೊಂಡು ಕುಸಿದು ಬೀಳುವ ಸ್ಥಿತಿಯಲ್ಲಿ ದೇವಾಲಯಗಳು

ಕೆ.ಆರ್.ಪೇಟೆ, ನ.08: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಸಾಸಲು ಗ್ರಾಮದಲ್ಲಿ ನೆಲೆಯೂರಿರುವ ಬಯಲುಸೀಮೆಯ ಕುಕ್ಕೆಸುಬ್ರಹ್ಮಣ್ಯ ಎಂದೇ ಹೆಸರು ಗಳಿಸಿರುವ ಶ್ರೀ ಶಂಭುಲಿಂಗೇಶ್ವರ ಮತ್ತು ಶ್ರೀ ಸೋಮೇಶ್ವರ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಮರೀಚಿಕೆಯಾಗಿದ್ದು ತಾಲೂಕು ಆಡಳಿತದ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀಕ್ಷೇತ್ರಕ್ಕೆ ಕಾರ್ತಿಕ ಮಾಸದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತರಿಗೆ ಅಗತ್ಯ ಮೂಲಭೂತ ಸೌಕರ್ಯವಿಲ್ಲದೆ ಪರಿತಪಿಸುವಂತಾಗಿದ್ದು ಸಾವಿರಾರು ಸಂಖ್ಯೆಯ ಭಕ್ತರುಗಳಿಗೆ ಸ್ನಾನಗೃಹ, ಶೌಚಾಲಯ, ಪ್ರಯಾಣಿಕರ ತಂಗುದಾಣ, ಯಾತ್ರಿನಿವಾಸ್, ಸೂಚನಾ ಫಲಕಗಳು, ಮುಂತಾದುವುಗಳ ಕೊರತೆಯಿಂದಾಗಿ ಭಕ್ತರು ತಾಲ್ಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ದೇವಾಲಯದ ಮುಖ್ಯದ್ವಾರ ಹಲವು ವರ್ಷಗಳಿಂದ ಶಿಥಿಲಗೊಂಡು ಕುಸಿದು ಬೀಳುವ ಸ್ಥಿತಿಯಲ್ಲಿ ಇದ್ದರೂ ಮುಜರಾಯಿ ಇಲಾಖೆಯ ಅಧಿಕಾರಿಗಳು ನಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ದೇವಾಲಯ ಮುಂದೆ ಕಸದರಾಶಿ ಗಬ್ಬೆದ್ದು ನಾರುತ್ತಿದೆ,ದೇವಾಲಯದ ಗರ್ಭಗುಡಿಯಲ್ಲಿ ಮಳೆ ನೀರು ಸೋರುತ್ತಿದೆ. ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗಾಗಿ ಶೌಚಾಲಯ ನಿರ್ಮಾಣವಾಗಿ ಮೂರು ವರ್ಷ ಕಳೆದರೂ ಶೌಚಾಲಯದ ಬಾಗಿಲು ತೆರೆಯುವ ಭಾಗ್ಯ ಮಾತ್ರ ಇನ್ನೂ ದೊರಕಿಲ್ಲ.
ವಿವಿಧ ಭಾಗಗಳಿಂದ ಆಗಮಿಸುವ ಭಕ್ತಾದಿಗಳು ಕಲ್ಯಾಣಿಯಲ್ಲಿ ಸ್ನಾನ ಮಾಡಿ ಶಂಭುಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕಜ್ಜಿ. ತುರಿಕೆ ಮುಂತಾದ ಗಾಂiÀiಗಳು, ನಾಗರ ದೋಷಗಳು ನಿವಾರಣೆಯಾಗುತ್ತದೆ ಎಂದು ಪ್ರತೀತಿ ಇದ್ದು, ಸ್ನಾನ ಮಾಡುವ ಕಲ್ಯಾಣಿಯಲ್ಲಿ ಹೂವು, ಪ್ಲಾಸ್ಟಿಕ್, ಕಾಗದ ಸೇರಿದಂತೆ ಹಲವು ವಸ್ತುಗಳು ತೇಲುತ್ತಿದ್ದು ಅಸಹ್ಯ ಹುಟ್ಟಿಸುವಂತಿದೆ. ಮಹಿಳಾ ಭಕ್ತಾದಿಗಳು ಕಲ್ಯಾಣಿಯಲ್ಲಿ ಸ್ನಾನ ಮಾಡಿ ತಮ್ಮ ಬಟ್ಟೆ ಬದಲಾಯಿಸುವುದಕ್ಕೆ ತಗಡಿನ ತಾತ್ಕಾಲಿಕ ಕೊಠಡಿ ನಿರ್ಮಿಸಿದ್ದು, ಮಹಿಳಾ ಭಕ್ತಾದಿಗಳು ಮುಜುಗರದಿಂದಲೇ ತಮ್ಮ ವಸ್ತ್ರಗಳಿಂದಲೇ ಮರೆಮಾಡಿಕೊಂಡು ಬಟ್ಟೆಗಳನ್ನು ಬದಲಾಯಿಸಬೇಕಾದ ಪರಿಸ್ಥಿತಿ ಇದೆ. ಇನ್ನೂ ಅನೇಕ ಜ್ವಲಂತ ಸಮಸ್ಯೆಗಳಿದ್ದರೂ ತಾಲೂಕು ಆಡಳಿತ ಮಾತ್ರ ತಲೆಕೆಡಿಸಿಕೊಳ್ಳದೆ. ಇರುವುದು ಬೇಸರದ ಸಂಗತಿ ಎಂದು ಎಂದು ಗ್ರಾಮಸ್ಥರಾದ ಮಹದೇವ್ ಬೇಸರ ವ್ಯಕ್ತಪಡಿಸುತ್ತಾರೆ.
ಮುಜುರಾಯಿ ಇಲಾಖೆಗೆ ಸೇರಿರುವ ಈ ದೇವಾಲಯಕ್ಕೆ ವಷರ್Àಕ್ಕೆ ಅರ್ಧ ಕೋಟಿಗೂ ಹೆಚ್ಚು ಆದಾಯ ಬರುತ್ತಿದ್ದು ಆ ಹಣ ತಾಲೂಕು ಆಡಳಿತದ ಪಾಲಾಗುತ್ತಿದೆ, ಆದರೆ ಈ ಪುರಾಣ ಪುಣ್ಯಕ್ಷೇತ್ರ ದೇವಾಲಯಗಳ ಅಭಿವೃದ್ಧಿ ಮತ್ತು ಮೂಲಭೂತ ಸೌಕರ್ಯಗಳು ಮಾತ್ರ ಮರಿಚಿಕೆಯಾಗಿದೆ.
ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ವೆಂಕಟೇಶ್, ಕುಮಾರ, ಸ್ವಾಮಿ, ಮಂಜು, ಶಿವರಾಮು, ನಾರಾಯಣ, ಸೇರಿದಂತೆ ಹಲವರು ಹಾಜರಿದ್ದರು.