ಶಿಥಿಲಗೊಂಡಿರುವ ಮಾರುಕಟ್ಟೆ ಕಾಂಪ್ಲೆಕ್ಸ್‍ಗೆ ಕಾಯಕಲ್ಪ ಯಾವಾಗ?

ವಿಶೇಷ ವರದಿ:ಕೃಷ್ಣಾ ಕುಂಬಾರ
ಮುದ್ದೇಬಿಹಾಳ:ನ.8:ಮುದ್ದೇಬಿಹಾಳ ಪಟ್ಟಣ ಅಭಿವೃಧ್ಧಿಯಾವಾಗ ..?ಎಂದು ಪ್ರಶ್ನೇ ಉಧ್ಭವಿಸುವುದು ಬೇರೋಂದು ಊರುಗಳಿಂದ ಇಲ್ಲಿಗೇ ಯಾವುದೋ ಕಾರಣಕ್ಕೆ ಬಂದಾಗ ಇಲ್ಲಿಯ ಸ್ಥಳಿಯರಿಗೆ ಕೇಳುವ ಪ್ರಶ್ನೇ ಇದಾಗಿದೆ. ಹೌದು ಈ ಪ್ರಶ್ನೇ ಸರಿಯಾಗಿಯೇ ಇದೆ ಅದೇನು ಅಂತಿರಾ..? ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ವೃತ್ತದಿಂದ ಮುಖ್ಯ ಬಾಜಾರದ ಮಾರ್ಗವಾಗಿ ಸ್ವಲ್ಪ ದೂರ ಕ್ರಮೀಸಿದರೆ ಗ್ರಾಮ ದೇವತೆ ಕಟ್ಟೆ ಬಳಿ ಇರುವ ಕಾಂಪ್ಲೇಕ್ಸ್ ಎದ್ದು ಕಾಣುತ್ತದೆ. ಇದಕ್ಕೆ ಆಗ ನ್ಯೂ ಮಾರ್ಕೇಟ್ ಎಂದು ಆಗ ಕರೆಯಲಾಗುತ್ತಿತ್ತು.
ಇದು 1957-ರಲ್ಲಿ ಮೊದಲ ಹಂತವಾಗಿ ಮುಂದಿನ ಕಟ್ಟಡ ನಿರ್ಮಿಸಿ ಅದರಲ್ಲಿ ಸುಮಾರು 15 ಮಳಿಗೆಗಳನ್ನು ಪ್ರಾರಂಭಿಸಲಾಯಿತು ನಂತರ 1961ರಲ್ಲಿ ಆಗೀನ ಮುಖ್ಯಮಂತ್ರಿ ಬಿ ಡಿ ಜತ್ತಿಯವರು ಎರಡನೆ ಹಂತದ ಮಾರಕಟ್ಟೆ ಕಟ್ಟಡದಲ್ಲಿ ಒಟ್ಟು 20 ಮಳಿಗೆಗಳನ್ನು ಉದ್ಘಾಟಿಸಿದ್ದರು. ಇದು ಕೇವಲ ತರಕಾರಿ ಮಾರಟ್ಟೆಲ್ಲದೇ ಇಲ್ಲಿ ತಾಲೂಕಿನಿಂದ ರೈತರು ಬೇಳೆದ ಕಾಳು ಕಡಿ, ಬುಸಾರಿ ಮತ್ತು ಇತರೇ ಎಲ್ಲ ತರಹದ ವ್ಯಾಪಾರಗಳು ನಡೆಯತ್ತಿದ್ದವು. ಸದ್ಯ ಕಳೆದ ಮೂರ್ನಾಲ್ಕು ವರ್ಷಗಳಿಂದ ಪಟ್ಟಣ ಬೆಳೇಯುತ್ತಿದೆ ಹಾಗಾಗಿ ಟ್ರಾಫೀಕ್ ಸಮಸ್ಯೆ ನಿಯಂತ್ರಿಸಲು ಜನರಿಗೆ ತೋಂದರೆಯಾಗಬಾರದು ಎಂಬ ಕಾರಣಕ್ಕೆ ಇಂದಿರಾ ಸರ್ಕಲ್ ಬಳಿ ಇರುವ ಹೋಸ ಮಾರುಕಟ್ಟಗೆ ಇದನ್ನು ಸ್ಥಳಾಂತರಿಲಾಯಿತು. ಆದರೂ ಸಹೀತ ಈ ಕಾಂಪ್ಲೇಕ್ಸ್‍ನಲ್ಲಿ ಕೇಲ ಮಳಿಗೆಗಳಲ್ಲೆ ವ್ಯಾಪಾರ ನಡೆಸುತ್ತಿದ್ದಾರೆ ಅದು ಅವರಿಗೆ ಅನಿವಾರ್ಯವೂ ಕೂಡಾ.
ಈಗ ಈ ಕಾಂಪ್ಲೇಕ್ಸ್ ಎಲ್ಲ ಮಳಿಗೆಗಳ ಮೇಲ್ಛಾವಣಿಗಳು ಕುಸಿದು ಶೀಥಿಲ ಗೊಂಡು ಬೀಳುತ್ತಿವೆ, ಈಗಾಗಲೇ ಒಂದೋಂದಾಗಿ ಒಳಗಿನ ಮಳಿಗೆಗಳ ಮೇಲ್ಛಾವಣಿ ಕುಸಿದು ಬೀಳುವ ವೇಳೆ ಅಪಾಯ ತಪ್ಪಿ ಹೊಗಿದೆ ಈ ವಾಣಿಜ್ಯ ಮಳಿಗೆಗಳು ಪುರಸಭೇ ವ್ಯಾಪ್ತಿಗೆ ಬರುವದರಿಂದ ಚುನಾಯಿತ ಸದಸ್ಯರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಅದನ್ನು ಅಭಿವೃದ್ದಿ ಮಾಡಬೇಕಾಗಿರುವುದು ಅವರ ಕರ್ತವ್ಯವಾಗಿದೆ. ಮೋದಲೆ ಹೇಳಿದಂತೆ ಮುದ್ದೇಬಿಹಾಳ ಪಟ್ಟಣ ದಿನದಿಂದ ದಿನಕ್ಕೇ ಅತಿ ವೇಗವಾಗಿ ಬೇಳೆಯತ್ತಿದೆ ಇದರಿಂದಾಗಿ ತಮ್ಮ ವ್ಯವಹಾರಕ್ಕಾಗಿ ಜನರು ಇಲ್ಲಗೆ ಬರುವುದು ಹೆಚ್ಚಾಗುತ್ತಿದೆ. ಮೊದಲೇ ಇಕ್ಕಟ್ಟಾಗಿದೆ ರಸ್ತೆಯೂ ಕೂಡ ಅಗಲಿಕರಣಗೊಂಡಿಲ್ಲ ಯಾವೋಂದು ಅಭಿವೃಧ್ದಿಯೂ ಈ ಬಾಗದಲ್ಲಿ ನಡೆದಿಲ್ಲ. ಮುಖ್ಯವಾಗಿ ಈ ಕಾಂಪ್ಲೇಕ್ಸ ಪಟ್ಟಣದ ಮಧ್ಯಬಾಗದಲ್ಲದೆ ಇಗಲೋ ಆಗಲೋ ಬೀಳುವಂತಾಗಿದೆ ಸದ್ಯ ಈ ಕಾಂಪ್ಲೇಕ್ಸ್ ಒಳಗೀರುವ ಮಳಿಗೆಗಳು ಖಾಲಿ ಇರುವದರಿಂದ ಹಂದಿ,ನಾಯಿಗಳ ವಾಸಸ್ಥಳವಾಗಿ ಬಿಟ್ಟಿದೆ.
2012-13ರಂದು ಆಗೀನ ಪುರಸಭೇ ಚುನಾಯಿತ ಸದಸ್ಯರು ಮತ್ತು ಅಧೀಕಾರಿಗಳು ಈ ಕಾಂಪ್ಲೇಕ್ಸ್‍ನ್ನು ಸಂಪೂರ್ಣ ಬುಡ ಸಮೇತ ಡೆಮಾಲೀಷ್ ಮಾಡಿ ಮತ್ತೆ ಹೊಸ ಕಟ್ಟಡದಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಬೇಕೆಂದು ತಿರ್ಮಾನಿಸಿ ವಿಶೇಷ ಅನುದಾನದಲ್ಲಿ ಹಣ ಬಿಡುಗಡೆಗಾಗಿ ಮೇಲಾಧಿಕಾರಿಗಳ ಮನವಿ ಕೂಡ ಸಲ್ಲಿಸಲಾಗಿತ್ತು ಎಂದು ಆಂದಿನ ಸದಸ್ಯರಿಂದ ತಿಳಿದುಬಂದಿದೆ. ಇಗಲಂತೂ ಈ ಕಾಂಪ್ಲೇಕ್ಸ್ ಸಂಪೂರ್ಣ ದುಸ್ಥಿತಿಗೆ ಬಂದಿಳಿದೆ ಯಾವಾಗ..? ಬೀಳುತ್ತದೆ ಎನೇನು ಅನಾಹುತಗಳು ನಡೆಯುತ್ತವೆ ಎನ್ನುವುದು ಹೇಳಲು ಸಾಧ್ಯವಿಲ್ಲದಂತಾಗಿದೆ. ಅದೇನೇ ಆಗಲಿ ಇಗಲಾದರೂ ಅಧಿಕಾರಿಗಳು ಇದನ್ನು ಪುನಶ್ಛೇನಗೋಳಿಸಲು ಮತ್ತು ಅಭಿವೃಧ್ಧಿಗೆ ಚುನಾಯಿತ ಜನಪ್ರತಿನಿಧಿಗಳು ಪುರಸಭೇ ಸದಸ್ಯರು ಶ್ರಮಿಸಬೇಕಿದೆ.
ಆದರೇ ಚುನಾಯಿತಗೊಂಡು ಒಂದು ವರ್ಷಗಳ ಕಾಲ ಗತಿಸಿದರೂ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆಯ ಆಡಳಿತ ಮಂಡಳಿ ರಚನೆಗೊಳ್ಳದ ಕಾರಣ ಪುರಸಭೆಯ ಯಾವ ಕಾರ್ಯವೂ ಸಮರ್ಪಕವಾಗಿ ನಡೆಯದೇ ಅಭಿವೃದ್ಧಿಯೂ ಕುಂಟಿತಗೊಂಡಿವೆ. ಇಂತಹ ಸಂದರ್ಭದಲ್ಲಿ ಸ್ಥಳಿಯ ಶಾಸಕ ಎ ಎಸ್ ಪಾಟೀಲ(ನಡಹಳ್ಳಿ)ಯವರು ಮತಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ನಂತರ ಸಧ್ಯ ಮುಂದಿನ ಐದು ವರ್ಷಗಳಲ್ಲಿ ಮುದ್ದೇಬಿಹಾಳ ಪಟ್ಟಣವನ್ನು ಸಂಪೂರ್ಣ ಅಭಿವೃದ್ಧಿಗೊಳಿಸುವುದಾಗಿ ಮಂತ್ರ ಜಪಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ತಮ್ಮದೇ ಸರಕಾರವಿರುವುದರಿಂದ ತಾಲೂಕು ಸೇರಿದಂತೆ ಪಟ್ಟಣದ ಅಭಿವೃದ್ಧಿಗೆ ಶ್ರಮಿಬೇಕು ಎಂದು ಸಾರ್ವಜನಿಕರ ಒತ್ತಾಯ ಹೆಚ್ಚುತ್ತಿದೆ.


ಈಗಾಗಲೇ ಶೀಥಿಲಾವಸ್ಥೆಯಲ್ಲಿರುವ ಹಳೆ ಮಾರ್ಕೇಟ ಹಾಗೂ ತೀರಾ ಹಳೆಯದಾದ ಉರ್ದು ಶಾಲೆ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸುವ ಮೂಲಕ ವಿಜಯಪುರ ನಗರದಲ್ಲಿರುವ ಶಾಸ್ತ್ರಿ ಮಾರ್ಕೇಟ ಹಾಗೆ ಸುಸಜ್ಜಿತ ಬಹು ಮಳಿಗೆಗಳ ಕಟ್ಟಡ ನಿರ್ಮಿಸಿದರೇ ಸಾರ್ವಜನಿಕರ ಬಹುದಿನದ ಬೇಡಿಕೆ ಇಡೇರುವುದರ ಜೊತೆಗೆ ಪುರಸಭೆಗೆ ಆದಾಯ ಹೆಚ್ಚಿಸಿದಂತಾಗುತ್ತದೆ.
*ಕಾಮರಾಜ ಬಿರಾದಾರ ಪುರಸಭೆ ಮಾಜಿ ಸದಸ್ಯ ಮುದ್ದೇಬಿಹಾಳ