ಶಿಡೇನೂರ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ

(ಸಂಜೆವಾಣಿ ವಾರ್ತೆ)
ಬ್ಯಾಡಗಿ,ಜು28 : ತಾಲೂಕಿನ ಶಿಡೇನೂರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಸಾಬೀರಾಬಿ ವಜೀರಸಾಬ್ ಅರಳಿಕಟ್ಟಿ ಮತ್ತು ಉಪಾಧ್ಯಕ್ಷರಾಗಿ ಇಂದಿರಾ ವೀರೇಶ ಗಜ್ಜರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ದೊಡ್ದಬಸವರಾಜ ತಿಳಿಸಿದರು.
ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ನಡೆದ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಬೀರಾಬಿ ವಜೀರಸಾಬ್ ಅರಳಿಕಟ್ಟಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದಿರಾ ವೀರೇಶ ಗಜ್ಜರಿ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಹನುಮಂತಪ್ಪ ಲಮಾಣಿ, ಗ್ರಾಪಂ ಸದಸ್ಯರಾದ ಈರನಗೌಡ ತೆವರಿ, ಯುವರಾಜ ದೊಡ್ಡಮನಿ, ಮಲ್ಲಿಕಾರ್ಜುನ ಕೊಪ್ಪದ, ಮುತ್ತವ್ವ ದಂಡೇರ, ಗಂಗವ್ವ ಓಲೇಕಾರ, ಸುಶೀಲಾ ಲಮಾಣಿ, ವಿನಯ ಬಿದರಿ, ಜಯಪ್ಪ ನಂದಿಹಳ್ಳಿ, ಅಶ್ವಿನಿ ಕಿತ್ತೂರ, ಬೀಬಿಆಯಿಷಾ ಬ್ಯಾಡಗಿ, ಮಲ್ಲವ್ವ ಬಡಿಗೇರ, ಪರಮೇಶಪ್ಪ ಕೋಡಿಗದ್ದಿ, ಮುಖಂಡರಾದ ಮಂಜುನಾಥ ಓಲೇಕಾರ, ದೇವರಾಜ ಓಲೇಕಾರ, ಮಂಜುನಾಥ ಓಲೇಕಾರ, ಫಕ್ಕೀರಪ್ಪ ದೊಡ್ದಬಸಪ್ಪನವರ, ಅಬ್ದುಲಸತ್ತಾರ್ ಅರಳಿಕಟ್ಟಿ, ಮಂಜುನಾಥ ಕಿತ್ತೂರ, ಪಿಡಿಓ ಶಾರದಾ ಕುದರಿ, ಬಸನಗೌಡ್ರ ಪಾಟೀಲ, ಶಂಕರ ಮಠದ ಸೇರಿದಂತೆ ಗ್ರಾಪಂ ಸಿಬ್ಬಂದಿ ವರ್ಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.