ಶಿಡಿಗಿನಮೊಳ ಸೊಸೈಟಿ ಅಧ್ಯಕ್ಷರಾಗಿ ಬಸಲಿಂಗನಗೌಡ ಆಯ್ಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.29: ತಾಲೂಕಿನ ಶಿಡಗಿನಮೊಳ ಗ್ರಾಮದ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಸೊಸೈಟಿಯ)ಆಡಳಿತ ಮಂಡಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿ.ಬಸಲಿಂಗನಗೌಡ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ  ಬಿ. ಹೋಟೆಲ್ ಸೋಮಶೇಖರ ಹಾಗೂ ನಿರ್ದೇಶಕರುಗಳಾಗಿ ಬಿ ನವೀನ್ ಕುಮಾರ್ ರೆಡ್ಡಿ , ಸಿ. ರಾಮಯ್ಯ, ಕೆ.ಎಂ. ವಿರೂಪಾಕ್ಷಯ್ಶಾ, ಎಂ ಹುಚ್ಚೆಲ್ಲಪ್ಪ, ಜಿ. ಹಾವಳಗಿ ಬಸವರಾಜ, ಬಿ.ಕಲ್ಯಾಣಿ ಸುರೇಶ್ ರೆಡ್ಡಿ,ಕೆ.ಟಿ. ಸುಧಾನಾಗಪ್ಪ, ಮೀನಳ್ಳಿ ಶ್ರೀರಾಮ್, ಸೀನಪ್ಪತಳವಾರ್, ಮತ್ತು ಮೀಸಾಲ್ ನಾಗರಾಜ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಸಂಘದ  ಚುನಾವಣಾಧಿಕಾರಿ  ಜೆ. ನಾಗರಾಜ್ ತಿಳಿಸಿದ್ದಾರೆ.