(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.30: ಸುಜಾತಮ್ಮ ಬಯಲಾಟ ಕಲಾ ಟ್ರಸ್ಟ್ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಡಿ ಸಾಂಸ್ಕೃತಿಕ ಕಲಾ ಉತ್ಸವ ಮಾ.26 ಸಂಜೆ ತಾಲೂಕನ ಶಿಡಗಿನಮೊಳ ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜರುಗಿತು.
ಕಾರ್ಯಕ್ರಮಕ್ಕೆ ಉದ್ಘಾಟನೆಯನ್ನು ಸ್ಥಳೀಯ ಗ್ರಾಮಪಂಚಾಯ್ತಿ ಅಧ್ಯಕ್ಷ ಪಿ.ರುದ್ರಯ್ಯ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು, ವೇದಿಕೆಯಲ್ಲಿ ಮಾಹಾನಂದಿ ತಿಪ್ಪಯ್ಯ, ರತ್ನಮ್ಮ ಲಕ್ಷ್ಮಣ, ಟಿ.ಸೀನಪ್ಪ, ಚನ್ನಬಸವನಗೌಡ, ಜಿ.ಎಂ.ಮಹೇಶ್ವರ ಸ್ವಾಮಿ ಗ್ರಾ.ಪಂ. ಸದಸ್ಯರುಗಳು, ಎಂ.ಪಿ.ಗಾದಿಲಿಂಗಪ್ಪನ ಗೌಡ, ಸದಸ್ಯರು ಕೆ.ವೀರಾಪುರ ಮತ್ತು ಟ್ರಸ್ಟ್ ಅಧ್ಯಕ್ಷೆ ಸುಜಾತಮ್ಮ ಮೊದಲಾದವರು ಇದ್ದರು.
ಜಿ.ಎಂ.ಮಹೇಶ್ವರ ಸ್ವಾಮಿ, ನಿವೃತ್ತ ಗುರುಗಳು ಶಿಡಿಗಿನಮೊಳ ಇವರಿಂದ ಸಂಗೀತ ಕಾರ್ಯಕ್ರಮ, ರಂಗಗೀತೆ, ಶಾಸ್ತ್ರಿಯ ಸಂಗೀತ ಸಿ.ಎಂ. ಸಾರಂಗಮಠ ಮತ್ತು ಎನ್.ಲೋಕೇಶ್ ಶಿಡಿಗಿನಮೊಳ ಇವರಿಂದ ನೇರವೇರಿತು. ಕೊಳಲು ವಾದನ ಗೋವರ್ಧನರೆಡ್ಡಿ ಮತ್ತು ಕೆ.ಸಿ.ಸುಂಕಣ್ಣ (ಅಭಿಷೇಕ್ ಮತ್ತು ಕಲಾ ತಂಡದವರಿಂದ) ಸಮೂಹ ನೃತ್ಯ ಪ್ರದರ್ಶನ ನಡೆಯಿತು. ಕನ್ನಡ-ನಾಡು-ನುಡಿಯ ಬಗ್ಗೆ ಎಂ.ಗಿರಿಜಾಪತಿ, ಸಹ ಶಿಕ್ಷಕರು, ಜಿಲ್ಲಾ ಪರಿಷತ್ ಪ್ರೌಢಶಾಲೆ, ಡಿ.ಹಿರೇಹಾಳ್ ಇವರು ವಿಚಾರಣ ಸಂಕೀರಣದಲ್ಲಿ ಮಾತನಾಡಿದರು.
ಕನ್ನಡ ಗಡಿ ವಿಚಾರ ಕುರಿತು ಸಂವಾದ ಓಬಳೇಶ್ ಇವರ ನೇರವೇರಿಸಿದರು, ಸುಜಾತಮ್ಮ ಬಯಲಾಟ ರಂಗಗೀತೆಗಳನ್ನು ಹಾಡಿದರು,
ಕೊನೆಯಲ್ಲಿ ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನ ನಡೆಯಿತು, ಬಾಲಕೃಷ್ಣನ ಪಾತ್ರದಲ್ಲಿ ಕುಮಾರಿ ದೀಪ್ತಿ ಮೀನಹಳ್ಳಿ, ಅಭಿಮನ್ಯು ಪಾತ್ರದಲ್ಲಿ .ಜಿ.ತಿಪ್ಪೇಸ್ವಾಮಿ ಯಾಳ್ಪಿ, ಧರ್ಮರಾಯ ಪಾತ್ರದಲ್ಲಿ ಹನುಮಂತ ಶಿಡಿಗಿನಮೊಳೆ, ಸುಭದ್ರ ಪಾತ್ರದಲ್ಲಿ ರತ್ನಮ್ಮ ವಿರುಪಾಪುರ, ಸಾರಥಿ : ತಿಪ್ಪೇರುದ್ರಪ್ಪ, ಯಾಳ್ಪಿ, ಹಾರ್ಮೋನಿಯಂ ಚಿಕ್ಕಣ್ಣ ತೊಲಮಾಮಿಡಿ, ವೈ.ರಂಗಾರೆಡ್ಡಿ ಕೆ.ವೀರಾಪುರ, ಪಾಮಣ್ಣ ಮೀನಹಳ್ಳಿ, ಎಸ್.ವಿರೇಶ್, ತಬಲ, ಬಳ್ಳಾರಿ ಮದ್ದಲಿ ಹೆಚ್.ಸಿದ್ದಪ್ಪ ಶಿಡಿಗಿನಮೊಳ ಇವರು ನೇರವೇರಿಸಿಕೊಟ್ಟರು.
ಸಹಕಾರ ಗ್ರಾಮದ ಸಮಸ್ತ ಕಲಾಸಕ್ತರು ಹಾಗೂ ನಾಗರೀಕರು, ಸಮಸ್ತ ಸಿಬ್ಬಂದಿ ಹಾಗೇಯೇ, ಕಾರ್ಯಕ್ರಮದ ನಿರೂಪಣೆಯನ್ನು ಎನ್.ಸಿದ್ದಲಿಂಗೇಶ್ವರ, ಸಹ ಶಿಕ್ಷಕರು ಶಿಡಿಗಿನಮೊಳ ಇವರು ನೇರವೇರಿಸಿದರು.
ಪ್ರಾರ್ಥನೆ ಹೆಚ್.ಶಿವರಾಜ, ಹೆಚ್.ಮನೋಜ್ ಮತ್ತು ಗುರು ಇವರು ನಿರ್ವಹಿಸಿದರು.
ಟ್ರಸ್ಟ್ ನ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಸ್ವಾಗತಿಸಿದರು. ಬಿ.ಸುರೇಶ್‍ಕುಮಾರ್ ವಂದನಾರ್ಪಣೆ ಮಾಡಿದರು.