ಶಿಖರ ಮಠ ನಿವೃತ್ತಿ-ಇಟಗಿ ಬೆಂಬಲ ಘೋಷಣೆ

ರಾಯಚೂರು ನ ೯:-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನ ಸ್ಪರ್ಧೆಯಿಂದ ಮಲ್ಲಿಕಾರ್ಜುನ ಶಿಖರ ಮಠ ಅವರು ಮನೊ ರಾಜಿ ನಿವೃತ್ತಿ ಘೋಷಿಸಿದ್ದಾರೆ.
ಇದೆ ತಿಂಗಳು ದಿ ೨೧ ರಂದು ನಡೆಯುವ ಚುನಾವಣೆಯಲ್ಲಿ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಅವರ ನೇತೃತ್ವದಲ್ಲಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಭೀಮನಗೌಡ ಇಟಗಿ ಅವರಿಗೆ ಬೆಂಬಲಿಸಲು ನಿರ್ಧರಿಸಿದ್ದಾರೆ. ನಾನು ಚುನಾವಣೆ ಸ್ಪರ್ಧೆಯ ಸಂದರ್ಭದಲ್ಲಿ ತಾವು ತೋರಿದ ಪ್ರೀತಿ ಮತ್ತು ಅಭಿಮಾನವನ್ನು ಸ್ಮರಿಸಿದ ಅವರು ನ ೨೧ ರಂದು ನಡೆಯುವ ಚುನಾವಣೆಯಲ್ಲಿ ಭೀಮನಗೌಡ ಇಟಗಿ ಅವರಿಗೆ ಮತ ನೀಡುವಂತೆ ಕೋರಿದ್ದಾರೆ.
ಮಲ್ಲಿಕಾರ್ಜುನ ಶಿಖರ ಮಠ ಅವರ ನಿವೃತ್ತಿ ಘೋಷಣೆಯಿಂದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ.ಮಲ್ಲಿಕಾರ್ಜುನ ಶಿಖರ ಮಠ ಅವರು ಯಾರಿಗೆ ಬೆಂಬಲಿಸುತ್ತಾರೆ ಎಂಬ ಕುತೂಹಲ ತೀವ್ರವಾಗಿತ್ತು. ನಿನ್ನೆ ಅವರು ತಮ್ಮ ನಿವೃತ್ತಿಯ ಅಧಿಕೃತ ಘೋಷಣೆ ಹಾಗೂ ಭೀಮನಗೌಡ ಅವರಿಗೆ ಬೆಂಬಲಿಸುವ ನಿರ್ಧಾರದಿಂದ ಚಿತ್ರ ಸ್ಪಷ್ಟವಾಗಿದೆ.