ಶಿಕ್ಷಣ ಹಣ ದೋಚುವ ಕಲಿಗಾಲ

ಕೋಲಾರ,ಮೇ.೨೬:ಅನದಿಕೃತ ಶಾಲೆಗಳ ವಿರುದ್ದ ಪೋಷಕರಲ್ಲಿ ಕರಪತ್ರದ ಮೂಲಕ ಜಾಗೃತಿ ಮೂಡಿಸ ಬೇಕು. ಖಾಸಗಿ ಶಾಲೆಗಳ ಡೋನೆಷನ್ ಹಾವಳಿಗೆ ಕಡಿವಾಣ ಹಾಕಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿಪಡಿಸಿ ಹಾಜರಾತಿ ಹೆಚ್ಚಳ ಮಾಡಬೇಕೆಂದು ರೈತ ಸಂಘದಿಂದ ಶಿಕ್ಷಣ ಇಲಾಖೆ ಇ ಒ ರಾಮಚಾರಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಇದು ಕಲಿಯುವ ಕಾಲವಲ್ಲ ಇದು ಕಲಿಗಾಲ ಎಲ್.ಕೆಜಿ- ಯುಕೆಜಿ ಸೀಟು ಗಿಟ್ಟಿಸಲು ಸಾವಿರಾರು ರೂಪಾಯಿ ಕೊಡಬೇಕಾದ ಪರಿಸ್ಥಿತಿಯಲ್ಲಿ ಮದ್ಯಮ ವರ್ಗದ ಶಿಕ್ಷಣ ಎಂದು ದುಬಾರಿ ಆಗಿ ಬಡವರ ಕನಸು ಕನಸಾಗಿಯೇ ಉಳಿಯುತ್ತಿದೆ, ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಅಡವಿಟ್ಟು ಜನಸಾಮಾನ್ಯರ ತೆರಿಗೆ ಹಣದಲ್ಲಿ ಸಂಬಳ ಪಡೆಯುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳು ಬ್ರೀಟಿಷರ ಕಾಲದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಗುಲಾಮರಾಗಿದ್ದಾರೆಂದು ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪುಟ್ಟಮಕ್ಕಳಿಗೆ ಶಿಕ್ಷಣ ನೀಡುವ ಹೆಸರಿನಲ್ಲಿ ಬೇಬಿ ನರ್ಸರಿ ಎಲ್.ಕೆಜಿ- ಯುಕೆಜಿ ಸೀಟು ಪಡೆಯಲು ೫೦ ಸಾವಿರ ಮುಂಗಡ ನೀಡಬೇಕೆಂದರೆ ಇನ್ನೂ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಕಲಿಯುವ ಮಕ್ಕಳಿಗೆ ಎಷ್ಟು ಲಕ್ಷ ನೀಡಬೇಕು ಎಂದು ಊಹೆ ಮಾಡಿಕೊಳ್ಳಿ ಎಂದು ಉಚಿತ ಭಾಗ್ಯ ಪಡೆಯುವ ಜನರಲ್ಲಿ ಪ್ರಶ್ನೆ ಮಾಡಿದರು.
ಅಧಿಕಾರಕ್ಕೆ ಬರುವ ಸರ್ಕಾರಗಳು ಶಿಕ್ಷಣ ಆರೋಗ್ಯವನ್ನು ಬಿಟ್ಟು ಯಾವುದನ್ನು ಉಚಿತವಾಗಿ ನೀಡಬಾರದು ಜೊತೆಗೆ ಸರ್ಕಾರಿ ನೌಕರಿ ಪಡೆಯಬೇಕಾದರೆ ಹಾಗೂ ರಾಜಕಾರಣಿಯಾಗಬೇಕಾದರೆ ಕಡ್ಡಾಯವಾಗಿ ಅವರ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಕಾನೂನು ಜಾರಿ ಆಗಬೇಕೆಂದು ಅಗ್ರಹಿಸಿದರು.
೨೪ ಗಂಟೆಯಲ್ಲಿ ಅನದೀಕೃತ ಶಾಲೆಗಳ ಬಗ್ಗೆ ಪತ್ರಿಕಾ ಪ್ರಕಟಣೆ ನೀಡುವ ಜೊತೆಗೆ ಖಾಸಗಿ ಶಾಲೆಗಳ ಡೋನೆಷನ್ ಹಾವಳಿ ನಿಯಂತ್ರಣ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ಕರಪತ್ರದ ಮುಖಾಂತರ ಪೋಷಕರಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತೇವೆಂದು ಜಾಗೃತಿ ಮೂಡಿಸಿ ಹಾಜರಾತಿ ಹೆಚ್ಚಳ ಮಾಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿಕ್ಷಣ ಇಲಾಖೆಯ ಇ.ಒ ರಾಮಚಾರಿರವರು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಹೋರಾಟದಲ್ಲಿ, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌq, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಲ್ಲಪ್ಪ, ಹರೀಶ್, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ನರಸಿಂಹಯ್ಯ, ಗಿರೀಶ್, ಚಂದ್ರಪ್ಪ, ತೆರ್‍ನಹಳ್ಳಿ ಆಂಜಿನಪ್ಪ, ಮಾಸ್ತಿ ವೆಂಕಟೇಶ್, ರಾಮಸಾಗರ ವೇಣು, ಸುರೇಶ್‌ಬಾಬು, ಹಸಿರುಸೇನೆ ಜಿಲ್ಲಾದ್ಯಕ್ಷ ಕಿರಣ್, ಪಾರುಕ್‌ಪಾಷ, ಬಂಗಾರಿ ಮಂಜು, ಸುನಿಲ್‌ಕುಮಾರ್, ರಾಜೇಶ್, ಭಾಸ್ಕರ್, ಗುರುಮೂರ್ತಿ, ವಿಜಯಪಾಲ್, ಕದರಿನತ್ತ ಅಪ್ಪೋಜಿರಾವ್, ಮುಂತಾದವರಿದ್ದರು.